ಛಾವಣಿ ಕಂಡು ಅಂಜುತ್ತಿರುವ ಪೋಷಕರು

7
ಶಿಥಿಲಗೊಂಡು ಅಸಹ್ಯ ರೂಪ ತಳೆದ ತಾಲ್ಲೂಕಿನ ಅಂಗರೇಖನಹಳ್ಳಿಯ ಅಂಗನವಾಡಿ ಕಟ್ಟಡ, ಪ್ರಾಣ ಭಯದ ನಡುವೆ ಮಕ್ಕಳಿಗೆ ಪಾಠ

ಛಾವಣಿ ಕಂಡು ಅಂಜುತ್ತಿರುವ ಪೋಷಕರು

Published:
Updated:
Deccan Herald

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅಂಗರೇಖನಹಳ್ಳಿಯ ಅಂಗನವಾಡಿ ಕಟ್ಟಡ ದಿನೇ ದಿನೇ ಶಿಥಿಲಗೊಂಡು, ಛಾಣಿಯ ಸಿಮೆಂಟ್ ಕಳಚಿ ಬೀಳುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

ಇತ್ತೀಚೆಗೆ ಕಟ್ಟಡದ ಛಾಣಿಯ ಸಿಮೆಂಟ್ ಕಳಚಿ ಬಿದ್ದಿದ್ದು, ಈ ವೇಳೆ ಇನ್ನೂ ವಿದ್ಯಾರ್ಥಿಗಳು ಅಂಗನವಾಡಿಗೆ ಬಂದಿರದ ಕಾರಣ ಅನಾಹುತ ತಪ್ಪಿದಂತಾಗಿದೆ. ಸದ್ಯ ಸಿಬ್ಬಂದಿ ಪ್ರಾಣ ಭಯದ ನಡುವೆ ಮಕ್ಕಳಿಗೆ ಪಾಠ ಮಾಡಬೇಕಾಗಿದೆ ಬಂದಿದೆ.

ಜಿಟಿಜಿಟಿ ಮಳೆಗೆ ಇಡೀ ಕಟ್ಟಡ ನೆನೆದು, ಗೋಡೆಗಳನ್ನು ಕಪ್ಪು ಬಣ್ಣಕ್ಕೆ ತಿರುಗಿ ಅಸಹ್ಯಕರವಾಗಿ ಗೋಚರಿಸುತ್ತಿವೆ.
ಈ ಕೇಂದ್ರಕ್ಕೆ ಸುಮಾರು 25 ಮಕ್ಕಳು ದಾಖಲಾಗಿದ್ದಾರೆ. ಆದರೆ ಕಟ್ಟಡದ ಸ್ಥಿತಿ ಕಂಡು ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

‘ಖಾಸಗಿ ಶಾಲೆಗಳ ಪೈಪೋಟಿ ನಡುವೆ ಬಾಗಿಲು ಮುಚ್ಚುತ್ತಿರುವ ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ತುರ್ತಾಗಿ ಮೂಲಸೌಕರ್ಯ ಕಲ್ಪಿಸಬೇಕಾದ ಹೊತ್ತಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬೇಜವಾಬ್ದಾರಿಯಿಂದ ಇರುವ ವ್ಯವಸ್ಥೆ ಸಹ ಹಾಳಾಗಿ ಹೋಗುತ್ತಿರುವುದು ದುರಂತ’ ಎಂದು ಅಂಗರೇಖನಹಳ್ಳಿ ನಿವಾಸಿ ರವಿ ತಿಳಿಸಿದರು.

‘ಕಟ್ಟಡದ ಸ್ಥಿತಿ ಬಗ್ಗೆ ಅಂಗನವಾಡಿ ಕೇಂದ್ರದ ಸಿಬ್ಬಂದಿ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರಿಗೆ ಮಾಹಿತಿ ನೀಡಿದ್ದಾರೆ. ಆದರೂ ಅಧಿಕಾರಿಗಳು ಚಿಕ್ಕ ಮಕ್ಕಳ ಬಗ್ಗೆ ಕಾಳಜಿ ವಹಿಸದೆ ಇರುವುದು ದುರಾದೃಷ್ಟ. ಮುಂದೆ ದೊಡ್ಡ ಅನಾಹುತಗಳಾಗುವ ಮುನ್ನವೇ ಸಂಬಂಧಪಟ್ಟವರೆಲ್ಲ ಅಂಗನವಾಡಿ ಸುಸಜ್ಜಿತಗೊಳಿಸಲು ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !