ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ.ರಾಮಕೃಷ್ಣರಾವ್ ನಿಧನ

Last Updated 12 ಸೆಪ್ಟೆಂಬರ್ 2022, 19:05 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೈಸ್ಟ್ ಕಾಲೇಜಿನ ಭೌತವಿಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗಗಳ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕೆ ಮಹತ್ವದ ಲೇಖನಗಳನ್ನು ಬರೆದಿದ್ದ ಪ್ರೊ. ಎಚ್‌.ಆರ್. ರಾಮಕೃಷ್ಣರಾವ್ (87) ಸೋಮವಾರ ಸಂಜೆ ನಿಧನರಾದರು.

ಜಯನಗರದ 7ನೇ ಹಂತದಲ್ಲಿ ವಾಸವಿದ್ದ ಇವರಿಗೆ ಮೂವರು ಪುತ್ರಿಯರು ಇದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ರಾಮಕೃಷ್ಣರಾವ್ ಜನಿಸಿದ್ದರು. ತಂದೆ ಎಚ್‌.ವಿ. ರಂಗರಾವ್, ತಾಯಿ ರಾಧಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದ ರಾಮಕೃಷ್ಣರಾವ್, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ, ಎಂ.ಎಸ್ಸಿ ಪದವಿ ಪಡೆದಿದ್ದರು. ಕ್ರೈಸ್ಟ್ ಕಾಲೇಜಿನ ಪ್ರಾಧ್ಯಾಪಕರಾಗಿ
ವೃತ್ತಿ ಆರಂಭಿಸಿದ್ದರು. ಕ್ರೈಸ್ಟ್‌ ಕಾಲೇಜು ಕನ್ನಡ ಸಂಘ ಸ್ಥಾಪನೆಯಾಗುವಲ್ಲಿಯೂ ಅವರ ಪಾತ್ರವಿತ್ತು.

ದೂರದರ್ಶನ ಹಾಗೂ ಆಕಾಶವಾಣಿ ಬಾನುಲಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದ ರಾಮಕೃಷ್ಣರಾವ್, ವಿಜ್ಞಾನ ವಿಷಯಗಳ 150ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದರು. ಡಾ. ರಾಜಾರಾಮಣ್ಣ, ಡಾ.ಸಿ.ಎನ್‌.ಆರ್. ರಾವ್, ಡಾ. ಯು.ಆರ್.ರಾವ್ ತರಹದ ವಿಜ್ಞಾನಿಗಳೊಟ್ಟಿಗೆಮುಖ್ಯವಾದಸಂವಾದಗಳನ್ನುನಡೆಸಿದ್ದರು. ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಫೆಲೋಶಿಪ್ಗೌರವಕ್ಕೂ ಪಾತ್ರರಾಗಿದ್ದರು. ಉದಯಭಾನು ಕಲಾಸಂಘದ ಗೌರವ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದರು. 2012ರಲ್ಲಿ ‘ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ’ಯ ಅಧ್ಯಕ್ಷರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದರು.

‘ನಿಶ್ಶಬ್ದದೊಳಗಿನ ಶಬ್ದ’, ‘ಶಕ್ತಿಗಾಥೆ’, ‘ಪರಮಾಣು ಪ್ರಪಂಚ’ ಹಾಗೂ ‘ಅದೃಶ್ಯ ಬೆಳಕು–ಎಕ್ಸ್‌ರೇ’ ಸೇರಿದಂತೆ ಹಲವು ಕೃತಿಗಳನ್ನು ರಾಮಕೃಷ್ಣರಾವ್ ರಚಿಸಿದ್ದರು. ‘ಅಂತರಿಕ್ಷ’, ‘ಶುಕ್ರ ಸಂಕ್ರಮ’, ‘ಒಲವಿನ ಶಿಲೆ– ಅಯಸ್ಕಾಂತ್’, ‘ನಂಬಿಕೆ– ಮೂಢನಂಬಿಕೆ’, ‘ಕಲಾಂ ಮೇಷ್ಟ್ರು’ ಹಾಗೂ ‘ಕನ್ನಡದಲ್ಲಿ ವಿಜ್ಞಾನ ಸಂವಹನ’ ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿದ್ದರು. ಬೆಂಗಳೂರಿನ ಪಿಯು ವಿದ್ಯಾರ್ಥಿಗಳಿಗಾಗಿ ಭೌತವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ರಚಿಸಿದ್ದರು.

‘ರಾಮಕೃಷ್ಣರಾವ್ ಅವರ ಅಂತಿಮ ಸಂಸ್ಕಾರವನ್ನು ಚಾಮರಾಜಪೇಟೆಯಲ್ಲಿ ಮಂಗಳವಾರ ನಡೆಸಲಾಗುವುದು’ ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT