ಗುರುವಾರ , ಜೂನ್ 4, 2020
27 °C
ವಿಡಿಯೊ ಸುದ್ದಿ

ಲಾಕ್‌ಡೌನ್ ಪರಿಣಾಮ: ಬೆಂಗಳೂರು ನಗರದಲ್ಲಿ ನವಿಲುಗಳ ಓಡಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ನಗರದಲ್ಲಿ ಲಾಕ್‌ಡೌನ್‌ ಘೋಷಣೆ ಆದ ಬಳಿಕ ವಾಹನ ದಟ್ಟಣೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಹಾರ್ನ್‌ಗಳ ಕರ್ಕಶ ಸದ್ದು ಕ್ಷೀಣಿಸಿದೆ. ಇದರ ಪರಿಣಾಮವಾಗಿ ನವಿಲಿನಂತಹ ಅಪರೂಪದ ಪಕ್ಷಿಗಳು ನಗರದ ಕೇಂದ್ರ ಪ್ರದೇಶಗಳಲ್ಲೂ ಕಾಣಿಸಿಕೊಳ್ಳಲಾರಂಭಿಸಿವೆ. 

ಮಲ್ಲೇಶ್ವರ, ಜಯನಗರ, ಎಚ್‌ಎಸ್‌ಆರ್‌ ಬಡಾವಣೆಯಂತಹ ಪ್ರದೇಶಗಳಲ್ಲಿ ಮೂರು ನಾಲ್ಕು ದಿನಗಳಿಂದ ಈಚೆಗೆ ನವಿಲುಗಳು ರಾಜಾರೋಷವಾಗಿ ಓಡಾಡಿರುವ ಬಗ್ಗೆ ವನ್ಯಜೀವಿ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತ ಛಾಯಾಚಿತ್ರಗಳನ್ನು ವಿಡಿಯೊಗಳನ್ನು ವಾಟ್ಸ್‌ಆ್ಯಪ್‌ ಹಾಗೂ ಫೇಸ್‌ಬುಕ್‌ಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

‘ನಗರದ ಹೊರ ವಲಯದಲ್ಲಿ, ತುರಹಳ್ಳಿಯಂತಹ ಕಾಡುಗಳಲ್ಲಿ ನವಿಲುಗಳು ಅಪರೂಪಕ್ಕೊಮ್ಮೊಮ್ಮೆ ಕಾಣಸಿಗುತ್ತಿದ್ದವು. ಆದರೆ, ಜಯನಗರ ಹಾಗೂ ಮಲ್ಲೇಶ್ವರದಂತಹ ಜನನಿಬಿಡ ಪ್ರದೇಶಗಳಲ್ಲೂ ಅವುಗಳು ನಿರ್ಭಿಡೆಯಿಂದ ಓಡಾಡುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ’ ಎಂದು ವನ್ಯಜೀವಿ ಕಾರ್ಯಕರ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಲ್ಲಿ ನಾವು ನೆಲೆಸಿರುವ ಪ್ರದೇಶಗಳೆಲ್ಲವೂ ಒಂದಲ್ಲ ಒಂದು ಕಾಲದಲ್ಲಿ ಕಾಡುಪ್ರಾಣಿಗಳ ಆವಾಸ ಸ್ಥಾನಗಳಾಗಿದ್ದವು. ನಾವು ಅವುಗಳ ಮನೆಯನ್ನು ಕಿತ್ತುಕೊಂಡಿದ್ದೇವೆ. ನಗರದಲ್ಲಿ ಒಂದು ವಾರ ವಾಹನಗಳ ಹಾಗೂ ಜನರ ಸಂಚಾರಕ್ಕೆ ಕಡಿವಾಣ ಬಿದ್ದಿದ್ದಕ್ಕೆ ನವಿಲಿನಂತಹ ನಾಚಿಕೆ ಸ್ವಭಾವದ ಪಕ್ಷಿಗಳೂ ಬಹಿರಂಗವಾಗಿ ಕಾಣಿಸಿಕೊಂಡಿವೆ. ಆಸೆಬುರುಕತನಕ್ಕೆ ನಾವು ಕಡಿವಾಣ ಹಾಕಿದರೆ ನಿಸರ್ಗದ ಜೊತೆ ಮತ್ತೆ ಸಾಮರಸ್ಯ ಸಾಧಿಸಬಹುದು ಎಂಬುದಕ್ಕೆ ಇದು ಉದಾಹರಣೆ’ ಎಂದು ಪರಿಸರ ಕಾರ್ಯಕರ್ತ ವಿಜಯ್‌ ನಿಶಾಂತ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು