ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿರುವ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ನಲ್ಲಿ ವಿದ್ಯಾರ್ಥಿಗಳು, ಅವರ ಪೋಷಕರು ಸಿಇಟಿ, ನೀಟ್ ಸಹಿತ ವಿವಿಧ ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆದರು. ಹೊಸ ಕೋರ್ಸ್ಗಳ ಬಗ್ಗೆ ಕೇಳಿ ತಿಳಿದು, ಗೊಂದಲಗಳನ್ನು ಪರಿಹರಿಸಿಕೊಂಡರು.

ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್ನಲ್ಲಿ ಶನಿವಾರ ಆರಂಭಗೊಂಡ ‘ಪ್ರೀಮಿಯರ್ ಎಜುಕೇಷನ್ ಎಕ್ಸ್ಪೋ’ದಲ್ಲಿ ಶಿಕ್ಷಣ ಸಂಸ್ಥೆಗಳ 70ಕ್ಕೂ ಅಧಿಕ ಮಳಿಗೆಗಳಿದ್ದವು. ಭಿನ್ನ ಮತ್ತು ಹೊಸ ಕೋರ್ಸ್ಗಳನ್ನು ಪರಿಚಯಿಸುವ ಶಿಕ್ಷಣ ಸಂಸ್ಥೆಗಳ ಮಳಿಗೆಗಳ ಮುಂದೆ ವಿದ್ಯಾರ್ಥಿಗಳು, ಪೋಷಕರ ಸಂಖ್ಯೆ ಹೆಚ್ಚಿತ್ತು.

ಕೃತಕ ಬುದ್ಧಿಮತ್ತೆ (ಎಐ), ಏರೊನಾಟಿಕಲ್ ಎಂಜಿನಿಯರಿಂಗ್, ಫಿಲ್ಮ್ ಮೇಕಿಂಗ್, ಗೇಮ್ ಆರ್ಟ್ ಆ್ಯಂಡ್ ಡಿಸೈನ್, ಇಂಟೆಲೆಕ್ಚುವಲ್ ಪ್ರಾಪರ್ಟಿ ಕಾನೂನು, ವಾಸ್ತುಶಿಲ್ಪ, ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್, ನೌಕಾಪಡೆ, ಹೋಟೆಲ್ ಮ್ಯಾನೇಜ್ಮೆಂಟ್, ವೈದ್ಯಕೀಯ ವಿಭಾಗದ ಹಲವು ವಿಷಯಗಳ ಸಹಿತ ನೂರಾರು ಕೋರ್ಸ್ಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ವಿವರ ಪಡೆದರು.

ಬಿಎಸ್ಸಿ, ಎಂಬಿಎ, ಎಂಜಿನಿಯರಿಂಗ್ ಸಹಿತ ಭಿನ್ನ ಭಿನ್ನ ಕೋರ್ಸ್ಗಳ ಮಾಹಿತಿಗಳನ್ನು ಎಲ್ಲ ವಿದ್ಯಾಸಂಸ್ಥೆಗಳವರು ಆಕರ್ಷಕ ಕರಪತ್ರದೊಂದಿಗೆ ನೀಡಿದರು. ಮಾಹಿತಿ ಪಡೆಯಲು ಬಂದವರನ್ನು ಕೂರಿಸಿ ಚಾಕೊಲೆಟ್, ಪೆನ್ನುಗಳನ್ನು ನೀಡಿ ಖುಷಿಪಡಿಸಿ ಕಳುಹಿಸುತ್ತಿರುವುದು ಕಂಡು ಬಂತು.

ಪ್ರಮುಖ ಶೈಕ್ಷಣಿಕ ಕಾರ್ಯಕ್ರಮವಾದ ಎಡ್ಯುವರ್ಸ್, ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವು ಉನ್ನತ ಶಿಕ್ಷಣ ಸಂಸ್ಥೆಗಳು ನೀಡುವ ವೈವಿಧ್ಯಮಯ ವೃತ್ತಿ ಅವಕಾಶಗಳನ್ನು ಅನ್ವೇಷಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಿತು.ಸಾಂಸ್ಥಿಕ ಪ್ರದರ್ಶನಗಳ ಜೊತೆಗೆ, ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಮಾರ್ಗದರ್ಶನ ನೀಡಲು ಪ್ರಖ್ಯಾತ ಭಾಷಣಕಾರರಿಂದ ಒಳನೋಟವುಳ್ಳ ಅವಧಿಗಳನ್ನು ಒಳಗೊಂಡಿತ್ತು.

ಪರೀಕ್ಷೆಯ ಪ್ರಮುಖ ಅಂಶಗಳು ಮತ್ತು ಕಾಲೇಜು ಆಯ್ಕೆ ಪ್ರಕ್ರಿಯೆಯ ಬಗ್ಗೆ, ಸಿಇಟಿ ಬಗ್ಗೆ ಶಿಕ್ಷಣ ತಜ್ಞ ಎ.ಎಸ್. ರವಿ ಮಾಹಿತಿ ನೀಡಿದರು. ಉನ್ನತ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಬಗ್ಗೆ ರೇವಾ ವಿಶ್ವವಿದ್ಯಾಲಯದ ಮುಖ್ಯ ಮಾರ್ಗದರ್ಶಕ ಜೆ.ಬಿ. ಸಿಂಹ ಆಕರ್ಷಕವಾಗಿ ತಿಳಿಸಿಕೊಟ್ಟರು. ನಂತರ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ತಯಾರಿ ಮಟ್ಟವನ್ನು ಪರಿಶೀಲಿಸಲು ಅನುಕೂಲವಾಗುವಂತೆ ಅಣಕು ಸಿಇಟಿ ಪರೀಕ್ಷೆ ನಡೆಯಿತು. ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡರು.

ಕೋರ್ಸ್ ಬಗ್ಗೆ ಮಾರ್ಗದರ್ಶನ

ಪಿಯುಸಿ ಪರೀಕ್ಷೆ ಮುಗಿಸಿ ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು? ಯಾವ ಕಾಲೇಜಿಗೆ ಹೋಗುವುದು? ಮುಂದೇನು ಮಾಡುವುದು ಎಂಬುದರ ಬಗ್ಗೆ ಗೊತ್ತಿಲ್ಲದಿರುವುದು ಮತ್ತು ಅನೇಕ ಆಯ್ಕೆಗಳಿರುವುದು ಈ ಗೊಂದಲಕ್ಕೆ ಕಾರಣ. ನಮ್ಮ ಸಿಬ್ಬಂದಿ ಅವರಿಗೆ ಸರಿಯಾಗಿ ಮಾಹಿತಿ ನೀಡಿ, ಅವರ ಆಸಕ್ತಿಯ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ. ಮಾರ್ಗದರ್ಶನ ಮಾಡುತ್ತಿದ್ದಾರೆ.

ಅಶೋಕ್ ಕೆ.ಜೆ., ವ್ಯವಸ್ಥಾಪಕ, ಚಾಣಕ್ಯ ವಿಶ್ವವಿದ್ಯಾಲಯ

ಪ್ರಾಯೋಗಿಕ ತರಬೇತಿ

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ. ನಮ್ಮ ಮಳಿಗೆಗೆ ಬರುವ ವಿದ್ಯಾರ್ಥಿಗಳು ಎಐ ಸಹಿತ ಹೊಸ ಕೋರ್ಸ್ಗಳ ಬಗ್ಗೆಯೇ ಹೆಚ್ಚು ವಿಚಾರಿಸಿದ್ದಾರೆ. ಸಿಎಂಆರ್ ವಿಶ್ವವಿದ್ಯಾಲಯವು ಉತ್ತಮ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಜಗತ್ತಿನ ನೈಜ ಸವಾಲುಗಳನ್ನು ಎದುರಿಸಲು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಅರುಣ್ ಟಿ.ಎಂ., ಮುಖ್ಯಸ್ಥ, ಸಿಎಂಆರ್ ವಿಶ್ವವಿದ್ಯಾಲಯ

ಒಂದೇ ಕಡೆ ಹಲವು ಮಾಹಿತಿ

ಶೈಕ್ಷಣಿಕ ಕ್ಷೇತ್ರದಲ್ಲಿ ರಾಮಯ್ಯ ವಿಶ್ವವಿದ್ಯಾಲಯವು ದಂತಕಥೆಯಾಗಿದೆ. ನಮ್ಮಲ್ಲಿ ಎಂಜಿನಿಯರಿಂಗ್, ವಾಣಿಜ್ಯ ಸಹಿತ ವಿವಿಧ ಕೋರ್ಸ್ಗಳಿವೆ. ವೈದ್ಯಕೀಯ ಕೋರ್ಸ್ಗೆ ಹೆಚ್ಚು ಬೇಡಿಕೆ ಇದೆ. ಯಾಕೆಂದರೆ ನಮ್ಮದೇ ಆಸ್ಪತ್ರೆಗಳಿವೆ. ನಮ್ಮಲ್ಲೇ ಕಲಿತು ನಮ್ಮಲ್ಲೇ ಉದ್ಯೋಗ ಪಡೆಯುವ ಅವಕಾಶ ಇರುವುದರಿಂದ ಈ ಬೇಡಿಕೆ ಸೃಷ್ಟಿಯಾಗಿದೆ. ‘ಎಡ್ಯುವರ್ಸ್’ ಮೇಳವು ಒಂದೇ ಕಡೆ ಅನೇಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾಹಿತಿ ಪಡೆಯಲು ಅನುಕೂಲ ಮಾಡಿಕೊಟ್ಟಿದೆ.

ಶೀತಲ್ ಮಾನೆ, ಸಹಾಯಕ ವ್ಯವಸ್ಥಾಪಕಿ (ಅಡ್ಮಿನ್), ರಾಮಯ್ಯ ವಿಶ್ವವಿದ್ಯಾಲಯ

ಕಲಿಕಾ ಶುಲ್ಕದ ಜ್ಞಾನ

ವಿದ್ಯಾರ್ಥಿಗಳು ಮತ್ತು ಹೆತ್ತವರೊಂದಿಗೆ ಸಮಾಲೋಚನೆ ಮಾಡಿದಾಗ ಅವರಿಗೆ ಬಹಳಷ್ಟು ಮಾಹಿತಿಯ ಕೊರತೆ ಇದೆ ಎಂಬುದು ಗೊತ್ತಾಯಿತು. ಎಲ್ಲ ಗೊತ್ತಿದೆ ಎಂದು ಕೆಲವರು ತಿಳಿದುಕೊಂಡಿದ್ದರು. ಇಲ್ಲಿರುವ ಕೋರ್ಸ್ಗಳ ಮಾಹಿತಿ ಪಡೆದು ಆಮೇಲೆ ಆಶ್ಚರ್ಯಪಟ್ಟರು. ಅನೇಕರಿಗೆ ಕಲಿಕಾ ಶುಲ್ಕದ ಬಗ್ಗೆಯೇ ಜ್ಞಾನ ಇರಲಿಲ್ಲ. ಕೇಂಬ್ರಿಜ್ ವಿಶ್ವವಿದ್ಯಾಲಯವರು ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗ ಒದಗಿಸುವುದರಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ. ಕೆಲಸಕ್ಕಾಗಿ ಅಲೆದಾಡುವ ಬದಲು ಕೆಲಸ ಕೊಡುವವರು ಆಗಬೇಕು ಎಂಬುದು ನಮ್ಮ ಧ್ಯೇಯ. ನಮ್ಮಲ್ಲಿ ಈಗಾಗಲೇ 12 ಸ್ಟಾರ್ಟ್ಅಪ್ಗಳಿವೆ.

ಅವಿನಾಶ್ ಪಿ.ಎಸ್., ಪ್ರಾಧ್ಯಾಪಕ ಕೇಂಬ್ರಿಜ್ ವಿಶ್ವವಿದ್ಯಾಲಯ

ಹಲವು ವರ್ಷಗಳ ಅನುಬಂಧ

‘ಎಡ್ಯುವರ್ಸ್’ ಮೇಳಕ್ಕೆ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ನೊಂದಿಗೆ ನಾವು ಬಹಳ ವರ್ಷಗಳಿಂದ ಕೈಜೋಡಿಸುತ್ತಾ ಬಂದಿದ್ದೇವೆ. ಒಂದೇ ಸೂರಿನಡಿ ಎಲ್ಲ ಕೋರ್ಸ್ಗಳ ವಿವರ ನೀಡಲು ಇಂಥ ಮೇಳಗಳ ಮೂಲಕ ಸಾಧ್ಯವಾಗಿದೆ. ನಮ್ಮ ವಿದ್ಯಾಸಂಸ್ಥೆಯು ಐದು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಬಂದಿದೆ. ಎಐಎಂಎಲ್, ಡೇಟಾ ಎಂಜಿನಿಯರಿಂಗ್, ಬಯೋ ಇನ್ಫಾರ್ಮೆಟಿಕ್ಸ್, ಸೈಬರ್ ಸೆಕ್ಯೂರಿಟಿ, ಬ್ಲಾಕ್ ಚೈನ್ ಸಹಿತ ಅನೇಕ ನವೀನ ಕೋರ್ಸ್ಗಳು ನಮ್ಮಲ್ಲಿ ಇರುವುದರಿಂದ ವಿದ್ಯಾರ್ಥಿಗಳು, ಪೋಷಕರು ನಮ್ಮ ಸಂಸ್ಥೆಗೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ 25 ಸಾವಿರ ವಿದ್ಯಾರ್ಥಿಗಳು ನಮ್ಮಲ್ಲಿ ಕಲಿಯುತ್ತಿದ್ದಾರೆ.

ಅಶೋಕ್ ಭಟ್, ಉಪ ಪ್ರಧಾನ ವ್ಯವಸ್ಥಾಪಕ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ

ಎಲ್ಲ ಕೋರ್ಸ್ಗಳಲ್ಲಿ ಎಐ

ಒಂದೇ ಸೂರಿನಡಿ ವಿವಿಧ ಶಿಕ್ಷಣ ಸಂಸ್ಥೆಗಳ ಮಾಹಿತಿ, ಕೋರ್ಸ್ಗಳ ವಿವರ ಸಿಗಲು ‘ಎಡ್ಯುವರ್ಸ್’ ಕಾರಣವಾಗಿದೆ. ಎಲ್ಲ ಕೋರ್ಸ್ಗಳಿಗೆ ಎಐ ಬಳಸಿದ ಹಿರಿಮೆ ನಮ್ಮ ಸಂಸ್ಥೆಯದ್ದಾಗಿದೆ. ಸ್ಕೂಲ್ ಆಫ್ ಎಂಜಿನಿಯರಿಂಗ್, ಆರೋಗ್ಯ ವಿಜ್ಞಾನ, ಸ್ಕೂಲ್ ಆಫ್ ಮೆಡಿಸಿನ್, ಕಾಲೇಜ್ ಆಫ್ ನರ್ಸಿಂಗ್, ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸ್, ಕಾಲೇಜ್ ಆಫ್ ಫಿಶಿಯೋಥೆರಫಿ ಅನೇಕ ಕೋರ್ಸ್ಗಳಿವೆ. ಬೆಂಗಳೂರಿನಲ್ಲಿ ನಾಲ್ಕು ಕ್ಯಾಂಪಸ್ಗಳಿವೆ. ಇಂಥ ಅವಕಾಶವನ್ನು ವಿದ್ಯಾರ್ಥಿಗಳು, ಪೋಷಕರು ಬಳಸಿಕೊಳ್ಳಬೇಕು.

ಮನೋಜ್ ಕುಮಾರ್ ಜೆ.,
ಸಹಾಯಕ ನಿರ್ದೇಶಕ (ಆಡಳಿತ) ದಯಾನಂದ ಸಾಗರ್ ವಿಶ್ವವಿದ್ಯಾಲಯ

ಯಾವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬೇಕು? ಯಾವ ವಿಷಯ ತೆಗೆದುಕೊಂಡರೆ ಒಳ್ಳೆಯದು ಎಂಬ ಪ್ರಶ್ನೆಗಳು ನನ್ನಲ್ಲಿದ್ದವು. ಉತ್ತಮ ಗುಣಮಟ್ಟದ ಅನೇಕ ಕಾಲೇಜುಗಳ ವಿವರಗಳು ಇಲ್ಲಿ ಒಂದೇ ಕಡೆ ಸಿಕ್ಕಿದವು. ಕಂಪ್ಯೂಟರ್ ಸೈನ್ಸ್ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಪ್ರಮುಖ ವಿದ್ಯಾಸಂಸ್ಥೆಗಳನ್ನು ಒಂದೆಡೆ ಸೇರಿಸಿದೆ.

ಐಶ್ವರ್ಯ, ವಿದ್ಯಾರ್ಥಿನಿ, ದೀಪಾಂಜಲಿ ನಗರ

ನಮ್ಮ ಸುತ್ತಮುತ್ತಲಿನಲ್ಲಿ ಹಲವು ಕಾಲೇಜುಗಳಿವೆ. ಯಾವುದನ್ನು ಆಯ್ಕೆ ಮಾಡಬೇಕು? ಯಾವುದನ್ನು ಬಿಡಬೇಕು ಎಂಬ ಗೊಂದಲಗಳಿದ್ದವು. ಎಲ್ಲಿ ಯಾವ ಕೋರ್ಸ್ ನಮಗೆ ಸೂಕ್ತ ಎಂದು ಆಯ್ಕೆ ಮಾಡಿಕೊಳ್ಳುವ ಅವಕಾಶ ಸಿಕ್ಕಿತು. ಡೇಟಾ ಸೈನ್ಸ್ ಕೋರ್ಸ್ ಮಾಡಬೇಕು ಎಂಬ ಯೋಚನೆ ಬಂದಿದೆ.

ಧನುಶ್ರೀ,
ವಿದ್ಯಾರ್ಥಿನಿ, ಶ್ರೀನಗರ

ಎಷ್ಟೊಂದು ಕಾಲೇಜುಗಳು, ಎಷ್ಟೊಂದು ಕೊರ್ಸ್ಗಳು ಇವೆ ಎಂಬುದು ‘ಎಡ್ಯುವರ್ಸ್’ ಮೇಳಕ್ಕೆ ಬಂದಿದ್ದರಿಂದ ಗೊತ್ತಾಯಿತು. ಕಂಪ್ಯೂಟರ್ ಸೈನ್ಸ್ ಅಥವಾ ಡೇಟಾ ಸೈನ್ಸ್ ಎರಡರಲ್ಲಿ ಒಂದು ಕೋರ್ಸ್ ತಗೊಬೇಕು ಎಂಬ ಯೋಚನೆ ಇದೆ. ಅನೇಕ ಕೋರ್ಸ್ಗಳ ಬಗ್ಗೆ, ಫೀಸ್ ಬಗ್ಗೆ ತಿಳಿಯಲು ಈ ಮೇಳ ಸಹಕಾರಿಯಾಯಿತು.

ಚೈತ್ರಾ,
ವಿದ್ಯಾರ್ಥಿನಿ, ಶ್ರೀನಗರ

ಯಾವ ಕೋರ್ಸ್ಗಳಿವೆ ಎಂದು ತಿಳಿದುಕೊಳ್ಳಲು ಈ ಕಾರ್ಯಕ್ರಮಕ್ಕೆ ಬಂದಿದ್ದೆ. ಹಲವು ಕೋರ್ಸ್ಗಳ ಮಾಹಿತಿ ಸಿಕ್ಕಿತು. ಆರ್ಕಿಟೆಕ್ಟ್ ಅಥವಾ ಏವಿಯೇಶನ್ ಕೋರ್ಸ್ ಮಾಡಬೇಕು ಎಂದಿದ್ದೇನೆ.

ದೀಕ್ಷಿತಾ, ವಿದ್ಯಾರ್ಥಿನಿ, ವಿಜಯನಗರ

ಪೋಷಕರ ಮಾತು

ಯಲಹಂಕದಲ್ಲೊಂದು, ಹೊಸೂರಿನಲ್ಲೊಂದು ಹೀಗೆ ಎಲ್ಲೆಲ್ಲೋ ದೂರದಲ್ಲಿ ಕಾಲೇಜುಗಳಿದ್ದರೆ ಅಲ್ಲೆಲ್ಲ ಅಲೆದಾಡುವುದು ಕಷ್ಟ. ಎಲ್ಲೆಲ್ಲೋ ಇರುವ ಕಾಲೇಜುಗಳ ಮಾಹಿತಿ ಇಲ್ಲಿ ಒಂದೇ ಕಡೆ ಸಿಗುತ್ತಿರುವುದರಿಂದ ನಮ್ಮಂಥ ಪೋಷಕರಿಗೆ ಅನುಕೂಲವಾಗಿದೆ. ಮಗಳನ್ನು ಯಾವ ಕೋರ್ಸ್ಗೆ ಸೇರಿಸಬೇಕು? ಯಾವ ಕಾಲೇಜಿಗೆ ಸೇರಿಸಬೇಕು ಎಂಬ ಬಗ್ಗೆ ‘ಎಡ್ಯುವರ್ಸ್’ ಮೇಳದಲ್ಲಿ ಒಂದು ಐಡಿಯಾ ಸಿಕ್ಕಿದೆ.

ಸುಮಿತ್ರಾ, ವಿಜಯನಗರ

ಕಾಲೇಜು ಅಥವಾ ಕೋರ್ಸ್ಗಳ ಬಗ್ಗೆ ಇಂಟರ್ನೆಟ್ನಲ್ಲಿ

ಹುಡುಕುವುದಕ್ಕಿಂತ ಇಂಥ ಮೇಳಗಳಲ್ಲಿ ನೇರವಾಗಿ ಭಾಗಿಯಾಗಿ ಮಾಹಿತಿ ಪಡೆದಾಗ ಸಿಗುವ ಅನುಭವ ಬೇರೆ. ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ‘ಎಡ್ಯುವರ್ಸ್’ ಅನುಕೂಲ ಮಾಡಿಕೊಟ್ಟಿದೆ. ಕರ್ನಾಟಕದಲ್ಲಿಯೇ ಕಲಿಯಬೇಕು ಎಂದು ಆಸೆ ಇರುವವರಿಗೆ ಬಹಳ ಉಪಕಾರಿಯಾಗಿದೆ.

ಅಶೋಕ, ಕಡಬಗೆರೆ

ಮಗಳು ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡಿದ್ದು, ಪರೀಕ್ಷೆ ಬರೆದಿದ್ದಾಳೆ. ಮುಂದೆ ಏನು ಮಾಡುವುದು ಎಂಬುದನ್ನು ತಿಳಿಯಲು ನಾವು ಈ ಮೇಳಕ್ಕೆ ಬಂದಿದ್ದೇವೆ. ಉತ್ತಮ ಮಾರ್ಗದರ್ಶನ ದೊರೆಯಿತು. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಿಗೆ ಧನ್ಯವಾದಗಳು.

ಚಂದನಾ, ವಿಜಯನಗರ

ಇಂದಿನ ಕಾರ್ಯಕ್ರಮ

‘ಎಡ್ಯುವರ್ಸ್’ ಎಕ್ಸ್ಪೊದ ಎರಡನೇ ದಿನವಾದ ಭಾನುವಾರ ಪ್ರಮುಖವಾಗಿ ಎರಡು ಗೋಷ್ಠಿಗಳು ನಡೆಯಲಿವೆ.

ಬೆಳಿಗ್ಗೆ ನಟ ಧ್ರುವ ಸರ್ಜಾ ಭಾಗವಹಿಸಲಿದ್ದಾರೆ. ಎಚ್ಆರ್ ವೃತ್ತಿ ಜೀವನದ ಅಗತ್ಯತೆ ಬಗ್ಗೆ ಎನ್ಎಚ್ಆರ್ಡಿ ಕಾರ್ಯದರ್ಶಿ ನಾಗನಗೌಡ ಎಸ್.ಜೆ. ಮಾಹಿತಿ ನೀಡಲಿದ್ದಾರೆ. ವಿನ್ಯಾಸ ಚಿಂತನೆ ಮತ್ತು ತಂತ್ರಜ್ಞಾನ ಆಧಾರಿತ ನಾವೀನ್ಯತೆ ಬಗ್ಗೆ ರೇವಾ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರಮೋದ್ ಆರ್. ಕುಲಕರ್ಣಿ ಮಾಹಿತಿ ನೀಡಲಿದ್ದಾರೆ.

ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.