ಬೆಂಗಳೂರು: ಎಲ್ಪಿಜಿ ಸಿಲಿಂಡರ್ಗಳ ಕೊರತೆಯಾಗಿರುವ ಕಾರಣ ನಗರದಲ್ಲಿ ಕೊಳವೆ ಮೂಲಕ ಅನಿಲ (ಪಿಎನ್ಜಿ) ಪೂರೈಸುವ ಸಂಪರ್ಕವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ನಾಲ್ಕು ಪಾಲಿಕೆಗಳ ವ್ಯಾಪ್ತಿಯಲ್ಲಿ 25 ಸಾವಿರಕ್ಕೂ ಹೆಚ್ಚು ಮನೆಗಳು ಮತ್ತು 69 ಸಂಸ್ಥೆಗಳಿಗೆ ಪಿಎನ್ಜಿ ಪೂರೈಸುವ ಗುರಿ ಹೊಂದಲಾಗಿದೆ.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಾರ್ಚ್ 17ರಂದು ಜಿಬಿಎಗೆ ಪತ್ರ ಬರೆದಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಐದು ಪಾಲಿಕೆಗಳ ಪೈಕಿ ನಾಲ್ಕರಲ್ಲಿ ಗೇಲ್ (ಜಿಎಐಎಲ್) ಜಾಲ ವಿಸ್ತರಣೆಗೆ ‘ಆದ್ಯತೆ ಮತ್ತು ತುರ್ತು ಆಧಾರದ ಮೇಲೆ’ ರಸ್ತೆ ಕತ್ತರಿಸಲು ಅನುಮತಿ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ, ಏಜೆನ್ಸಿಯಿಂದ ₹50 ಲಕ್ಷದ ಬ್ಯಾಂಕ್ ಖಾತರಿ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಒಂದು ವರ್ಷದಿಂದ ರಸ್ತೆ ಕತ್ತರಿಸುವ ಸಂಬಂಧ ಯಾವುದೇ ಅರ್ಜಿಗಳನ್ನು ಜಿಬಿಎ ಅಥವಾ ಪಾಲಿಕೆಗಳು ಸ್ವೀಕರಿಸುವುದನ್ನು ನಿಲ್ಲಿಸಿದ್ದವು. ಈಗ ಮುಖ್ಯಕಾರ್ಯದರ್ಶಿ ಅವರೇ ಪತ್ರ ಬರೆದಿರುವುದರಿಂದ ಅನುಮತಿ ನೀಡಬೇಕಾಗುತ್ತದೆ. ಈ ಯೋಜನೆಯಡಿ ಪೈಪ್ಲೈನ್ ಹಾಕಲು ರಸ್ತೆ ಅಗೆಯಬೇಕಾಗಿರುವುದರಿಂದ ವಾಹನ ಚಾಲಕರಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ.

ಬೆಂಗಳೂರು ದಕ್ಷಿಣ, ಉತ್ತರ, ಪೂರ್ವ ಮತ್ತು ಪಶ್ಚಿಮ ಪಾಲಿಕೆಗಳಲ್ಲಿ ರಸ್ತೆ ಕತ್ತರಿಸಲು ಅನುಮತಿ ನೀಡುವಂತೆ ಉಲ್ಲೇಖಿಸಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಗೆ ಬರುವ ಯಾವುದೇ ಅಪಾರ್ಟ್ಮೆಂಟ್, ಸಂಕೀರ್ಣ ಅಥವಾ ವಾಣಿಜ್ಯ ಕಟ್ಟಡಗಳನ್ನು ಗುರುತಿಸಲಾಗಿಲ್ಲ.

ಬೇಡಿಕೆ ಹೆಚ್ಚಿರುವ ನಗರದ ಹೊರವಲಯದಲ್ಲಿರುವ ದೊಡ್ಡ ವಸತಿ ಸಮೂಹಗಳಿಗೆ ಪಿಎನ್ಜಿ ಪೂರೈಸಲು ಗೇಲ್ ಪ್ರಸ್ತಾಪಿಸಿದೆ. ಸಲಾಪುರಿಯಾ ಲಾರೆಲ್ ಹೈಟ್ಸ್, ವೈಷ್ಣವಿ ಗಾರ್ಡೇನಿಯಾ, ಶಾಂತಿನಿಕೇತನ್, ಬಲ್ಡೋಟಾ ಸೆರೆನಿಟಿ, ಜೆಆರ್ಸಿ ವೈಲ್ಡ್ವುಡ್ಸ್, ವಾಲ್ಮಾರ್ಕ್ ಅಪಾಸ್, ಶೋಭಾ ಇಂದ್ರಪ್ರಸ್ಥ, ಪ್ರೆಸ್ಟೀಜ್ ಜಿಂದಾಲ್ ಸಿಟಿ, ಪ್ರೆಸ್ಟೀಜ್ ಬಾಗ್ಮನೆ ಟೆಂಪಲ್ ಬೆಲ್ಸ್, ಶೋಭಾ ಓಯಸಿಸ್ ಸೇರಿವೆ.

ಇದಲ್ಲದೆ, ರೆಸ್ಟೋರೆಂಟ್ಗಳು, ಹೋಟೆಲ್ಗಳು ಮತ್ತು ಕೆಫೆಗಳು ಸೇರಿದಂತೆ 69 ವಾಣಿಜ್ಯ ಸಂಸ್ಥೆಗಳನ್ನು ನಕ್ಷೆ ಮಾಡಲಾಗಿದೆ. ಇವುಗಳ ಒಟ್ಟು ಎಲ್ಪಿಜಿ ಬಳಕೆ ದಿನಕ್ಕೆ 6,561 ಕೆ.ಜಿ.ಯಾಗಿದೆ. ಇವುಗಳಲ್ಲಿ ಹಲವು ಸರ್ಜಾಪುರ ಮುಖ್ಯ ರಸ್ತೆ, ಎಚ್ಎಸ್ಆರ್ ಲೇಔಟ್, ಜೆ.ಪಿ. ನಗರ, ಮಲ್ಲೇಶ್ವರ ಮತ್ತು ಯಲಹಂಕದಂತಹ ಪ್ರಮುಖ ಪ್ರದೇಶಗಳಲ್ಲಿವೆ.

ರಸ್ತೆಯಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಸಿದ ಬಳಿಕ ರಸ್ತೆಯನ್ನು ಮೊದಲಿನ ಸ್ಥಿತಿಗೆ ತರುವುದು ಗೇಲ್ ಸಂಸ್ಥೆಯ ಜವಾಬ್ದಾರಿಯಾಗಿದೆ.

ಕಳೆದ ವರ್ಷ, ರಾಜ್ಯ ಸರ್ಕಾರವು ನಗರದಲ್ಲಿ ಅನಿಲ ವಿತರಣೆಯ ಹೊಸ ನೀತಿಯನ್ನು ಅನುಮೋದಿಸಿತ್ತು. ಇದು ಪೈಪ್ಲೈನ್ ಅಳವಡಿಕೆ ಶುಲ್ಕವನ್ನು ಮೀಟರ್ಗೆ ₹1,957ರಿಂದ ಕೇವಲ ₹1ಕ್ಕೆ ಇಳಿಸಿತ್ತು. ರಸ್ತೆಗಳ ಅಭಿವೃದ್ಧಿಗೆ ತಗುಲುವ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಈ ನೀತಿಯು ನಗರ ಪಾಲಿಕೆಗಳಿಗೆ ಆರ್ಥಿಕವಾಗಿ ಹೊರೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.