ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಪ್ರಜಾವಾಣಿ‘ ವರದಿ ಫಲಶ್ರುತಿ: ಪಿಯು- ಇತಿಹಾಸ ಪಠ್ಯಕ್ರಮ ಬದಲಿಲ್ಲ

Last Updated 27 ಆಗಸ್ಟ್ 2021, 1:11 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳ ಇತಿಹಾಸ ಪಠ್ಯವಸ್ತುವನ್ನು ಯಥಾಕ್ರಮದಲ್ಲಿಯೇ ಬೋಧಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಹೇಳಿದೆ.

ಈ ಮೊದಲು,ಪಿಯುಸಿ ಇತಿಹಾಸ ವಿಷಯದ ಪಠ್ಯವಸ್ತುವನ್ನು ಇಲಾಖೆಯು ಅವೈಜ್ಞಾನಿಕ ಕ್ರಮದಲ್ಲಿ ನಿಗದಿಪಡಿತ್ತು. ಈ ಕ್ರಮಕ್ಕೆ ಇತಿಹಾಸ ಪ್ರಾಧ್ಯಾಪಕರು, ಉಪನ್ಯಾಸಕರಿಂದ ಆಕ್ಷೇಪ ವ್ಯಕ್ತವಾಗಿತ್ತು.

‘ಇತಿಹಾಸ ವಿರೂಪಗೊಳಿಸಿದ ಪಿಯು ಇಲಾಖೆ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಆ.24ರಂದು ಈ ಬಗ್ಗೆ ವರದಿ ಪ್ರಕಟವಾಗಿತ್ತು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ (2021–22) ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆಎಲ್ಲ ಪಠ್ಯಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಪ್ರತಿಹಂತಕ್ಕೆ ಶೇ 25ರಷ್ಟು ಬೋಧನೆಗೆ ಅಳವಡಿಸಿ ಇಲಾಖೆಯು ಸುತ್ತೋಲೆ ಹೊರಡಿಸಿತ್ತು. ಈ ವೇಳೆ, ಇತಿಹಾಸ ವಿಷಯದ ಮೂಲಸ್ವರೂಪ ಮತ್ತು ವಿನ್ಯಾಸಕ್ಕೆ ತದ್ವಿರುದ್ಧವಾಗಿ ಪಠ್ಯವಸ್ತುವಿನ ಕ್ರಮವನ್ನು ಬದಲಿಸಲಾಗಿತ್ತು.

‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡಿರುವ ಇಲಾಖೆ, ಇತಿಹಾಸವನ್ನು ಯಥಾಕ್ರಮದಲ್ಲಿಯೇ ಬೋಧಿಸುವಂತೆ ಹೇಳಿದೆ. ಈ ಕುರಿತು ಪಠ್ಯಕ್ರಮ ವಸ್ತುವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ’ ಎಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಎಸ್.ಆರ್. ವೆಂಕಟೇಶ್ ಹೇಳಿದರು.

‘ಇತಿಹಾಸದ ಪರಿಷ್ಕೃತ ಪಠ್ಯವಸ್ತುವಿನ ಮೊದಲ ಅವಧಿಯಲ್ಲಿ ಬಹುತೇಕ ಆಧುನಿಕ, ಎರಡನೇ ಅವಧಿಯಲ್ಲಿ ಪ್ರಾಚೀನ, ಮೂರನೇ ಅವಧಿಯಲ್ಲಿ ಮಧ್ಯಕಾಲೀನ, ನಾಲ್ಕನೇ ಅವಧಿಯಲ್ಲಿ ಉಳಿದ ಇತಿಹಾಸವನ್ನು ಬೋಧಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈಗ ಯಥಾ ಕ್ರಮದಲ್ಲಿ, ಅಂದರೆ ಮೊದಲ ಅವಧಿಯಲ್ಲಿ ಪ್ರಾಚೀನ ಇತಿಹಾಸ, ನಂತರ ಮಧ್ಯಕಾಲೀನ, ತದನಂತರ ಆಧುನಿಕ ಇತಿಹಾಸ ಬೋಧಿಸುವ ಕ್ರಮದಲ್ಲಿ ಪಠ್ಯವಸ್ತುವನ್ನು ನೀಡಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT