ಪ್ರಕ್ರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

7

ಪ್ರಕ್ರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

Published:
Updated:

ಬೆಂಗಳೂರು: ಪೀಣ್ಯದಾಸರಹಳ್ಳಿ ಸಮೀಪ 8ನೇ ಮೈಲಿಯ ರಾಷ್ಟ್ರೀಯ ಹೆದ್ದಾರಿ ಬಳಿ 200 ಹಾಸಿಗೆಗಳ ಪ್ರಕ್ರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, 'ಜನರು ತಮ್ಮ ದುಡಿಮೆಯ ಶೇ 16ರಷ್ಟು ಹಣವನ್ನು ಆರೋಗ್ಯ ರಕ್ಷಣೆಗೆ ಬಳಕೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ರೂಪಿಸಿದ್ದು ಈವರೆಗೆ 7.15 ಲಕ್ಷ ಜನರು ಈ ಯೋಜನೆ ಅಡಿ ಸೌಲಭ್ಯ ಪಡೆದಿದ್ದಾರೆ. ಬಡಕುಟುಂಬದ ಪ್ರತಿಯೊಬ್ಬರಿಗೂ ಗೋಲ್ಡನ್ ಕಾರ್ಡ್‌ ವಿತರಣೆ ಮಾಡಿ ₹ 5 ಲಕ್ಷ ಮೊತ್ತದಷ್ಟು ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದೆ’ ಎಂದರು.

ನಟ ಗಣೇಶ್ ಮಾತನಾಡಿ, 'ಪ್ರಕ್ರಿಯಾ ಆಸ್ಪತ್ರೆಯ ವೈದ್ಯರೇ ಮಾಲೀಕರಾಗಿದ್ದು, ಸಾಮಾನ್ಯ ಜನರಿಗೆ ಆರ್ಥಿಕ ಹೊರೆ ಮಾಡದೆ ಜೀವರಕ್ಷಣೆಯ ಮೂಲ ಧ್ಯೇಯದೊಂದಿಗೆ ಸ್ಥಾಪನೆಯಾಗಿರುವುದು ಶ್ಲಾಘನೀಯ' ಎಂದರು. ಡಾ.ಪ್ರಕಾಶ್ ರಾಮಚಂದ್ರ 'ವಿಶೇಷವಾಗಿ ಕ್ಯಾನ್ಸರ್ ಮತ್ತು ಗ್ಯಾಸ್ಟ್ರೋ ಎಂಟರಾಲಜಿ, ಯಕೃತ್ ಸಮಸ್ಯೆಗಳು, ಹೃದ್ರೋಗ, ತಾಯಿ ಮತ್ತು ಶಿಶುವಿನ ಆರೋಗ್ಯ ರಕ್ಷಣೆ ವಿಶೇಷ ಗಮನ ನೀಡಲಾಗಿದೆ. ಉಳಿದಂತೆ ಬೇರೆ ಎಲ್ಲಾ ಸೇವೆಗಳು ಲಭ್ಯವಿದೆ' ಎಂದರು. ಮೂಳೆ ಕ್ಯಾನ್ಸರ್ ತಜ್ಞ ಡಾ.ಶ್ರೀನಿವಾಸ್ 'ಹೆದ್ದಾರಿಯಲ್ಲಿರುವ ಕಾರಣ ಅಪಘಾತ ಸಂಭವಿಸಿದಾಗ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಒಳಗೊಂಡಿದೆ. 31ಕ್ಕೂ ಹೆಚ್ಚು ಬೆಡ್‌ಗಳನ್ನು ಅಪಘಾತ ಚಿಕಿತ್ಸಾ ವಿಭಾಗದಲ್ಲಿ ತೆರೆಯಲಾಗಿದೆ' ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !