ಬೆಂಗಳೂರು: ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿ ಆಧಾರಿತ ಇಂಗ್ಲಿಷ್ ನಾಟಕವು ಇದೇ ಗುರುವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 10.30ಕ್ಕೆ ಇಲ್ಲಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಪ್ರದರ್ಶನ ಕಾಣಲಿದೆ.
ಇದನ್ನು ಸೆಂಟರ್ ಫಾರ್ ಫಿಲ್ಮ್ ಆ್ಯಂಡ್ ಡ್ರಾಮಾ ಪ್ರಸ್ತುತ ಪಡಿಸುತ್ತಿದೆ. ‘ಪರ್ವ’ ಕಾದಂಬರಿಯನ್ನು ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರು ರಂಗರೂಪಕಕ್ಕೆ ಅಳವಡಿಸಿ, ನಿರ್ದೇಶಿಸಿದ್ದಾರೆ. ಇದು ಎಂಟು ಗಂಟೆಗಳ ನಾಟಕವಾಗಿದೆ.
ಈ ಹಿಂದೆ ಕನ್ನಡದಲ್ಲಿ ಪ್ರದರ್ಶನ ಕಂಡಿದ್ದ ಈ ನಾಟಕ, ಭಾರಿ ಜನಮನ್ನಣೆ ಪಡೆದಿತ್ತು. ಮೈಸೂರು ರಂಗಾಯಣದ ಕಲಾವಿದರು ಪ್ರಸ್ತುತಪಡಿಸಿದ್ದರು. ರಾಜ್ಯದ ವಿವಿಧೆಡೆ 43 ಪ್ರದರ್ಶನಗಳನ್ನು ಮಾಡಲಾಗಿತ್ತು. ಇದೇ ಮೊದಲ ಬಾರಿ ಇಂಗ್ಲಿಷ್‌ಗೆ ಅಳವಡಿಸಿ, ಪ್ರದರ್ಶಿಸಲಾಗುತ್ತಿದೆ.
ಈ ಕಾದಂಬರಿಯನ್ನು ಭೈರಪ್ಪ ಅವರು 1979ರಲ್ಲಿ ಬರೆದಿದ್ದಾರೆ. ಇದು ಮಹಾಭಾರತದ ಕಥೆಯನ್ನು ಆಧರಿಸಿದ್ದು, ದ್ರೌಪದಿ ಅನುಭವಿಸುವ ಯಾತನೆ, ಆ ಹಿನ್ನೆಲೆಯ ಕಥಾನಕದ ಕಾದಂಬರಿ ಇದಾಗಿದೆ. ಈ ಕಾದಂಬರಿ ಮನುಷ್ಯನ ಬೌದ್ಧಿಕ, ಭಾವನಾತ್ಮಕ ಸಂಘರ್ಷಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ನಗರದ ಆಯ್ದ ಕಲಾವಿದರಿಂದ ಈ ನಾಟಕವನ್ನು ಪ್ರಸ್ತುತ ಪಡಿಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ನಾಟಕದ ಟಿಕೆಟ್‌ಗಳು ಬುಕ್ ಮೈ ಶೋದಲ್ಲಿ ಲಭ್ಯವಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.