ಬೆಂಗಳೂರು: ವೃತ್ತಿಯಲ್ಲಿ ಬಡ್ತಿಗಾಗಿ ಗಿಳಿಶಾಸ್ತ್ರದ ಮೊರೆ ಹೋಗಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣ ಕಳೆದುಕೊಂಡಿದ್ದಾರೆ.

55 ವರ್ಷದ ಅಧಿಕಾರಿಯೊಬ್ಬರು ನೀಡಿರುವ ದೂರಿನ ಮೇಲೆ ಭಾರತೀನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ನಗರದ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

‘ಶೇಖರ್ ಎಂಬ ವ್ಯಕ್ತಿ 194 ಗ್ರಾಂ ಚಿನ್ನದ ಆಭರಣ ಹಾಗೂ 1 ಕೆ.ಜಿ 300 ಗ್ರಾಂ ಬೆಳ್ಳಿಯ ಆಭರಣ ಪಡೆದು ಪರಾರಿಯಾಗಿದ್ದಾನೆ’ ಎಂದು ದೂರು ನೀಡಲಾಗಿದೆ.

‘ಡಿಸೆಂಬರ್ನಲ್ಲಿ ಭಾರತೀನಗರದ ಶ್ರೀಸರ್ಕಲ್ ಬಳಿ ಅಧಿಕಾರಿ ನಡೆದು ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಗಿಳಿಶಾಸ್ತ್ರ ಹೇಳುವ ವ್ಯಕ್ತಿ ರಸ್ತೆ ಬದಿ ಕುಳಿತಿದ್ದ. ಗಿಳಿಶಾಸ್ತ್ರ ಹೇಳುವ ವ್ಯಕ್ತಿಯೇ ಅಧಿಕಾರಿಯನ್ನು ಪರಿಚಯಿಸಿಕೊಂಡು, ಗಿಳಿಶಾಸ್ತ್ರ ಹೇಳುವುದಾಗಿ ತಿಳಿಸಿದ್ದ. ಆತನ ಮಾತು ನಂಬಿದ್ದ ಅಧಿಕಾರಿ ಗಿಳಿಶಾಸ್ತ್ರ ಕೇಳಲು ಕುಳಿತಿದ್ದರು’ ಎಂದು ಪೊಲೀಸರು ಹೇಳಿದರು.

‘ನಿಮ್ಮ ಮುಖ ನೋಡಿ ಜಾತಕ ಹೇಳ್ತೀನಿ, ಜೀವನ ಸುಧಾರಿಸಬೇಕಾದರೆ ಪೂಜೆ ಮಾಡಿಸಬೇಕು’ ಎಂದು ನಂಬಿಸಿದ್ದ ಆರೋಪಿ, ಆರಂಭದಲ್ಲಿ ₹ 50 ಸಾವಿರ ಪಡೆದು ಸಣ್ಣದೊಂದು ಪೂಜೆ ಮಾಡಿದ್ದ. ಇದಾದ ಬಳಿಕ ಕರೆ ಮಾಡಿದ್ದ ಶೇಖರ್, ‘ನಿಮಗೆ ವೃತ್ತಿಯಲ್ಲಿ ಬಡ್ತಿ, ವರ್ಗಾವಣೆ ಆಗಬೇಕು’ ಎಂದರೆ ದೊಡ್ಡ ಪೂಜೆಯೊಂದನ್ನು ಮಾಡಬೇಕು. ಮನೆಯಲ್ಲಿರುವ ಚಿನ್ನಾಭರಣ ತಗೊಂಡು ಬನ್ನಿ’ ಎಂದಿದ್ದ. ಆರೋಪಿಯ ಮಾತು ನಂಬಿದ್ದ ಅಧಿಕಾರಿ ಸುಮಾರು 194 ಗ್ರಾಂ ಚಿನ್ನ ಮತ್ತು 1 ಕೆ.ಜಿ 300 ಗ್ರಾಂ ಬೆಳ್ಳಿ ಆಭರಣಗಳನ್ನು ಪೂಜೆಗಾಗಿ ಆತನಿಗೆ ನೀಡಿದ್ದರು’ ಎಂದು ಪೊಲೀಸರು ಹೇಳಿದರು.

ಸಬೂಬು ಹೇಳಿ ಪರಾರಿ: ‘ಒಂದೇ ದಿನದಲ್ಲಿ ಪೂಜೆ ಮುಗಿಸಿ ಚಿನ್ನಾಭರಣ ವಾಪಸ್ ಕೊಡುತ್ತೇನೆ’ ಎಂದು ಆರೋಪಿ ಹೇಳಿದ್ದ. ಅದಾದ ಮೇಲೆ ‘ನಾಳೆ ಬನ್ನಿ, ನಾಡಿದ್ದು ಬನ್ನಿ’ ಎಂದು ಸಬೂಬು ಹೇಳಲಾರಂಭಿಸಿದ್ದ. ಅನುಮಾನಗೊಂಡ ಅಧಿಕಾರಿ, ಆರೋಪಿ ಕುಳಿತ್ತಿದ್ದ ಶ್ರೀಸರ್ಕಲ್ ಬಳಿ ಹೋಗಿ ನೋಡಿದಾಗ ಅಲ್ಲಿಂದ ಆತ ಪರಾರಿ ಆಗಿರುವುದು ಗೊತ್ತಾಗಿದ್ದು ಬಳಿಕ ದೂರು ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.