ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಎಸ್ಸೆಸ್ ನವೋದಯದ ಮೊದಲ ನಾಸ್ತಿಕ ಕವಿ’

ಕವಿ ಎಚ್‌. ಎಸ್. ವೆಂಕಟೇಶಮೂರ್ತಿ ಅಭಿಮತ
Last Updated 21 ಫೆಬ್ರುವರಿ 2020, 23:10 IST
ಅಕ್ಷರ ಗಾತ್ರ

ಬೆಂಗಳೂರು: ‘ನವೋದಯದ ಮೊಟ್ಟಮೊದಲ ನಾಸ್ತಿಕ ಕವಿ ಜಿ.ಎಸ್‌.ಶಿವರುದ್ರಪ್ಪ (ಜಿಎಸ್ಸೆಸ್). ಎಂತಹ ಮಾನಸಿಕ ಕುಸಿತ ಅನುಭವಿಸಿದರೂ ಅವರು ದೇವರ ಮೊರೆ ಹೋಗಲಿಲ್ಲ. ಬದಲಾಗಿ ಮಾನವ ಸಂಬಂಧಗಳ ಮೇಲೆ ಅಪಾರ ವಿಶ್ವಾಸವಿಟ್ಟರು’ ಎಂದು ಕವಿ ಎಚ್‌.ಎಸ್.ವೆಂಕಟೇಶಮೂರ್ತಿ ತಿಳಿಸಿದರು.

ಡಾ.ಜಿಎಸ್ಸೆಸ್ ವಿಶ್ವಸ್ಥ ಮಂಡಳಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಪ್ನ ಬುಕ್‌ ಹೌಸ್ ಪ್ರಕಟಿಸಿರುವ ಡಾ.ಜಿಎಸ್ಸೆಸ್ ಸಮಗ್ರ ಕಾವ್ಯ ಸಂಪುಟದ 7ನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು.

‘ಜಿಎಸ್ಸೆಸ್ ಅವರ ‘ಉಡುಗಣ ವೇಷ್ಟಿತ ಚಂದ್ರ ಸುಶೋಭಿತ...’ ಗೀತೆಗೆ ಮರುಳಾಗಿರುವೆ. ಸಾಮಾನ್ಯವಾಗಿ ಮೊದಲ ಕವಿತೆ ಹುಡುಗಾಟ ಅಥವಾ ಹುಡುಕಾಟದ್ದಾಗಿರುತ್ತದೆ. ಆದರೆ, ಅವರು ಪ್ರಥಮ ಕವಿತೆಯಲ್ಲೇ ಶೋಧನೆ ಆರಂಭಿಸಿದ್ದರು. ಕುವೆಂಪುಅವರಿಗಿಂತ ಸ್ವಲ್ಪ ಭಿನ್ನ ವೈಚಾರಿಕತೆ ಅವರದ್ದಾಗಿತ್ತು’ ಎಂದುಎಚ್‌.ಎಸ್.ವೆಂಕಟೇಶಮೂರ್ತಿ ಹೇಳಿದರು.

ಕವಿ ಸಿದ್ಧಲಿಂಗಯ್ಯ, ‘ವೈಚಾರಿಕತೆಯನ್ನು ಬೆಳೆಸುವ ಸಲುವಾಗಿಯೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜಿಎಸ್ಸೆಸ್ ಕನ್ನಡ ಅಧ್ಯಯನ ವಿಭಾಗ ಪ್ರಾರಂಭಿಸಿದ್ದರು. ಅವರು ನನಗೆಗುರುಗಳು ಮಾತ್ರವಾಗಿರದೇ ಉದ್ಯೋಗ ನೀಡಿದ ಅನ್ನದಾತರೂ ಆಗಿದ್ದಾರೆ. ಓದಿನ ಬಳಿಕ ಭಾಷಣ ಮಾಡಿಕೊಂಡಿದ್ದ ನನ್ನನ್ನು ಕರೆಸಿ, ನನ್ನಿಂದಲೇ ಅರ್ಜಿ ಬರೆಯಿಸಿ ಕೆಲಸ ಕೊಡಿಸಿದರು. ಅವರ ಒಡನಾಟ ಪಡೆದ ನಾವೇ ಭಾಗ್ಯಶಾಲಿ’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT