ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ರಂಗಭೂಮಿ ಕೇಂದ್ರಕ್ಕೆ ವಿಶೇಷಾಧಿಕಾರಿಯಾಗಿ ಪಿ.ಗಂಗಾಧರಸ್ವಾಮಿ ನೇಮಕ

Last Updated 20 ಜುಲೈ 2019, 19:14 IST
ಅಕ್ಷರ ಗಾತ್ರ

ಬೆಂಗಳೂರು: ದಾವಣಗೆರೆ ಜಿಲ್ಲೆ ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ನಿರ್ಮಾಣಗೊಳ್ಳಲಿರುವ ಉದ್ದೇಶಿತ ವೃತ್ತಿ ರಂಗಭೂಮಿ ಕೇಂದ್ರಕ್ಕೆ ವಿಶೇಷಾಧಿಕಾರಿಯನ್ನಾಗಿ ಮೈಸೂರಿನ ಹಿರಿಯ ರಂಗ ನಿರ್ದೇಶಕ ಪಿ.ಗಂಗಾಧರಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.

ಮೈಸೂರು, ಧಾರವಾಡ ರಂಗಾಯಣಗಳ ಹುಟ್ಟು ಬೆಳವಣಿಗೆಯಲ್ಲಿ ಅಪಾರ ಶ್ರಮ ಮತ್ತು ಸೇವೆ ಸಲ್ಲಿಸಿದ ಗಂಗಾಧರಸ್ವಾಮಿ ಬಹುಶೃತ ರಂಗಕರ್ಮಿ. ಅನೇಕ ನಾಟಕ ಕಂಪನಿಗಳಿಗೆ ವೃತ್ತಿ ನಾಟಕಗಳ ನಿರ್ದೇಶನ ಮಾಡಿರುವ ಅವರು ಪ್ರಯೋಗಶೀಲತೆಯ ಆಧುನಿಕ ರಂಗಭೂಮಿ ಸೇರಿದಂತೆ, ಜನಪದ ರಂಗಭೂಮಿಯ ದೊಡ್ಡಾಟದಲ್ಲೂ ಪರಿಣತಿ ಹೊಂದಿದವರು. ಸಮುದಾಯ ರಂಗ ಸಂಘಟನೆಯ ಸ್ಥಾಪಕರಲ್ಲೊಬ್ಬರಾದ ಗಂಗಾಧರಸ್ವಾಮಿ ಎಡ ಮತ್ತು ಪ್ರಜಾಸತ್ತಾತ್ಮಕ ವಿಚಾರಧಾರೆ ಯುಳ್ಳವರು. ನಟ, ನಿರ್ದೇಶಕ, ನೇಪಥ್ಯ ರಂಗ ಶಿಕ್ಷಕರಾಗಿ ಮೈಸೂರು ರಂಗಾಯಣದಲ್ಲಿ ಬಿ.ವಿ.ಕಾರಂತರೊಂದಿಗೆ ಕೆಲಸ ಮಾಡಿದ ಅನನ್ಯತೆ ಅವರದು.

ಕೊಂಡಜ್ಜಿಯಲ್ಲಿ ಈ ಹಿಂದೆ ಸಮುದಾಯದ ಅನೇಕ ಶಿಬಿರಗಳನ್ನು ನಡೆಸಿ ಕೊಟ್ಟಿರುವ ಅವರು " ರಂಗ ಶಿಬಿರಗಳ ಚಕ್ರವರ್ತಿ " ಎಂತಲೇ ಹೆಸರಾದವರು. ಕೊಂಡಜ್ಜಿಯ ನೂತನ ವೃತ್ತಿ ರಂಗಭೂಮಿ ಕೇಂದ್ರವನ್ನು, ಪರಂಪರೆ ಮತ್ತು ಪ್ರಯೋಗಶೀಲ ರಂಗ ಚಿಂತನೆಯ ಕೊಂಡಿಯಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT