‘ಕೈಉತ್ಪನ್ನಗಳಿಗೆ ಶೂನ್ಯ ಕರ ವಿಧಿಸಿ’

7

‘ಕೈಉತ್ಪನ್ನಗಳಿಗೆ ಶೂನ್ಯ ಕರ ವಿಧಿಸಿ’

Published:
Updated:

ಬೆಂಗಳೂರು: ಕೈಉತ್ಪನ್ನಗಳಿಗೆ ಶೂನ್ಯ ಕರ ವಿಧಿಸುವಂತೆ ಆಗ್ರಹಿಸಿ ಗ್ರಾಮ ಸೇವಾ ಸಂಘ ಜುಲೈ 1 ರಂದು ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಲಿದೆ.

ಕೇಂದ್ರ ಸರ್ಕಾರ ಜುಲೈ 1 ಅನ್ನು ಜಿಎಸ್‌ಟಿ ದಿನವೆಂದು ಘೋಷಿಸಿದೆ. ಕೈಉತ್ಪಾದಕರಿಗೂ, ಬೃಹತ್ ಕೈಗಾರಿಕೆಗಳಿಗೂ ಒಂದೇ ಜಿಎಸ್‌ಟಿ  ತೆರಿಗೆ ವಿಧಿಸಿದೆ. ಈ ಹಿಂದೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ 29 ಕೈ ಉತ್ಪನ್ನಗಳಿಗೆ ಶೂನ್ಯ ಕರ ವಿಧಿಸುವುದಾಗಿ ಘೋಷಿಸಿದ್ದರು. ಅದು ಘೋಷಣೆಯಾಗಿಯೇ ಉಳಿದಿದೆ. 

ಗ್ರಾಮೀಣ ಉತ್ಪಾದಕತೆ ಕುಸಿದು ಹೋಗಿರುವ ಈ ಸಂದರ್ಭದಲ್ಲಿ ತೆರಿಗೆ ಪಾವತಿ ಅಸಾಧ್ಯ. ಹೀಗಾಗಿ  ಜುಲೈ 1ರಂದು ‘ಹೇ ರಾಮ್!’, ಕೈಉತ್ಪನ್ನಗಳಿಗೆ ಜಿ.ಎಸ್.ಟಿ! ಎಂಬ ಪ್ರತಿಭಟನೆಯನ್ನು ಟೌನ್ ಹಾಲ್ ಮುಂಭಾಗ ನಡೆಸಲಿದ್ದೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಅಭಿಲಾಷ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !