ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇ ಪಾರ್ಕಿಂಗ್: ಭೂಸಾರಿಗೆ ನಿರ್ದೇಶನಾಲಯದಿಂದ ಅಧ್ಯಯನ

ಭೂಸಾರಿಗೆ ನಿರ್ದೇಶನಾಲಯದಿಂದ ಅಧ್ಯಯನ
Last Updated 19 ಆಗಸ್ಟ್ 2022, 22:16 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಾಹನ ನಿಲುಗಡೆಗೆ ಸಾಧ್ಯವಿರುವ ಜಾಗಗಳ ಬಗ್ಗೆ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) 1,089 ಕಿಲೋ ಮೀಟರ್ ಸಮೀಕ್ಷೆ ಮಾಡಿದೆ. ವಾಣಿಜ್ಯ ಪ್ರದೇಶಗಳಲ್ಲಿ ಪೇ–ಪಾರ್ಕಿಂಗ್ ವ್ಯವಸ್ಥೆ ವಿಸ್ತರಿ ಸಲು ಕಾರ್ಯಸಾಧ್ಯತೆಯನ್ನು ಡಲ್ಟ್ ಅಧ್ಯಯನ ಮಾಡುತ್ತಿದೆ.

ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ರೀತಿಯ ಸ್ಮಾರ್ಟ್‌ ಪಾರ್ಕಿಂಗ್ ವ್ಯವಸ್ಥೆ ಇತರ ಪ್ರದೇಶ ಗಳಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಪಾರ್ಕಿಂಗ್ ನೀತಿ ಅನುಷ್ಠಾನದ ಬಗ್ಗೆ ನಗರಾಭಿವೃದ್ಧಿ ಇಲಾಖೆ ಪರಿಶೀಲನೆ ನಡೆಸಿತು. ಬಿಬಿಎಂಪಿ, ನಮ್ಮ ಮೆಟ್ರೊ, ಬೆಂಗಳೂರು ಸಂಚಾರ ಪೊಲೀಸ್ ಮತ್ತು ಡಲ್ಟ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪಾವತಿಸಿ ವಾಹನ ನಿಲುಗಡೆ ತಾಣ ನಿರ್ಮಾಣಕ್ಕೆ ಜಾಗ ಗುರುತಿಸುವ ಜವಾಬ್ದಾರಿ ಡಲ್ಟ್‌ಗೆ ವಹಿ ಸಿದ್ದರೆ, ಖಾಸಗಿ ಏಜೆನ್ಸಿಗಳ ಮೂಲಕ ಯೋಜನೆ ಅನುಷ್ಠಾನಗೊಳಿಸುವ ಹೊಣೆಯನ್ನು ಬಿಬಿಎಂಪಿಗೆ ವಹಿಸಲಾಗಿದೆ.

ಐದು ವಲಯಗಳಲ್ಲಿ ನಿಲುಗಡೆ ತಾಣ ನಿರ್ಮಿಸಲು ಸೂಕ್ತ ಎನಿಸಿರುವ ರಸ್ತೆಗಳನ್ನು ಗುರುತಿಸುವ ಕಾರ್ಯವನ್ನು ಡಲ್ಟ್ ಪೂರ್ಣಗೊಳಿಸಿದೆ.

‘ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಲ್ಲಿ ಸದ್ಯ ಸಮೀಕ್ಷೆ ನಡೆಯುತ್ತಿದೆ. ಕಾರುಗಳು, ದ್ವಿಚಕ್ರ ವಾಹನಗಳು, ಸೈಕಲ್‌ಗಳು ಮತ್ತು ಆಟೋರಿಕ್ಷಾಗಳಿಗೆ ಪ್ರತ್ಯೇಕ ಜಾಗ ಕಾಯ್ದಿರಿಸುವ ವಿವರವೂ ವರದಿಯಲ್ಲಿ ಇರಲಿದೆ’ ಡಲ್ಟ್ ಆಯುಕ್ಷೆ ವಿ.ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಣಿಜ್ಯ ಪ್ರದೇಶದ ರಸ್ತೆಗಳಲ್ಲಿ ಮಾತ್ರ ಈ ವ್ಯವಸ್ಥೆ ಪರಿಚಯಿಸಲಾಗುವುದು. ಪ್ರತಿ ವಲಯದಲ್ಲೂ ಸಂಚಾರ ಪೊಲೀಸರು, ಬಿಬಿಎಂಪಿ ಎಂಜಿನಿಯರ್‌ಗಳು ಮತ್ತು ಡಲ್ಟ್ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಿಯೇ ಸ್ಥಳ ಗುರುತಿಸುವಿಕೆ ಅಂತಿಮಗೊಳಿಸಲಾಗಿದೆ. ಪರಿಕಲ್ಪನೆ ಮತ್ತು ವಿನ್ಯಾಸ ಒಳಗೊಂಡು ವಿವರವಾದ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯ ಮುಂದುವರಿದಿದೆ’ ಎಂದರು.

‘ವಸತಿ ಪ್ರದೇಶದಲ್ಲಿ ಮನೆಯ ಮುಂದೆ ವಾಹನ ನಿಲ್ಲಿಸಲು ಪರವಾನಗಿ ಪಡೆದುಕೊಳ್ಳಬೇಕು ಎಂಬ ಪ್ರಸ್ತಾವ ಪಾರ್ಕಿಂಗ್ ನೀತಿಯಲ್ಲಿದೆ. ಆದರೆ, ಅದನ್ನು ತಕ್ಷಣವೇ ಪರಿಚಯಿಸಿದರೆ ಹಿನ್ನೆಡೆ ಆಗಬಹುದೆಂಬ ಕಾರಣಕ್ಕೆ ಸದ್ಯಕ್ಕೆ ವಾಣಿಜ್ಯ ಪ್ರದೇಶಗಳಲ್ಲಿ ಈ ನೀತಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದರು.

‘ವರದಿ ಬಳಿಕ ಟೆಂಡರ್’
‘ವಲಯ ಆಯುಕ್ತರ ಜತೆ ಸಮಾಲೋಚನೆ ನಡೆಸಿಯೇ ಡಲ್ಟ್‌ ವರದಿ ಸಿದ್ಧಪಡಿಸುತ್ತಿದೆ. ವರದಿ ಬಂದ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಪಾರ್ಕಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸಿದರೆ ಸರ್ಕಾರಕ್ಕೆ ಹೆಚ್ಚುವರಿ ವರಮಾನ ಬರಲಿದೆ. ಆದರೆ, ಈ ರೀತಿಯ ಯೋಜನೆ ಅನುಷ್ಠಾನ ಸವಾಲಿನ ಕೆಲಸ. ಪೇ–ಪಾರ್ಕಿಂಗ್ ವ್ಯವಸ್ಥೆಗೆ 85 ರಸ್ತೆಗಳನ್ನು ಬಿಬಿಎಂಪಿ ಗುರುತಿಸಿತ್ತು. ಆದರೆ, ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದ್ದರಿಂದ ಸಾಧ್ಯವಾಗಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT