ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಸೇನ ಜೋಶಿ ಅವರ ಜನ್ಮಶತಾಬ್ದಿ: ಮಾ.19ರಿಂದ ಪೂರ್ಣಾಹುತಿ ಸಂಗೀತೋತ್ಸವ

Last Updated 10 ಮಾರ್ಚ್ 2022, 21:45 IST
ಅಕ್ಷರ ಗಾತ್ರ

ಬೆಂಗಳೂರು: ಪಂಡಿತ್‌ ಭೀಮಸೇನ ಜೋಶಿ ಅವರ ಜನ್ಮಶತಾಬ್ದಿ ಅಂಗವಾಗಿಪಂಡಿತ್ ಡಿ.ವಿ.ಕಾಣೆಬುವಾ ಪ್ರತಿಷ್ಠಾನವು ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ‘ಪೂರ್ಣಾಹುತಿ’ ಸಂಗೀತೋತ್ಸವ ಕಾರ್ಯಕ್ರಮವನ್ನು ಇದೇ 19 ಮತ್ತು 20ರಂದು ಎನ್.ಆರ್.ಕಾಲೊನಿಯ ರಾಮಮಂದಿರ ಬಳಿ ಇರುವ ಪತ್ತಿ ಸಭಾಂಗಣದಲ್ಲಿ ಆಯೋಜಿಸಿದೆ.

‘ಸಂಗೀತೋತ್ಸವದಲ್ಲಿ ಪಂಡಿತ್‌ ವೆಂಕಟೇಶ ಕುಮಾರ್‌, ಪಂಡಿತ್ ಉಲ್ಲಾಸ್ ಕಶಲ್ಕರ್, ಆರತಿ ಅಂಕಲಿಕರ್, ಮಂಜೂಷಾ ಪಾಟೀಲ್ ಅವರಿಂದ ಗಾಯನ ಹಾಗೂ ತಬಲಾ ವಾದಕ ಕುಮಾರ್ ಬೋಸ್‌, ಕೊಳಲು ವಾದಕ ರಾಕೇಶ್‌ ಚೌರಾಸಿಯ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

‘ಮಾ.19ರಂದು ಸಂಜೆ 5 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿಕಿರ್ಲೋಸ್ಕರ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್‌.ವಿ.ಗುಮಾಸ್ತೆ ಭಾಗವಹಿಸಲಿದ್ದಾರೆ. 20ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತಪ್ರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು’ ಎಂದುಪ್ರತಿಷ್ಠಾನದ ಅಧ್ಯಕ್ಷ ಗೋವಿಂದ ಬೆಡೇಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT