ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಪೇಟೆ: ರಸ್ತೆ ದುರಸ್ತಿಗೆ ಪಿ.ಸಿ. ಮೋಹನ್ ಮನವಿ

Last Updated 13 ಸೆಪ್ಟೆಂಬರ್ 2020, 8:02 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಪೇಟೆ ವಾರ್ಡ್‍ನ ರಸ್ತೆಗಳನ್ನು ದುರಸ್ತಿ ಮಾಡುವಂತೆ ಸಂಸದ ಪಿ.ಸಿ.ಮೋಹನ್ ಅವರು ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರಿಗೆ ಮನವಿ ಮಾಡಿದ್ದಾರೆ.

'ಜಲಮಂಡಳಿ ಕಾಮಗಾರಿಯಿಂದ ಚಿಕ್ಕಪೇಟೆ ಹಾಗೂ ಸುತ್ತಮುತ್ತಲಿನ ರಸ್ತೆಗಳು ತೀರಾ ಹದಗೆಟ್ಟಿವೆ. ವ್ಯಾಪಾರಕ್ಕೆ ಹೆಸರುವಾಸಿಯಾಗಿರುವ ಈ ಪ್ರದೇಶದಿಂದ ಸರ್ಕಾರಕ್ಕೆ ಹೆಚ್ಚು ತೆರಿಗೆಯೂ ಸಿಗುತ್ತದೆ. ಆದರೆ, ಇಲ್ಲಿನ ರಸ್ತೆ ಸಮಸ್ಯೆಯಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ತುರ್ತಾಗಿ ಈ ವ್ಯಾಪ್ತಿಯ ಸುಲ್ತಾನ್‍ಪೇಟೆ, ಹಳೇ ತರಗುಪೇಟೆ, ಬಳೇಪೇಟೆ, ಅಕ್ಕಿಪೇಟೆ ಹಾಗೂ ಇನ್ನಿತರ ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡಬೇಕು' ಎಂದು ಕೋರಿದ್ದಾರೆ.

-----

'ಅಂತರರಾಷ್ಟ್ರೀಯ ಕನ್ನಡ ಭಾಷಾ ದಿನ' ನಾಳೆ

ಬೆಂಗಳೂರು: ಕನ್ನಡ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಒತ್ತಾಯಿಸಿ ಹಾಗೂ ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡುವಂತೆ ಆಗ್ರಹಿಸಿ ಸೆ.14ರಂದು ರಾಜ್ಯದಾದ್ಯಂತ 'ಅಂತರರಾಷ್ಟ್ರೀಯ ಕನ್ನಡ ಭಾಷಾ ದಿನ' ಆಚರಿಸಲುಕರ್ನಾಟಕ ನವನಿರ್ಮಾಣ ಸೇನೆ ಕರೆ ನೀಡಿದೆ.

'ಸಂಘಟನೆಯ ಜಿಲ್ಲಾ, ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಿಗೆ ತೆರಳಿ, ಕನ್ನಡ ಬಾರದ ಸಿಬ್ಬಂದಿಗೆ ಕನ್ನಡ ಕಲಿಕಾ ಪುಸ್ತಕ ಮತ್ತು ಸಿಹಿ ನೀಡುವ ಮೂಲಕ ಕನ್ನಡೇತರು ಕನ್ನಡ ಕಲಿಯುವಂತೆ ಮನವಿ ಮಾಡಲಿದ್ದಾರೆ. ಕನ್ನಡದ ಶ್ರೀಮಂತಿಕೆ ಸಾರುವ ಕರಪತ್ರಗಳನ್ನು ಹಂಚಿ, ಜಾಗೃತಿ ಮೂಡಿಸಲಾಗುವುದು' ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT