ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಬಳಕೆ ತಡೆಗೆ ಜಾಗೃತಿ

ಮೊಳಗಿದ ಪ್ಲಾಸ್ಟಿಕ್‌ ವಿರೋಧಿ ಘೋಷವಾಕ್ಯ
Last Updated 26 ಅಕ್ಟೋಬರ್ 2019, 4:33 IST
ಅಕ್ಷರ ಗಾತ್ರ

ಬೆಂಗಳೂರು: ಶಾಲೆಯ ಅಂಗಳದಲ್ಲಿಪ್ಲಾಸ್ಟಿಕ್ ವಿರೋಧಿ ಫಲಕಗಳು ಜಾಗೃತಿಯ ಸಂಕೇತದಂತಿದ್ದವು. ‘ಪ್ಲಾಸ್ಟಿಕ್ ತ್ಯಜಿಸಿ–ಪರಿಸರ ಉಳಿಸಿ’, ‘ಪ್ಲಾಸ್ಟಿಕ್ ಬಳಕೆ ಜೀವಕ್ಕೆ ಮಾರಕ’ ಎಂಬ ಘೋಷವಾಕ್ಯಗಳು ಮಕ್ಕಳ ಬಾಯಲ್ಲಿ ಪ್ರತಿಧ್ವನಿಸಿದವು.

ಇದು ಕೊತ್ತನೂರು ಬಳಿಯ ಕೆ.ನಾರಾಯಣಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳು..

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಸಹಭಾಗಿತ್ವದಲ್ಲಿಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಆಯೋಜಿಸಿದ್ದ ‘ಏಕಬಳಕೆ ಪ್ಲಾಸ್ಟಿಕ್‌ ಕುರಿತು ಜಾಗೃತಿ’ ಅಭಿಯಾನದಲ್ಲಿ ಕೆ.ನಾರಾಯಣಪುರ ಹಾಗೂ ಕೊತ್ತನೂರು ಶಾಲಾ ಮಕ್ಕಳು ಪಾಲ್ಗೊಂಡರು.

ಅಭಿಯಾನ ಉದ್ಘಾಟಿಸಿದ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅವರು ಪ್ಲಾಸ್ಟಿಕ್‌ನಿಂದ ಜೀವಸಂಕುಲಕ್ಕೆ ಎದುರಾ
ಗಿರುವ ಅಪಾಯಕಾರಿ ಸಂಗತಿಗಳನ್ನು ಕಥೆಯ ರೂಪದಲ್ಲಿ ವಿವರಿಸಿದರು.

‘ಪ್ಲಾಸ್ಟಿಕ್ ಬಳಕೆ ಅಪಾಯಕಾರಿ ಎಂದು ಹಲವು ಬಾರಿ ಜನರಿಗೆ ಮನವರಿಕೆ ಮಾಡಿದರೂ ಅದು ಅವರ ಮನಸ್ಸಿಗೆ ನಾಟುತ್ತಿಲ್ಲ. ಭವಿಷ್ಯದಲ್ಲಿ ಅಪಾಯ ಎದುರಾಗಲಿದೆ ಎಂದರು.

ಪ್ಲಾಸ್ಟಿಕ್‌ ನಿಷೇಧ ಹಾಗೂ ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಶಾಲೆಗೆ ಹಸ್ತಾಂತರಿಸಿದರು. ಶಾಲಾ ವಿದ್ಯಾರ್ಥಿಗಳಿಗಾಗಿ ಘೋಷವಾಕ್ಯ ರಚನೆ ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಚಿತ್ರಕಲೆಯಲ್ಲಿ ವಿಜೇತರಾದ ಶ್ವೇತಾ (ಪ್ರಥಮ),ಅನುಷಾ (ದ್ವಿತೀಯ), ಸಲ್ಮಾ ಎಂ.ಬೆಳವಗಿ (ತೃತೀಯ) ಹಾಗೂ ಘೋಷವಾಕ್ಯ ರಚನೆ ಸ್ಪರ್ಧೆಯಲ್ಲಿ ಅಶೋಕ್ (ಪ್ರಥಮ), ವೀರೇಶ್ (ದ್ವಿತೀಯ), ಕೆ.ಲಕ್ಷ್ಮಿ (ತೃತೀಯ)ಗೆ ಬಹುಮಾನ ವಿತರಿಸಲಾಯಿತು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಯೋಗ ಶಿಕ್ಷಕ ಮಂಜುನಾಥ್‌, ಶಾಲಾ ಶಿಕ್ಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT