ಶುಕ್ರವಾರ, ನವೆಂಬರ್ 15, 2019
24 °C

ಬೆಂಗಳೂರು | ಸಿಟಿಮಾರ್ಕೆಟ್ ಠಾಣೆಗೆ ನುಗ್ಗಿ ದುಷ್ಕರ್ಮಿಗಳ ಗಲಾಟೆ

Published:
Updated:

ಬೆಂಗಳೂರು:  ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿದರು ಎಂಬ ಕಾರಣಕ್ಕೆ 100ಕ್ಕೂ ಹೆಚ್ಚು ಜನರ ಗುಂಪು ನಗರದ ಸಿಟಿ ಮಾರ್ಕೆಟ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದೆ.

ಠಾಣೆಯಲ್ಲಿದ್ದ ಸಿಬ್ಬಂದಿ‌ಯನ್ನು ನಿಂದಿಸಿರುವ ಗುಂಪು, ಮುಂದೆ ನಿಲ್ಲಿಸಿದ್ದ ಇರುವ ಪೊಲೀಸ್ ವಾಹನಗಳಿಗೆ ಕಲ್ಲು ಎಸೆದಿದೆ. ಠಾಣೆಯಲ್ಲಿದ್ದ ಆರೋಪಿಗಳನ್ನೂ ಕರೆದೊಯ್ದಿದ್ದಾರೆ ಎಂದು ಮೂಲಗಳು ಹೇಳಿವೆ.

ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಠಾಣೆಯಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ‌ ಇತ್ತು. ಜಖಂಗೊಂಡ ವಾಹನಗಳನ್ನು ಪೊಲೀಸರು, ಬೇರೆಡೆ ಸ್ಥಳಾಂತರಿಸುತ್ತಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಲು ಹಿರಿಯ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)