ಬೆಂಗಳೂರು: ನಗರದಲ್ಲಿ ಶುಕ್ರವಾರ ಕ್ರಿಯೇಟಿವ್ ಸರ್ಕಲ್ ಸಂಸ್ಥಾಪಕ ಬಿ.ಆರ್. ರಾಮಕೃಷ್ಣ ನೇತೃತ್ವದಲ್ಲಿ ‘ಪಾಸ್ ಇಟ್ ಆನ್’ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.

ಆ್ಯಪ್ ಕುರಿತು ಮಾಹಿತಿ ನೀಡಿದ ರಾಮಕೃಷ್ಣ, ಅನೇಕರು ತಾವು ಬಳಕೆ ಮಾಡಿದ ವಸ್ತುಗಳನ್ನು ಉಪಯೋಗಿಸಿ ಬೇಡವಾದ ನಂತರ ಬಿಸಾಡುವುದು ಅಥವಾ ಮೂಲೆಗೆ ಎಸೆಯುವುದು ಉಂಟು. ಮೂಲೆ ಸೇರುವ ವಸ್ತು ಮತ್ಯಾರಿಗೋ ಅಗತ್ಯ ಇರುತ್ತದೆ. ಇಂತಹ ವಸ್ತುಗಳನ್ನು ಬೇಕಾದವರಿಗೆ ತಲುಪಿಸುವ ಉದ್ದೇಶದಿಂದ ‘ಪಾಸ್ ಇಟ್ ಆನ್’ ಆರಂಭಿಸಲಾಗಿದೆ. ಇದು ಸಂಪೂರ್ಣ ಉಚಿತ ಎಂದು ಹೇಳಿದರು.

ಬಳಸದ ಸೈಕಲ್ಗಳು, ಪುಸ್ತಕಗಳು, ಗೃಹ ಬಳಕೆಯ ವಸ್ತುಗಳಿಗೆ ಹೊಸ ಜೀವ ಸಿಗುತ್ತದೆ. ಇದು ಕೇವಲ ವಸ್ತುಗಳನ್ನು ಕೊಡುವುದು ಮಾತ್ರವಲ್ಲ. ಒಂದು ಒಳ್ಳೆಯ ಅಭ್ಯಾಸವನ್ನು ಬೆಳೆಸುವುದಾಗಿದೆ. ಮುಖ್ಯವಾಗಿ ಪರಿಸರ ಸ್ನೇಹಿ ಕೆಲಸವೂ ಆಗಿದೆ ಎಂದು ತಿಳಿಸಿದರು.

ಈ ಆ್ಯಪ್ ಅನ್ನು ಆ್ಯಂಡ್ರಾಯ್ಡ್ ಮೊಬೈಲ್ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಆ್ಯಪ್ನಲ್ಲಿ ಅಳವಡಿಸಲಾಗಿದೆ. ವಸ್ತುಗಳ ದಾನಿಗಳು ಮತ್ತು ಪಡೆಯುವವರ ವಿವರ ಗೋಪ್ಯವಾಗಿರಲಿದೆ. ದಾನದ ಆಧಾರದಲ್ಲಿ ವಿವಿಧ ಬ್ಯಾಡ್ಜ್ ನೀಡಲಾಗುವುದು, ಪಾಯಿಂಟ್ಸ್ ಕೊಡಲಾಗುವುದು. ಗೂಗಲ್ ಪ್ಲೇ ಸ್ಟೋರ್ನಲ್ಲಿ ಆ್ಯಪ್ ಲಭ್ಯವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.