ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಪಾರ್ಸೆಲ್‌ನಲ್ಲಿ ಪಿಸ್ತೂಲ್; ವಿಮಾನ ನಿಲ್ದಾಣದಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಮಾನದ ಮೂಲಕ ಬಂದಿದ್ದ ಪಾರ್ಸೆಲ್‌ನಲ್ಲಿ ಪಿಸ್ತೂಲ್‌ಗಳು ಪತ್ತೆಯಾಗಿದ್ದರಿಂದ, ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಪಿಸ್ತೂಲ್ ಪರಿಶೀಲನೆ ನಡೆಸಿದಾಗ, ಅವು ಆಟಿಕೆ ಪಿಸ್ತೂಲ್‌ಗಳು ಎಂಬುದು ತಿಳಿದ ನಂತರವೇ ಆತಂಕ ದೂರವಾಯಿತು.

‘ಇಸ್ತಾಂಬುಲ್‌ನಿಂದ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಗೋ ಮೂಲಕ ಪಾರ್ಸೆಲ್ ಬಂದಿತ್ತು. ಅದರಲ್ಲಿರುವ ವಸ್ತುಗಳ ಬಗ್ಗೆ ಸಿಬ್ಬಂದಿಗೆ ಅನುಮಾನ ಮೂಡಿತ್ತು. ಪಾರ್ಸೆಲ್ ತೆರೆದು ನೋಡಿದಾಗ, ಪಿಸ್ತೂಲ್‌ಗಳು ಇರು
ವುದು ಗೊತ್ತಾಗಿತ್ತು. ಸುದ್ದಿ ನಿಲ್ದಾಣದೆಲ್ಲೆಡೆ ಹರಡಿ, ಎಲ್ಲರೂ ಆತಂಕಗೊಂಡಿ
ದ್ದರು’ ಎಂದು ಮೂಲಗಳು ಹೇಳಿವೆ.

‘ಕಾರ್ಗೊ ಸಿಬ್ಬಂದಿ, ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿದ್ದರು. ಪಿಸ್ತೂಲ್ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ಇವುಗಳು ಆಟಿಕೆ ಪಿಸ್ತೂಲ್‌ಗಳು ಎಂಬುದಾಗಿ ಹೇಳಿದರು. ಅವಾಗಲೇ ಸಿಬ್ಬಂದಿ ನಿಟ್ಟುಸಿರು ಬಿಟ್ಟರು’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು