ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನಸ್ಪಂದನ ಸೆ.1ಕ್ಕೆ

7

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನಸ್ಪಂದನ ಸೆ.1ಕ್ಕೆ

Published:
Updated:

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಡುತ್ತಿರುವ ನಾಗರಿಕ ಸಮಸ್ಯೆಗಳಿಗೆ ನಿಮ್ಮ ಪ್ರತಿನಿಧಿ ಸ್ಪಂದಿಸಲಿದ್ದಾರೆ. ನಿಮ್ಮ ಅಹವಾಲಿಗೆ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳು ದನಿಯಾಗಿ ವೇದಿಕೆ ಕಲ್ಪಿಸಿವೆ. ಸೆ. 1ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ‘ಜನಸ್ಪಂದನ– ಸಿಟಿಜನ್‌ ಫಾರ್‌ ಚೇಂಜ್‌’ ಕಾರ್ಯಕ್ರಮ ಹೆಸರಘಟ್ಟ ಮುಖ್ಯರಸ್ತೆಯ ಸಿದ್ದೇಶ್ವರ ಲೇಔಟ್‌ನ ಸಿಡೇದಹಳ್ಳಿ ವೃತ್ತದ ಬಳಿಯ ಎನ್‌.ಎಂ.ಎಚ್‌.ಕನ್ವೆನ್ಷನ್‌ ಹಾಲ್‌ನಲ್ಲಿ ನಡೆಯಲಿದೆ.

ಶಾಸಕ ಮಂಜುನಾಥ್‌ ಅವರು ಕ್ಷೇತ್ರದ ಜನರೊಂದಿಗೆ ನೇರವಾಗಿ ಮಾತನಾಡಲಿದ್ದಾರೆ.

ನಿಮ್ಮ ಬಡಾವಣೆಗೆ ಬಸ್‌ ಬರುತ್ತಿಲ್ಲ, ಸ್ವಚ್ಛತೆ ಸಮಸ್ಯೆ, ಪಾರ್ಕಿಂಗ್‌ ಇಲ್ಲದಿರುವುದು, ರಸ್ತೆ ಗುಂಡಿ, ಬೀದಿ ನಾಯಿ, ಬಿಡಾಡಿ ದನಗಳ ಕಾಟ, ಕೆರೆ ಅಭಿವೃದ್ಧಿ, ಅಪರಾಧ ತಡೆ.... ಹೀಗೆ ಹತ್ತು ಹಲವು ಸಮಸ್ಯೆ, ವಿಷಯಗಳ ಕುರಿತು ಮುಕ್ತವಾಗಿ ಇಲ್ಲಿ ಚರ್ಚಿಸಬಹುದು.

ಯಾರು ಭಾಗವಹಿಸಬಹುದು?: ಶೆಟ್ಟಿಹಳ್ಳಿ ವಾರ್ಡ್‌ 12, ಮಲ್ಲಸಂದ್ರ 13, ಬಾಗಲಕುಂಟೆ 14, ಟಿ.ದಾಸರಹಳ್ಳಿ 15, ಚೊಕ್ಕಸಂದ್ರ 39, ಪೀಣ್ಯ ಕೈಗಾರಿಕಾ ಪ್ರದೇಶ 41, ರಾಜಗೋಪಾಲನಗರ 70, ಹೆಗ್ಗನಹಳ್ಳಿ 71 ಇಲ್ಲಿನ ನಾಗರಿಕರು ಭಾಗವಹಿಸಬಹುದು. ನಿಮ್ಮ ಕುಂದು ಕೊರತೆಗಳನ್ನು ಇ–ಮೇಲ್‌ ಮೂಲಕವೂ ತಿಳಿಸಬಹುದು. ವಿಳಾಸ: janaspandana@printersmysore.co.in ಹೆಚ್ಚಿನ ಮಾಹಿತಿಗೆ ಮೊಬೈಲ್‌ 9986017044 (ರಾಘವೇಂದ್ರ ನಾಯರಿ) ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !