ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಪಂಡಿತರ ಸಂಖ್ಯೆ ಕ್ಷೀಣ ವಿಶ್ವೇಶ ತೀರ್ಥ ಸ್ವಾಮೀಜಿ ಬೇಸರ

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಬೇಸರ
Last Updated 26 ಅಕ್ಟೋಬರ್ 2019, 20:28 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಡಿನಲ್ಲಿ ಸಂಸ್ಕೃತ ಶಾಸ್ತ್ರ ಪಂಡಿತರ ಸಂಖ್ಯೆ ಕ್ಷೀಣವಾಗುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಸಮಾಜಕ್ಕೆ ಅದಕ್ಕಿಂತ ದೊಡ್ಡ ಆಘಾತ ಇನ್ನೊಂದಿಲ್ಲ’ ಎಂದುಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಮಲ್ಲೇಶ್ವರದ ಎಂಎಎಸ್ ಸಂಸ್ಥೆಯ ವಿದ್ಯಾಸಾಗರ ಎಂಪಿಎಲ್‍ಶಾಸ್ತ್ರಿ ಪ್ರತಿಷ್ಠಾನವು ನಗರದಲ್ಲಿ ಶನಿವಾರ ಏರ್ಪಡಿಸಿದ‘ವಿದ್ವತ್ ಸಂಮಾನ’ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

‘ಅರಣ್ಯದಲ್ಲಿ ಸಿಂಹಗಳ, ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿವೆ ಎಂದು ನಾವು ಬಹಳ ಕಾಳಜಿವಹಿಸಿ,ಅವುಗಳ ಸಂಖ್ಯೆಯ ಅಭಿವೃದ್ಧಿಗಾಗಿ ತಲೆ ಕೆಡಿಸಿಕೊಳ್ಳುತ್ತಿದ್ದೇವೆ.ಕಾಡನ್ನು ರಕ್ಷಿಸಿದರೆ ಪ್ರಾಣಿಗಳಸಂಖ್ಯೆ ತಾನಾಗಿಯೇ ಹೆಚ್ಚುತ್ತದೆ. ಅದೇ ರೀತಿ, ವಿದ್ವಾಂಸರನ್ನು ರಕ್ಷಿಸಿದರೆ, ಶಾಸ್ತ್ರಗಳನ್ನು ವಿದ್ವಾಂಸರು ರಕ್ಷಿಸುತ್ತಾರೆ’ ಎಂದರು.

‘ಸಮಾಜದಲ್ಲಿ ವಿದ್ವಾಂಸರನ್ನು ಪೋಷಿಸುವ, ಶಾಸ್ತ್ರರಕ್ಷಣೆಯನ್ನು ಮಾಡುವ ಕೆಲಸವಾಗಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮವಾದ ಫಲಿತಾಂಶ ದೊರೆಯುತ್ತದೆ. ಸರ್ಕಾರ ಹಾಗೂ ಸಂಘ–ಸಂಸ್ಥೆಗಳು ಈ ದಿಕ್ಕಿನಲ್ಲಿ ಚಿಂತಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಹಿರಿಯ ವಿದ್ವಾಂಸರಾದ ವೇದವಿದ್ಯಾವಾರಿಧಿ ಡಾ.ಪಿ ರಾಮಾನುಜಮ್,ಪ್ರೊ.ವೀರನಾರಾಯಣ, ಎನ್‍ಕೆ. ಪಾಂಡುರಂಗಿ, ಪ್ರೊ. ಮಹಾಬಲೇಶ್ವರ ಭಟ್‌, ಡಾ.ಎ.ರಾಮಸ್ವಾಮಿ ಅಯ್ಯಂಗಾರ್ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಬಿ ಆರ್ ಶೇಷಾದ್ರಿ ಅಯ್ಯಂಗಾರ್, ವಿಮಲಾ ರಂಗಾಚಾರ್, ಮೈತ್ರಿ ಪ್ರತಿಷ್ಠಾನದ ಡಾ. ಗಣಪತಿ ಹೆಗಡೆ, ಎಂ.ಎನ್‍.ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT