ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯದ ‘ಸಮರ್ಪಣ‘ ವಿದ್ಯಾರ್ಥಿಗಳ ತಂಡ ಇದೇ 29ರಂದು ‘ಸಮರ್ಪಣ ಓಟ‘ ಎಂಬ ಮ್ಯಾರಥಾನ್ ಆಯೋಜಿಸುತ್ತಿದೆ.
5 ಕಿ.ಮೀ ಮತ್ತು 10 ಕಿ.ಮೀ ಮ್ಯಾರಥಾನ್‌ನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಲಿದ್ದಾರೆ.
ವಿಶೇಷ ಕಾರ್ಯಕ್ರಮ: ‘ಸಮರ್ಪಣ‘ ತಂಡವು ಪ್ರತಿ ವರ್ಷ ಹುತಾತ್ಮರ ಕುಟುಂಬಗಳನ್ನು ಆಹ್ವಾನಿಸಿ ಸನ್ಮಾನಿಸುವ ಕೆಲಸ ಮಾಡುತ್ತಿದೆ. ಈ ವರ್ಷವೂ ಇದೇ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಣ್ಯವ್ಯಕ್ತಿಗಳಿಂದ ಉಪನ್ಯಾಸವಿರುತ್ತದೆ. ವಿವಿಧ ಕಾರ್ಯಗಳ ಮೂಲಕ ರಾಷ್ಟ್ರೀಯ ಭದ್ರತೆ ಕುರಿತು ಜಾಗೃತಿ ಮೂಡಿಸುತ್ತಿರುವ, ಎನ್‌ಡಿಎ ಹಳೆಯ ವಿದ್ಯಾರ್ಥಿ ಅನುಜ್ ಮಾಥುರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಸಮರ್ಪಣ ಓಟದಲ್ಲಿ ಪಾಲ್ಗೊಳ್ಳಲು https://linktr.ee/Samarpana_India?utm_source=linktree_profile_share ಈ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ: 82955 56760/78924 27135ಗೆ ಸಂಪರ್ಕಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.