ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಅಮಿತ್ ಶಾ ರಾಜೀನಾಮೆಗೆ ಆಗ್ರಹ

ಕಾಂಗ್ರೆಸ್‌ ಮುಖಂಡರಿಂದ ಪ್ರತಿಭಟನೆ
Last Updated 21 ಜುಲೈ 2021, 19:27 IST
ಅಕ್ಷರ ಗಾತ್ರ

ಬೆಂಗಳೂರು: ‘ಪೆಗಾಸಸ್’ ಎಂಬ ಕುತಂತ್ರಾಂಶ ಬಳಸಿ, ವಿರೋಧ‍ಪಕ್ಷದ ನಾಯಕರ ಗೋಪ್ಯತೆ ಪತ್ತೆ ಹಚ್ಚುವ ಮೂಲಕ ವಾಕ್‌ ಸ್ವಾತಂತ್ರ್ಯದ ಹಕ್ಕನ್ನು ಕಗ್ಗೊಲೆ ಮಾಡಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ನರೇಂದ್ರ ಮೋದಿ ದುರಾಡಳಿತದಲ್ಲಿ ದೇಶ ಇಂದು ಆರ್ಥಿಕತೆಯಲ್ಲಿ ಕುಸಿಯುತ್ತಿದೆ. ಕೋವಿಡ್‌ ಅಲೆ ತಡೆಯುವಲ್ಲಿ ವಿಫಲವಾಗಿದೆ. ನಿರುದ್ಯೋಗ ಹೆಚ್ಚುತ್ತಿದೆ, ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಇವುಗಳ ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ದಿಟ್ಟ ಹೋರಾಟಗಳನ್ನು ಹತ್ತಿಕ್ಕಲು ವಾಮಮಾರ್ಗದಲ್ಲಿ ‘ಪೆಗಾಸಸ್‌’ ಕುತಂತ್ರಾಂಶ ಬಳಸುತ್ತಿದೆ’ ಎಂದು ಸಮಿತಿಯ ಮುಖಂಡಎಸ್.ಮನೋಹರ್ ಖಂಡಿಸಿದರು.

ಕಾಂಗ್ರೆಸ್‌ ಮುಖಂಡ ಜಿ.ಜನಾರ್ದನ್, ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಎ.ಆನಂದ್, ಶೇಖರ್, ಜಯಸಿಂಹ, ಪ್ರಕಾಶ್, ಆದಿತ್ಯ, ಉಮೇಶ್, ಚಂದ್ರಶೇಖರ್, ಪುಟ್ಟರಾಜು ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT