ಶನಿವಾರ, ನವೆಂಬರ್ 23, 2019
17 °C

ಶಾಲಾ ವಾಹನ ಚಾಲಕರ ಸಮಾವೇಶ 23ಕ್ಕೆ

Published:
Updated:

ಬೆಂಗಳೂರು: ಅಸಂಘಟಿತ ವಲಯದ ಚಾಲಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರೂಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘ ಇದೇ 23ರಂದು ಶಾಲಾ ವಾಹನ ಚಾಲಕರ ಸಮಾವೇಶ ಹಮ್ಮಿಕೊಂಡಿದೆ. 

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಎಸ್.ಷಣ್ಮುಗಂ,‘ಶಾಲಾ ವಾಹನ ಚಾಲಕರು ಮಕ್ಕಳನ್ನು ಶಾಲೆಗೂ–ಮನೆಗೂ ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿಯುತ ಸೇವೆಯಲ್ಲಿದ್ದಾರೆ. 2013ರಲ್ಲಿ ಸಾರಿಗೆ ಇಲಾಖೆ ಕರ್ನಾಟಕ ಸ್ಕೂಲ್‌ ಕ್ಯಾಬ್‌ ಯೋಜನೆಯ ಬಗ್ಗೆ ಆದೇಶ ಹೊರಡಿಸಿತ್ತು. ಆದರೆ, 5 ವರ್ಷವಾದರೂ ಅದು ಜಾರಿಯಾಗಿಲ್ಲ’ ಎಂದು ದೂರಿದರು.

‘ರಾಜ್ಯ ಸರ್ಕಾರ ಕೂಡಲೇ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು. ಶಾಲೆಗಳಿಂದ ವಾಹನಗಳಿಗೆ ಪರವಾನಗಿ ನೀಡಬೇಕು. ಶಾಲಾ ಒಡೆತನದ ವಾಹನಗಳಿಗೆ ನಿಗದಿ ಪಡಿಸಿರುವ ತೆರಿಗೆಯನ್ನೇ ಖಾಸಗಿ ವಾಹನಗಳಿಗೂ ನಿಗದಿ ಪಡಿಸಬೇಕು.ಖಾಸಗಿ ಶಾಲಾ ವಾಹನಗಳಿಗೆ ಶಾಲೆಗಳ ಸಮೀಪದಲ್ಲೇ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

 

ಪ್ರತಿಕ್ರಿಯಿಸಿ (+)