ಬುಧವಾರ, ಜೂಲೈ 8, 2020
28 °C

ವಿದ್ಯುತ್‌ ಕಡಿತ: ಬಳಕೆದಾರರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಮಳೆ ಸುರಿಯುತ್ತಿದ್ದಂತೆ ಹಲವು ಕಡೆ ವಿದ್ಯುತ್‌ ಕಡಿತಗೊಳಿಸಲಾಯಿತು. ತಾಸಿನ ನಂತರ ವಿದ್ಯುತ್‌ ನೀಡಲಾಯಿತಾದರೂ, ನಂತರ ನಿಯಮಿತವಾಗಿ ಕಡಿತಗೊಳಿಸಲಾಗುತ್ತಿತ್ತು. 

ನಗರದ ಉತ್ತರ ಭಾಗದ ಹಲವು ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ವಿದ್ಯುತ್‌ ಇರಲಿಲ್ಲ. 

‘ನಗರದಲ್ಲಿ ಮಳೆ ಪ್ರಾರಂಭವಾಗಿ ಐದು ನಿಮಿಷವೂ ಆಗಿರುವುದಿಲ್ಲ. ಆಗಲೇ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಮರಗಳು, ವಿದ್ಯುತ್‌ ಕಂಬ ಬಿದ್ದಿರದಿದ್ದರೂ ಸುಮ್ಮನೆ ಕರೆಂಟ್‌ ತೆಗೆಯುತ್ತಾರೆ’ ಎಂದು ಮತ್ತಿಕೆರೆಯ ರಮೇಶ್‌ ದೂರುತ್ತಾರೆ. 

ಮಲ್ಲೇಶ್ವರ, ಅನ್ನಪೂರ್ಣೇಶ್ವರಿ ನಗರ, ನಾಗರಬಾವಿ ಎರಡನೇ ಹಂತ, ಚನ್ನಸಂದ್ರ, ಬ್ಯಾಟರಾಯನಪುರ, ಸುಂಕದಕಟ್ಟೆ, ಕಾಮಾಕ್ಷಿಪಾಳ್ಯ, ಎಚ್‌.ಎಸ್.ಆರ್. ಲೇಔಟ್, ಲಾಲ್‌ಬಾಗ್, ಸಿದ್ದಾಪುರ, ಜಯನಗರ, ಚಂದ್ರಾಲೇಔಟ್‌, ಗೋವಿಂದರಾಜನಗರ, ಬಸವೇಶ್ವರನಗರ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್‌ ಕಡಿತಗೊಳಿಸಲಾಗಿತ್ತು. 

‘ವಿದ್ಯುತ್ ವ್ಯತ್ಯಯವಾದರೆ ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಎಂದು ಹೇಳುತ್ತಾರೆ. 1912ಗೆ ಕರೆ ಮಾಡಿದರೆ ಯಾರೂ ಸ್ವೀಕರಿಸುವುದಿಲ್ಲ’ ಎಂದು ಬಸವೇಶ್ವರನಗರದ ಮಹಾಂತೇಶ್ ದೂರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು