ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ವ್ಯತ್ಯಯ ನಾಳೆಯಿಂದ

Last Updated 2 ಜನವರಿ 2021, 17:20 IST
ಅಕ್ಷರ ಗಾತ್ರ

ಬೆಂಗಳೂರು: ಜಯದೇವ ಮತ್ತು ಸಾರಕ್ಕಿ ಉಪವಿಭಾಗದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿ ಇದೇ 4ರಿಂದ 9ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 6.30ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಎನ್‌.ಎಸ್. ಪಾಳ್ಯ ಕೈಗಾರಿಕಾ ಪ್ರದೇಶ, ಬಿಟಿಎಂ ಬಡಾವಣೆ 2ನೇ ಹಂತ, ಮೈಕೊ ಬಡಾವಣೆ 7ನೇ ಮುಖ್ಯರಸ್ತೆ, ಐಎಎಸ್‌ ಕಾಲೊನಿ, ಮದೀನಾನಗರ, ಇಡಬ್ಲ್ಯುಎಸ್‌ ಬಡಾವಣೆ 16ನೇ ಮುಖ್ಯರಸ್ತೆ, ಜೆ.ಪಿ. ನಗರ 3,4 ಮತ್ತು 5ನೇ ಹಂತ, ನಂಜುಂಡೇಶ್ವರ ಬಡಾವಣೆ, ಧನ್ವಂತರಿ ಪಾರ್ಕ್‌, ಡಿ.ಎಸ್. ಪಾಳ್ಯ, ಬಿ.ಜಿ. ರಸ್ತೆ, ಡಾಲರ್ಸ್‌ ಬಡಾವಣೆ ಮತ್ತು ಸುತ್ತ–ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

6ರಂದು ವಿದ್ಯುತ್ ವ್ಯತ್ಯಯ: ಬ್ಯಾಟರಿ ಚಾರ್ಜರ್‌ ಬದಲಾವಣೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶದಲ್ಲಿ ಇದೇ 6ರಂದು ಮಧ್ಯಾಹ್ನ 12ರಿಂದ 4ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಬಸವೇಶ್ವರ ಬಡಾವಣೆ, ಕೋಟೆ ಪಾಟೀಲಪ್ಪ ಅಪಾರ್ಟ್‌ಮೆಂಟ್ ಸಮುಚ್ಚಯ, ಡಾಲರ್ಸ್‌ ಕಾಲೊನಿ, ಮಂಜುನಾಥ ಬಡಾವಣೆ, ನಾಗಶೆಟ್ಟಿಹಳ್ಳಿ, ಎಂ.ಎಸ್. ರಾಮಯ್ಯ ಹೈಟೆಕ್ ಆಸ್ಪತ್ರೆ, ಆರ್.ಎಂ.ವಿ ಬಡಾವಣೆ, ಮುಖ್ಯಮಂತ್ರಿಯವರ ನಿವಾಸ, ಪೂಜಾರಿ ಬಡಾವಣೆ, ಸಾಂದೀಪನಿ ಶಾಲೆ, ಎಇಸಿಎಸ್‌ ಬಡಾವಣೆ, ಎಂ.ಎಸ್.ಆರ್. ನಗರ, ರಾಮಯ್ಯ ಕೈಗಾರಿಕಾ ಪ್ರದೇಶ, ಎ.ಕೆ. ಬಡಾವಣೆ, ಎ.ಜಿ.ಎಸ್. ಬಡಾವಣೆ, ಪೈಪ್‌ಲೈನ್ ರಸ್ತೆ, ಐಟಿಐ ಬಡಾವಣೆ, ಕುಂಟೆ ಮುನೇಶ್ವರ ದೇವಸ್ಥಾನ ರಸ್ತೆ, ಕಾಫಿಡೇ, ‍ಪಿಜ್ಜಾ ಹಟ್, ಟೆಲಿಫೋನ್‌ ಎಕ್ಸ್‌ಚೇಂಜ್, ಸದಾಶಿವ ನಗರ, ಸೀನಪ್ಪ ಬಡಾವಣೆ, ಇಸ್ರೊ ಕಚೇರಿ, ರಾಜ್‌ ಮಹಲ್‌ ವಿಲಾಸ್ ರಸ್ತೆ, ಸೌಂದರ್ಯ ಪಾರ್ಕ್, ನ್ಯೂ ಬಿಇಎಲ್ ರಸ್ತೆ, ಸಂಜಯನಗರ ಮುಖ್ಯರಸ್ತೆ, ಹನುಮಯ್ಯ ಬಡಾವಣೆ, ಪೋಸ್ಟಲ್ ಕಾಲೊನಿ, ನ್ಯಾಯಾಧೀಶರ ಬಡಾವಣೆ, ಅಮರಜ್ಯೋತಿ ಬಡಾವಣೆ, ಎನ್‌ಜಿಇಎಫ್‌ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT