ಪೋಕ್ಸೋ ಅನುಷ್ಠಾನದ ಸುತ್ತಮುತ್ತ...

7

ಪೋಕ್ಸೋ ಅನುಷ್ಠಾನದ ಸುತ್ತಮುತ್ತ...

Published:
Updated:

ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಸಮರ್ಪಕ ಅನುಷ್ಠಾನ ಕುರಿತು ಪೊಲೀಸ್‌ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಗರದಲ್ಲಿ ಶನಿವಾರ ನಡೆಯಿತು. ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು ಅವರು ಇಂಥ ಪ್ರಕರಣಗಳನ್ನು ನಿರ್ವಹಿಸುವ ಕುರಿತು ಸೂಕ್ಷ್ಮವಾಗಿ ಹೇಳಿದ ಟಿಪ್ಸ್‌ ಹೀಗಿದೆ.

ಲೈಂಗಿಕ ದೌರ್ಜನ್ಯಗಳ ಹಿಂದಿರುವ ಕಾರಣಗಳು

* ಮನೆಯ ವಾತಾವರಣ, ಸೌಹಾರ್ದತೆ ಇಲ್ಲದಿರುವುದು, ಅಂತರ್‌ಜಾಲ ಮತ್ತು ಅದರಲ್ಲಿನ ಸಾಮಾಜಿಕ ಜಾಲತಾಣಗಳು, ಹಿರಿಯರಿಂದಲೇ ಸಂಭವಿಸುವ ಘಟನೆಗಳು

* ವಿವಾಹ ಮುರಿದು ಬಿದ್ದು ಅಪ್ಪ ಅಮ್ಮನ ಜಗಳದಿಂದ ಮಕ್ಕಳ ಮೇಲಾಗುವ ಪರಿಣಾಮ

* ಶಾಲೆಗಳಲ್ಲಿ ಸಹಪಾಠಿಗಳು, ಶಿಕ್ಷಕರು, ತರಬೇತಿದಾರರು, ಆಟದ ಸ್ಥಳದಲ್ಲಿ ನಡೆಯಬಹುದಾದ ಪ್ರಕರಣಗಳು

* ಮಕ್ಕಳ ಮುಗ್ದತೆ, ಪ್ರತಿಭಟಿಸದ ಗುಣ, ಪುಸಲಾಯಿಸುವಿಕೆ, ಹೇಳಿಕೊಳ್ಳಲಾಗದ ಅಸಹಾಯಕತೆ.

ಪರಿಣಾಮ

ಮಕ್ಕಳ ದೇಹ, ಮನಸ್ಸಿನ ಮೇಲೆ ಆಘಾತ, ಪ್ರಕರಣದ ತನಿಖೆ, ವಿಚಾರಣೆ ದೀರ್ಘವಾದಷ್ಟೂ ಮಾನಸಿಕ ಹಿಂಸೆ, ಕೊನೆಗೆ ಪ್ರಕರಣವೇ ಬಿದ್ದು ಹೋಗುವ ಸಾಧ್ಯತೆ. ಜೀವನದುದ್ದಕ್ಕೂ ಸಂಕಟ ಅನುಭವಿಸಬೇಕಾದ ಸನ್ನಿವೇಶ

ತನಿಖೆಗೆ ಸಮಸ್ಯೆಗಳು

* ಘಟನೆಗೆ ಸಂಬಂಧಿಸಿ ನೇರ ಸಾಕ್ಷಿಗಳು ಇಲ್ಲದಿರುವುದು

* ಮಗು ಒತ್ತಡಕ್ಕೊಳಗಾಗಿ ಹೇಳಿಕೆ ಬದಲಿಸುವ ಸಾಧ್ಯತೆ

* ಬೇರೆ ಪ್ರಕರಣಗಳಂತೆ ವಿಚಾರಣೆ ಅಸಾಧ್ಯವಾಗಿರುವುದು

ಪೊಲೀಸರೇನು ಮಾಡಬೇಕು?

* ಪ್ರಕರಣವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು

* ದೌರ್ಜನ್ಯಕ್ಕೊಳಗಾದ ಮಗುವಿನ ಮನವೊಲಿಸಿ ವಿಷಯ ತಿಳಿದುಕೊಳ್ಳಬೇಕು

* ಸಾಕ್ಷ್ಯ ಸಂಗ್ರಹದಲ್ಲಿ ಎಚ್ಚರಿಕೆ

* ಮಕ್ಕಳ ರಕ್ಷಣೆ ಮಾತ್ರವಲ್ಲ ಅವರ ಭವಿಷ್ಯದ ರಕ್ಷಣೆಯೂ ಮುಖ್ಯ

* ಪ್ರಕರಣವನ್ನು ಮಾಧ್ಯಮಗಳಲ್ಲಿ ಜಾಹೀರು ಮಾಡಬಾರದು

* ಪರಿಹಾರ ಕೊಡಿಸುವ ನಿಟ್ಟಿನಲ್ಲೂ ಗಮನಹರಿಸಬೇಕು

* ಮಗುವಿನ ಮಾನಸಿಕ ಸ್ಥಿತಿಯ ಅರಿವೂ ಮುಖ್ಯ

* ತ್ವರಿತ ವಿಚಾರಣೆ ಮುಗಿಸುವಂತೆ ನ್ಯಾಯಾಲಯಕ್ಕೂ ಮನವರಿಕೆ ಮಾಡಬೇಕು

* ಸುಳ್ಳು ಪ್ರಕರಣಗಳು ದಾಖಲಾಗಿರುವ ಸಾಧ್ಯತೆಯನ್ನೂ ಗಮನಿಸಬೇಕು

 

ಅಂಕಿ ಅಂಶಗಳು

1,827

2017ರಲ್ಲಿ ರಾಜ್ಯದಲ್ಲಿ ದಾಖಲಾದ ಪೋಕ್ಸೋ ಪ್ರಕರಣಗಳು

297

2017ರಲ್ಲಿ ಬೆಂಗಳೂರಿನಲ್ಲಿ ದಾಖಲಾದ ಪ್ರಕರಣಗಳು

 

90,205

ಪೋಕ್ಸೋ ಕಾಯ್ದೆ ಅಡಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು

(* 2018ರ ಫೆಬ್ರುವರಿ ವರೆಗಿನ ಮಾಹಿತಿ)

 

597

ಪೋಕ್ಸೋ ಪ್ರಕರಣ ವಿಚಾರಣೆಗಾಗಿರುವ ವಿಶೇಷ ಕೋರ್ಟ್‌ಗಳು

459

ವಿಶೇಷ ಸಾರ್ವಜನಿಕ ಅಭಿಯೋಜಕರು

729
ವಿಶೇಷ ಪೊಲೀಸ್ ಠಾಣೆ

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !