ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ; ಬಾಲಕ ವಶಕ್ಕೆ

7

ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ; ಬಾಲಕ ವಶಕ್ಕೆ

Published:
Updated:

ಬೆಂಗಳೂರು: ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಆರೋಪದಡಿ 16 ವರ್ಷದ ಬಾಲಕನನ್ನು ಮಡಿವಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೆಪ್ಟೆಂಬರ್ 6ರಂದು ನಡೆದಿದ್ದ ಘಟನೆ ಸಂಬಂಧ 25 ವರ್ಷದ ಮಹಿಳೆ ದೂರು ನೀಡಿದ್ದರು. ಬಾಲಕನನ್ನು ವಶಕ್ಕೆ ‍ಪಡೆದು ಬಾಲಮಂದಿರಕ್ಕೆ ಬಿಟ್ಟು ಬಂದಿದ್ದೇವೆ ಎಂದು ‍ಪೊಲೀಸರು ತಿಳಿಸಿದರು.

ದೂರುದಾರ ಮಹಿಳೆ ವಾಸವಿರುವ ಮನೆಯ ಸಮೀಪದಲ್ಲೇ ಪೋಷಕರ ಜತೆ ಬಾಲಕ ವಾಸವಿದ್ದಾನೆ. ಕಾರ್ಯಕ್ರಮವೊಂದರ ಪ್ರಯುಕ್ತ ಮಹಿಳೆಯು ಮಧ್ಯಾಹ್ನ ಮನೆಯ ಎದುರು ರಂಗೋಲಿ ಹಾಕುತ್ತಿದ್ದರು. ಅದನ್ನು ಗಮನಿಸಿದ್ದ ಬಾಲಕ, ಮಹಿಳೆಗೆ ಕಾಣುವಂತೆ ಸಮೀಪದಲ್ಲೇ ನಿಂತುಕೊಂಡಿದ್ದ. ಪ್ಯಾಂಟ್ ಬಿಚ್ಚಿ ಮರ್ಮಾಂಗ ತೋರಿಸಿ ಅಸಭ್ಯವಾಗಿ ಸನ್ನೆ ಮಾಡುತ್ತಿದ್ದ. ಗಾಬರಿಗೊಂಡ ಮಹಿಳೆ, ಮನೆಯವರಿಗೆ ವಿಷಯ ತಿಳಿಸಿದ್ದರು. ನಂತರವೇ ಠಾಣೆಗೆ ಬಂದು ದೂರು ನೀಡಿದ್ದರು ಎಂದರು.

‘ಬಾಲಕ, ನಿತ್ಯವೂ ಮನೆ ಎದುರು ನಿಂತು ಧೂಮಪಾನ ಹಾಗೂ ಮಧ್ಯಪಾನ ಮಾಡುತ್ತಿದ್ದ. ಅದನ್ನು ಸಹಿಸಿಕೊಂಡಿದ್ದೆ. ಈಗ ಆತ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ವಿವರಿಸಿದರು.

‘ಬಾಲಕ, ತಪ್ಪೊಪ್ಪಿಕೊಂಡಿದ್ದಾನೆ. ಆತನ ಪೋಷಕರು ಸಹ ಘಟನೆ ಬಗ್ಗೆ ಹೇಳಿಕೆ ನೀಡಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !