₹1.50 ಕೋಟಿ ಮೌಲ್ಯದ ನಕಲಿ ಕೈಗಡಿಯಾರ ವಶಕ್ಕೆ

6

₹1.50 ಕೋಟಿ ಮೌಲ್ಯದ ನಕಲಿ ಕೈಗಡಿಯಾರ ವಶಕ್ಕೆ

Published:
Updated:

ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ಕೈಗಡಿಯಾರಗಳಿಗೆ ಹೋಲಿಕೆ ಆಗುವಂತಹ ನಕಲಿ ಕೈಗಡಿಯಾರಗಳನ್ನು ಮಾರುತ್ತಿದ್ದ ಆರೋಪದಡಿ ಉಪ್ಪಾರಪೇಟೆ ಮತ್ತು ಕೆ.ಆರ್.ಮಾರುಕಟ್ಟೆ ವ್ಯಾಪ್ತಿಯಲ್ಲಿ ಒಂಬತ್ತು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರತ್ಯೇಕ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ₹ 1.50 ಕೋಟಿ ಮೌಲ್ಯದ 3 ಸಾವಿರ ಕೈಗಡಿಯಾರಗಳನ್ನು ಜಪ್ತಿ ಮಾಡಿದ್ದಾರೆ. ಉಪ್ಪಾರಪೇಟೆ ವ್ಯಾಪ್ತಿಯ ಗಾಂಧಿನಗರ, ಸುಖ ಸಾಗರ್‌ ಕಾಂಪ್ಲೆಕ್ಸ್‌ ಮತ್ತು ಕೆ.ಆರ್‌.ಮಾರುಕಟ್ಟೆ ವ್ಯಾಪ್ತಿಯ ಮಾರುತಿ ಪ್ಲಾಜಾದ ವೆಸ್ಟ್‌ ಟೈಮ್‌ಹೌಸ್‌, ಎಂ.ಎಂ.ಟೈಮ್ಸ್‌, ಪ್ರೇಮ್‌ ಗಿಫ್ಟ್‌, ನೀಲಂ ಎಲೆಕ್ಟ್ರಾನಿಕ್ಸ್‌, ಮುಖೇಶ್‌ ಟೈಮ್ಸ್‌ ಮಳಿಗೆಗಳ ಮೇಲೆ ದಾಳಿ ಮಾಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !