ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಸಗಿ ಆಸ್ಪತ್ರೆ: ಮಾಹಿತಿ ಫಲಕ ಕಡ್ಡಾಯ - ಆರೋಗ್ಯ ಇಲಾಖೆ ಸೂಚನೆ

Published 3 ಆಗಸ್ಟ್ 2024, 14:40 IST
Last Updated 3 ಆಗಸ್ಟ್ 2024, 14:40 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (ಕೆಪಿಎಂಇ) ವೈದ್ಯಕೀಯ ಸಂಸ್ಥೆಗಳು ನೋಂದಣಿ ಸಂಖ್ಯೆ, ಸಂಸ್ಥೆ, ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಈ ಬಗ್ಗೆ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ.

ಈ ಮೊದಲು ನಿಗದಿಪಡಿಸಿದ ಅಳತೆಯ ಫಲಕಗಳನ್ನು ಕ್ಲಿನಿಕ್‌ಗಳಲ್ಲಿ ಅಳವಡಿಸುವುದು ಕಷ್ಟಸಾಧ್ಯ ಎಂದು ತಿಳಿಸಿದ್ದ ಭಾರತೀಯ ವೈದ್ಯಕೀಯ ಸಂಘ, ಅಳತೆಯ ನಿಯಮ ಸಡಿಲಿಸಲು ಕೋರಿತ್ತು. ಹೀಗಾಗಿ, ಮಾಹಿತಿ ಫಲಕದ ಅಳತೆಯನ್ನು ಕನಿಷ್ಠ 5 ಅಡಿ ಅಗಲ ಹಾಗೂ 2.5 ಅಡಿ ಉದ್ದಕ್ಕೆ ನಿಗದಿಪಡಿಸಲಾಗಿದೆ. ಆಸ್ಪತ್ರೆಗಳು ಮೊದಲಿನ ಆದೇಶದಂತೆ ಕನಿಷ್ಠ 7 ಅಡಿ ಅಗಲ, 3 ಅಡಿ ಉದ್ದದ ಫಲಕವನ್ನು ಅಳವಡಿಸಬೇಕು ಎಂದು ತಿಳಿಸಿದೆ. ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. 

ಫಲಕದಲ್ಲಿ ಮೂರು ಸಾಲು ಮಾತ್ರ ಇರಬೇಕು. ಮೊದಲ ಸಾಲಿನಲ್ಲಿ ಕೆಪಿಎಂಇ ನೋಂದಣಿ ಸಂಖ್ಯೆ, ಎರಡನೆ ಸಾಲಿನಲ್ಲಿ ಆಸ್ಪತ್ರೆಯ ಹೆಸರು, ಮೂರನೆ ಸಾಲಿನಲ್ಲಿ ಮಾಲೀಕರ ಅಥವಾ ವ್ಯವಸ್ಥಾಪಕ ಹೆಸರನ್ನು ನಮೂದಿಸಬೇಕು. ಫಲಕದಲ್ಲಿ ನಮೂದಿಸಿರುವ ಅಕ್ಷರಗಳು ಎದ್ದು ಕಾಣುವಂತೆ ಕಪ್ಪು ಅಕ್ಷರದಲ್ಲಿ ಇರಬೇಕು. ಅದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಇರಬಾರದು ಎಂದು ಹೇಳಲಾಗಿದೆ. 

ಅಲೋಪಥಿ ಚಿಕಿತ್ಸಾ ಪದ್ಧತಿ ಒದಗಿಸುವ ವೈದ್ಯಕೀಯ ಸಂಸ್ಥೆಗಳು ಆಕಾಶ ನೀಲಿ ಬಣ್ಣದ ಫಲಕಗಳನ್ನು, ಆಯುಷ್ ಚಿಕಿತ್ಸಾ ಪದ್ಧತಿ ಅನುಸರಿಸುವ ಸಂಸ್ಥೆಗಳು ತಿಳಿ ಹಸಿರು ಬಣ್ಣದ ಫಲಕ ಬಳಸಬೇಕು ಎಂದು ಸೂಚಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT