ಬೆಂಗಳೂರು: ದೇಶವನ್ನು ವಿಕಾಸದತ್ತ ಕೊಂಡೊಯ್ಯಲು ವಿಶ್ವಾಸಘಾತುಕ ಕಾಂಗ್ರೆಸ್ ಅನ್ನು ಕಿತ್ತೊಗೆಯಬೇಕು. ಇದಕ್ಕಾಗಿ ಎಲ್ಲರೂ ಒಟ್ಟಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು.

ನಗರದ ಎಚ್ಎಎಲ್ ವಿಮಾನ ನಿಲ್ದಾಣದ ಆವರಣದಲ್ಲಿ ಭಾನುವಾರ, ರಾಜ್ಯ ಬಿಜೆಪಿ ಘಟಕವು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ‘ಬೆನ್ನಿಗೆ ಚೂರಿ ಹಾಕುವ ಬುದ್ಧಿ ಕಾಂಗ್ರೆಸ್ಗೆ ರಕ್ತಗತವಾಗಿ ಬಂದಿದೆ. ಅಧಿಕಾರಕ್ಕಾಗಿ ಅದು ಏನು ಬೇಕಾದರೂ ಮಾಡುತ್ತದೆ’ ಎಂದು ಆರೋಪಿಸಿದರು.

‘2014ಕ್ಕೂ ಮುನ್ನ ಕಾಂಗ್ರೆಸ್ ಕೇಂದ್ರದಲ್ಲಿ 10 ವರ್ಷ ಅಧಿಕಾರದಲ್ಲಿ ಇದ್ದದ್ದು, ಡಿಎಂಕೆಯ ಬೆಂಬಲದ ಕಾರಣಕ್ಕೆ. ಕಾಂಗ್ರೆಸ್ನ ಕಷ್ಟಕಾಲದಲ್ಲಿ ಡಿಎಂಕೆ ಅದರ ಜತೆಗಿತ್ತು. ಆದರೆ, ಈಗ ಡಿಎಂಕೆ ಅಧಿಕಾರದಲ್ಲಿ ಇಲ್ಲ ಎಂದ ಮಾತ್ರಕ್ಕೆ ಅದರ ಬೆನ್ನಿಗೆ ಕಾಂಗ್ರೆಸ್ ಚೂರಿ ಹಾಕಿದೆ. ಹೊಸ ಪಕ್ಷದ ಬೆನ್ನೇರಿದೆ. ಅದರ ಬೆನ್ನಿಗೂ ಕಾಂಗ್ರೆಸ್ ಚೂರಿ ಹಾಕುವ ಕಾಲ ದೂರವಿಲ್ಲ’ ಎಂದರು.

‘ಕಾಂಗ್ರೆಸ್ ಕೇವಲ ಅದರ ಮಿತ್ರಪಕ್ಷಗಳಿಗೆ ಚೂರಿಹಾಕಿಲ್ಲ. ದೇಶದ ಮಹಿಳೆಯರಿಗೂ ದ್ರೋಹ ಬಗೆದಿದೆ. ಮಹಿಳಾ ಮೀಸಲಾತಿ ಮಸೂದೆ ತರುವುದು, ಅದರ ವಿರುದ್ಧ ತನ್ನ ಮಿತ್ರಪಕ್ಷಗಳಿಂದಲೇ ಮತ ಹಾಕಿಸುವುದು ಮಾಡುತ್ತಿತ್ತು. ನಾವು ಕಷ್ಟಪಟ್ಟು ಕಾನೂನು ತಂದೆವು. ಕಾಂಗ್ರೆಸ್ ಅದನ್ನು ಸೋಲಿಸಿತು. ಇಂತಹ ವಿಶ್ವಾಸದ್ರೋಹಿ ಕಾಂಗ್ರೆಸ್ ಅನ್ನು ಸೋಲಿಸಬೇಕು’ ಎಂದು ಕರೆ ನೀಡಿದರು.

‘ನಮ್ಮ ಆಡಳಿತ ಹೇಗಿದೆ ಅಂದರೆ, ನಾವು ಒಮ್ಮೆ ಸರ್ಕಾರ ರಚಿಸಿದರೆ ಜನರೇ ಎರಡನೇ ಬಾರಿ, ಮೂರನೇ ಬಾರಿ ಅಧಿಕಾರ ನೀಡುತ್ತಾರೆ. ಅಸ್ಸಾಂ, ಪುದುಚೇರಿಯಲ್ಲಿ ಇದೇ ಆಗಿದೆ. ಪಶ್ಚಿಮ ಬಂಗಾಳದಲ್ಲಿ 10 ವರ್ಷಗಳ ಹಿಂದೆ ನಮ್ಮ ಮೂವರು ಶಾಸಕರಷ್ಟೇ ಇದ್ದರು. ಈಗ 203 ಶಾಸಕರೊಂದಿಗೆ ಸರ್ಕಾರ ರಚಿಸಿದ್ದೇವೆ. ಕೇರಳದಲ್ಲಿ ಈಗ ಮೂವರು ಶಾಸಕರಿದ್ದೇವೆ. ಅಲ್ಲಿಯೂ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವ ದಿನ ದೂರವಿಲ್ಲ. ಲೋಕಸಭಾ ಸದಸ್ಯರ ಸಂಖ್ಯೆಯಲ್ಲಿ, ಕರ್ನಾಟಕದಲ್ಲಿ ನಮ್ಮದೇ ದೊಡ್ಡ ಪಕ್ಷ ಎಂಬುದನ್ನು ಮರೆಯುವಂತಿಲ್ಲ’ ಎಂದರು.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿಯನ್ನು ಅಧಿಕಾರಕ್ಕೆ ತಂದಂತೆ, ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಮೋದಿ ಅವರಿಗೆ ಭರವಸೆ ನೀಡುತ್ತೇವೆ’ ಎಂದು ಹಿಂದಿಯಲ್ಲಿ ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಂಸದ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.