ಗುರುವಾರ , ಜನವರಿ 28, 2021
25 °C

ವಿದ್ಯುತ್‌ ವ್ಯತ್ಯಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೆಲಗದರನಹಳ್ಳಿ ಮತ್ತು ಬೃಂದಾವನ ವಿದ್ಯುತ್‌ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಭಾನುವಾರ (ಡಿ.20) ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ತಿಗಳರಪಾಳ್ಯ, ಬಾಲಾಜಿನಗರ, ಗಂಗೊಂಡನಹಳ್ಳಿ, ಕಾಳಿಕಾನಗರ, ಅಂದ್ರಹಳ್ಳಿ, ನವಿಲುನಗರ, ಕರಿಓಬನಹಳ್ಳಿ, ಎಸ್.ಎಲ್.ವಿ. ಕಾಂಪೌಂಡ್, ಸುಪ್ರಭಾತನಗರ, ಇಂದಿರಾನಗರ ಮತ್ತು ಸುತ್ತಮುತ್ತಲಿನ ಪ್ರದೇಶ.

ಕರೀಂಸಾಬ್‌ ಬಡಾವಣೆ, ಹೆಗ್ಗನಹಳ್ಳಿ, ಕೆಟಿಜಿ ಕಾಲೇಜು ರಸ್ತೆ, ಲಕ್ಷ್ಮೀದೇವಿ ನಗರ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್‌ ವ್ಯತ್ಯಯ ನಾಳೆಯಿಂದ: ಜಯದೇವ ಮತ್ತು ಸಾರಕ್ಕಿ ಉಪವಿಭಾಗದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ವಿಭಾಗದ ವ್ಯಾಪ್ತಿಯ ಪ್ರದೇಶಗಳಲ್ಲಿ ಇದೇ 21ರಿಂದ 24ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇದೇ 21 ಮತ್ತು 23ರಂದು ಎನ್.ಎಸ್. ಕೈಗಾರಿಕಾ ಪ್ರದೇಶ, ಬಿಟಿಎಂ ಬಡಾವಣೆ ಎರಡನೇ ಹಂತ, ಮೈಕೊ ಬಡಾವಣೆ, ಆರ್‌.ಕೆ.ಕೆ. ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 22 ಮತ್ತು 24ರಂದು ಕೆಇಬಿ ಬಡಾವಣೆ, ಗುರಪ್ಪನ ಪಾಳ್ಯ, ಬಿಟಿಎಂ ಬಡಾವಣೆ ಮೊದಲನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು