ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಟಿಎಂಸಿ ಕಾಯ್ದೆ ರದ್ದತಿಗೆ ಆಗ್ರಹಿಸಿ ಶಾಂತಿಯಾತ್ರೆ: ಅಖಿಲ ಭಾರತ ಬೌದ್ಧ ವೇದಿಕೆ

Published : 9 ಸೆಪ್ಟೆಂಬರ್ 2024, 16:25 IST
Last Updated : 9 ಸೆಪ್ಟೆಂಬರ್ 2024, 16:25 IST
ಫಾಲೋ ಮಾಡಿ
Comments

ಬೆಂಗಳೂರು: ಬೋಧ್‌ಗಯಾ ದೇವಾಲಯ ನಿರ್ವಹಣಾ ಸಮಿತಿ 1949ರ (ಬಿಟಿಎಂಸಿ) ಕಾಯ್ದೆ ರದ್ದುಪಡಿಸುವಂತೆ ಆಗ್ರಹಿಸಿ ಇದೇ 17ರಂದು ಬಿಹಾರದ ಪಾಟ್ನಾ ನಗರದ ಗಾಂಧಿ ಮೈದಾನದಲ್ಲಿ ಬೌದ್ಧರ ಸಾರ್ವಜನಿಕ ಸಭೆ ಮತ್ತು ಶಾಂತಿಯಾತ್ರೆ ನಡೆಯಲಿದೆ ಎಂದು ಅಖಿಲ ಭಾರತ ಬೌದ್ಧ ವೇದಿಕೆ ತಿಳಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಬೋಧಿ ಬುದ್ಧ ವಿಹಾರ ಟ್ರಸ್ಟ್‌ನ ಮಾಜಿ ಕಾರ್ಯದರ್ಶಿ ಪ್ರಜ್ಞಶೀಲ ಭಂತೇಜಿ, ‘ಬೋಧ್‌ಗಯಾ ದೇವಾಲಯದ ಆಡಳಿತ ನಿರ್ವಹಣೆಯನ್ನು ಪೂರ್ಣವಾಗಿ ಬೌದ್ಧ ಧರ್ಮೀಯರಿಗೆ ನೀಡುವಂತೆ ಆಗ್ರಹಿಸಿ ಶಾಂತಿಯಾತ್ರೆ ನಡೆಸಲಾಗುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸುಮಾರು ಐದು ಲಕ್ಷ ಬೌದ್ಧ ಧರ್ಮಿಯರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಹಿಂದೂ, ಕ್ರೈಸ್ತ ಮತ್ತು ಸಿಖ್‌ ಧರ್ಮೀಯರ ಪವಿತ್ರ ಸ್ಥಳಗಳ ಆಡಳಿತ ನಿರ್ವಹಣೆಯನ್ನು ಆಯಾ ಸಮುದಾಯದವರೇ ಮಾಡುತ್ತಿದ್ದಾರೆ. ಬೌದ್ಧರ ಪವಿತ್ರ ಸ್ಥಳಗಳಾದ ಬೋಧ್‌ಗಯಾದ ಮಹಾಬೋಧಿ ಮಠ ಹಾಗೂ ಬೌದ್ಧರ ಇತರೆ ಪವಿತ್ರ ಸ್ಥಳಗಳ ಆಡಳಿತವನ್ನು ಬೌದ್ಧ ಧರ್ಮೀಯರಿಗೆ ನೀಡಬೇಕು’ ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ಮಾತನಾಡಿ, ‘ಬೋಧ್‌ಗಯಾದಲ್ಲಿರುವ ಮಹಾಬೋಧಿ ಮಠವು ಬೌದ್ಧ ಧರ್ಮೀಯರ ಪವಿತ್ರ ಸ್ಥಳವಾಗಿದೆ. ಈ ಪವಿತ್ರ ಸ್ಥಳವು 200 ವರ್ಷಗಳಿಂದ ಸ್ಥಳೀಯ ಸನಾತನಿ ಹಿಂದೂ ಸಮುದಾಯದ ಹಿಡಿತದಲ್ಲಿದೆ. ಇದರಿಂದ, ಬೌದ್ಧ ಸಂಸ್ಕೃತಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ’ ಎಂದು ಆರೋಪಿಸಿದರು. 

ವೇದಿಕೆ ಮುಖಂಡರಾದ ಬಿ. ಗೋಪಾಲ್, ಹೆಣ್ಣೂರು ಶ್ರೀನಿವಾಸ್, ಆರ್. ಮೋಹನರಾಜ್‌ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT