ಬೆಂಗಳೂರು: ‘ಮಕ್ಕಳಷ್ಟೇ ಬೆಳೆಯುತ್ತಿದ್ದಾರೆ ಎಂದು ನಾವು ಭಾವಿಸಿರುತ್ತೇವೆ. ಮಕ್ಕಳೊಂದಿಗೆ ಪಾಲಕರೂ ಬೆಳೆಯುತ್ತಿರುತ್ತಾರೆ’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಹೇಳಿದರು.

ವಿದ್ಯಾಸಂಸ್ಕೃತಿ ಶಾಲೆಯು ‘ಪ್ರಜಾವಾಣಿ’ಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಾಲಕರಿಗೊಂದು ಕಿವಿಮಾತು ಮೂರು ದಿನಗಳ ವಿಶೇಷ ಕಾರ್ಯಕ್ರಮದಲ್ಲಿ ಅವರು ಬುಧವಾರ ಮಾತನಾಡಿದರು.

ಮಗು ಗಾಳಿಪಟದಂತೆ. ಎಲ್ಲಿಯವರೆಗೆ ಸೂತ್ರ ನಿಮ್ಮ ಕೈಯಲ್ಲಿರುತ್ತದೆಯೋ ಅಲ್ಲಿವರೆಗೆ ಮಾತ್ರ ಗಾಳಿಪಟ ಚಂದ ಕಾಣುತ್ತದೆ. ಒಂದು ಬಾರಿ ಸೂತ್ರ ಕಡಿದು ಹೋದರೆ ಎಲ್ಲಿಗೆ ಹಾರಿಹೋಗುತ್ತದೆ ಎಂಬುದು ಗಾಳಿಪಟಕ್ಕೂ ಗೊತ್ತಾಗುವುದಿಲ್ಲ. ಹಾಗಾಗಿ ಪಟವು ಸ್ವತಂತ್ರವಾಗಿ ಇರುವಂತೆ ಕಂಡರೂ ಸೂತ್ರದ ದಾರ ಮಾತ್ರ ಗಟ್ಟಿ ಇರಬೇಕು ಎಂದು ತಿಳಿಸಿದರು.

ಪುಸ್ತಕದಲ್ಲಿರುವ ಅಡುಗೆಯ ವಿವರವನ್ನು ನೋಡಿಕೊಂಡು ಅಡುಗೆ ಮಾಡಬಹುದು. ಆದರೆ, ಯಾವುದೇ ಪುಸ್ತಕವನ್ನು ಓದಿ ಮಕ್ಕಳನ್ನು ಬೆಳೆಸಲು ಸಾಧ್ಯವಿಲ್ಲ. ಪ್ರತಿ ಮಗುವೂ ಭಿನ್ನ. ಬೆಳೆಸುವ ಕ್ರಮವೂ ಭಿನ್ನ. ಒಂದು ದಂಪತಿಗೆ ಎರಡು ಮಕ್ಕಳಿದ್ದರೆ ಇಬ್ಬರನ್ನೂ ಒಂದೇ ರೀತಿ ಬೆಳೆಸಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಮಗುವನ್ನು ತಿದ್ದಲು ಹೋಗಬೇಕಿದ್ದರೆ ಮೊದಲು ಪಾಲಕರು ತಿದ್ದಿಕೊಳ್ಳಬೇಕು. ಸಿಗರೇಟ್ ಸೇದಬಾರದು. ಅದು ಒಳ್ಳೆಯದಲ್ಲ ಎಂದು ಮಗುವಿಗೆ ಹೇಳಬೇಕಿದ್ದರೆ ತಂದೆ ಸಿಗರೇಟ್ ಸೇದಬಾರದು. ನಿಮ್ಮ ಮಾತುಗಳನ್ನು ಮಗು ಕೇಳುವುದಿಲ್ಲ. ನೀವೇನು ಮಾಡುತ್ತೀರೆಂದು ಗಮನಿಸಿಕೊಂಡು ಅನುಸರಿಸುತ್ತದೆ. ಮಗು ಸುಳ್ಳು ಹೇಳಬಾರದು ಎಂದಾದರೆ ಹೆತ್ತವರು ಸುಳ್ಳು ಹೇಳಬಾರದು ಎಂದು ತಿಳಿಸಿದರು.

‘ಪಾಲಕತ್ವ ಎಂದರೆ ಕಲಾಕೃತಿಗಳನ್ನು ಕೆತ್ತುವ ಬಡಗಿಯ ಕೆಲಸವಲ್ಲ. ಬಡಗಿಗೆ ತಾನು ಏನು ಕೆತ್ತುತ್ತಿದ್ದೇನೆ ಎಂಬ ಕಲ್ಪನೆ ಇರುತ್ತದೆ. ಆದರೆ, ಮಗು ಬೆಳೆದು ಏನಾಗಲಿದೆ ಎಂಬುದು ನಮಗೆ ಗೊತ್ತಿರುವುದಿಲ್ಲ. ನಿಮ್ಮ ಕಲ್ಪನೆಯ ರೀತಿಯಲ್ಲಿ ಮಗು ಬೆಳೆಯುವುದಿಲ್ಲ. ಪಾಲಕತ್ವ ಎಂದರೆ ತೋಟ ಬೆಳೆಸಿದಂತೆ. ನೀವು ನೀರು, ಗೊಬ್ಬರ ಹಾಕಿ ಒಳ್ಳೆಯ ಫಲ ಬರಲಿ ಎಂದು ಆಶಿಸಬಹುದಷ್ಟೇ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.