ಬೆಂಗಳೂರು: ಡೀಸೆಲ್ ದರ ಏರಿಕೆ ಮತ್ತು ಇತರ ಕಾರಣಗಳಿಂದಾಗಿ ಶುಕ್ರವಾರ ರಾತ್ರಿ 12ರಿಂದ ಜಾರಿಗೆ ಬರುವಂತೆ ಶೇ 10ರಿಂದ ಶೇ 30ರವರೆಗೆ ದರ ಹೆಚ್ಚಳ ಮಾಡಲು ಖಾಸಗಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲು ಬಸ್ ಮಾಲೀಕರು ನಿರ್ಧರಿಸಿದ್ದಾರೆ.

ಕಾಂಟ್ರ್ಯಾಕ್ಟ್ ಕ್ಯಾರಿಯೇಜ್, ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ಬಸ್ಗಳಿಗೆ ಇದು ಅನ್ವಯವಾಗಲಿದೆ.

‘ಶಕ್ತಿ’ ಯೋಜನೆ ಜಾರಿಯಾದ ಮೇಲೆ ಖಾಸಗಿ ಬಸ್ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಯಿತು. ಟೋಲ್ಗಳಲ್ಲಿ ಶೇ 5ರಿಂದ ಶೇ 10ರಷ್ಟು ಸುಂಕವನ್ನು ಏಪ್ರಿಲ್ 1ರಿಂದ ಹೆಚ್ಚಿಸಿರುವುದರಿಂದ ಮತ್ತೆ ಹೊಡೆತ ಬಿತ್ತು. ಈಗ ಡೀಸೆಲ್ ದರ ಏರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಡೀಸೆಲ್ ದರ ಲೀಟರ್ಗೆ ₹3 ಜಾಸ್ತಿಯಾಗಿರುವುದು ಒಂದೇ ಕಾರಣವಲ್ಲ, ಈ ಮೂರೂ ಕಾರಣಗಳಿಂದಾಗಿ ಪ್ರಯಾಣ ದರವನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ’ ಎಂದು ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್. ನಟರಾಜ ಶರ್ಮ ತಿಳಿಸಿದ್ದಾರೆ.

‘ಟೋಲ್ಗಳು ಕಡಿಮೆ ಇರುವ ಮಾರ್ಗಗಳಲ್ಲಿ ದರ ಏರಿಕೆಯೂ ಕಡಿಮೆ ಇರಲಿದೆ. ಟೋಲ್ ಹೆಚ್ಚಿರುವಲ್ಲಿ ದರ ಏರಿಕೆಯ ಪ್ರಮಾಣ ಹೆಚ್ಚಿರಲಿದೆ. ಎಲ್ಲ ಬಸ್ ಮಾಲೀಕರು ಈ ಬಗ್ಗೆ ಚರ್ಚೆ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ದರ ಏರಿಕೆಯ ಪರಿಣಾಮವಾಗಿ ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ಮೊದಲು ಇದ್ದ ಸಾಮಾನ್ಯ ದರವು ₹1,000ದಿಂದ ₹1,200ಕ್ಕೆ ಏರಿಕೆಯಾಗಲಿದೆ. ಬೆಂಗಳೂರು–ಬಾಗಲಕೋಟೆ ಮಾರ್ಗದಲ್ಲಿ ₹800 ಇದ್ದ ದರ ₹1,000ಕ್ಕೆ ಏರಿಕೆಯಾಗಿದೆ. ಬೆಂಗಳೂರು–ಕಲಬುರಗಿ ಮಾರ್ಗದಲ್ಲಿ ₹1,200 ಇದ್ದ ದರ ಈಗ ₹1,400–₹1,500ರವರೆಗೆ ಹೆಚ್ಚಳವಾಗಲಿದೆ.

ಸ್ಟೇಟ್ ಕ್ಯಾರಿಯೇಜ್ಗಳಲ್ಲೂ ಹೆಚ್ಚಳ

‘ಸ್ಟೇಟ್ ಕ್ಯಾರಿಯೇಜ್ ಬಸ್ಗಳಲ್ಲಿ ಟಿಕೆಟ್ ದರವನ್ನು ಏರಿಸುವ ಅಧಿಕಾರವು ಬಸ್ ಮಾಲೀಕರಿಗೆ ಇಲ್ಲ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ದರ ನಿಗದಿ ಮಾಡುತ್ತದೆ. ಈ ಬಾರಿ ಹೆಚ್ಚಳ ಮಾಡಲು ಅವರಿಗೆ ಎರಡು ಮೂರು ದಿನಗಳಲ್ಲಿ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಸ್ಟೇಟ್ ಕ್ಯಾರಿಯೇಜ್ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.

‘ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ. ಖರ್ಚು ಎಷ್ಟು ಎಂದು ಲೆಕ್ಕಾಚಾರ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.