ಬೆಂಗಳೂರು: ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಸುಗಮ ಸಂಚಾರಕ್ಕಾಗಿ ‘ಜೀರೋ ಟ್ರಾಫಿಕ್’ ವ್ಯವಸ್ಥೆ ಮಾಡಿದ್ದಕ್ಕೆ ಬೇಸತ್ತ ವ್ಯಕ್ತಿಯೊಬ್ಬರು ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿರುವುದು ಎಚ್ಎಎಲ್ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ ನಡೆದಿದೆ.

ರಾಜ್ಯಪಾಲರ ಸಂಚಾರಕ್ಕಾಗಿ ಸಂಚಾರ ಪೊಲೀಸರು ಈ ರಸ್ತೆಯನ್ನು ಅರ್ಧ ಗಂಟೆ ಸಂಪೂರ್ಣವಾಗಿ ಬಂದ್ ಮಾಡಿದ್ದರು. ರಸ್ತೆಯ ಈ ಭಾಗದಲ್ಲಿ ಅಂಡರ್ಪಾಸ್ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಸಂಚರಿಸಲು ಇಕ್ಕಟ್ಟಾಗಿದೆ. ಇದರ ನಡುವೆ ನಿರ್ಬಂಧ ವಿಧಿಸಿದ್ದರ ಪರಿಣಾಮ ದಟ್ಟಣೆ ಉಂಟಾಗಿ ನೂರಾರು ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಯಿತು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿ, ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಬಂದ ಪೊಲೀಸರು, ‘ಎದ್ದೇಳುತ್ತೀಯಾ, ಇಲ್ಲ ಬೇರೆ ಕೆಲಸ ಮಾಡಬೇಕಾ’ ಎಂದು ಗದರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ, ‘ಸರ್, ನನ್ನ ಪತ್ನಿ ಗರ್ಭಿಣಿ, ಕಾರಿನಲ್ಲಿ ಕುಳಿತು ಒದ್ದಾಡುತ್ತಿದ್ದಾರೆ. ಆಸ್ಪತ್ರೆಗೆ ಹೇಗೆ ಕರೆದುಕೊಂಡು ಹೋಗಲಿ, ದಾರಿ ಬಿಡಿ’ ಎಂದು ಅಂಗಲಾಚಿದ್ದಾರೆ.

ಇದಕ್ಕೆ ಮತ್ತೆ ಪೊಲೀಸರು, ‘ನೀನೂ ವಿಐಪಿನೇ. ಎರಡು ನಿಮಿಷ ಹೊರಗೆ ನಿಲ್ಲು’ ಎಂದಿದ್ದಾರೆ. ನಂತರ ವ್ಯಕ್ತಿಯನ್ನು ಪೊಲೀಸರು ಸಮಾಧಾನಪಡಿಸಿ ಕಳುಹಿಸಿದ್ದಾರೆ.

ವ್ಯಕ್ತಿ ಹಾಗೂ ಸಂಚಾರ ಪೊಲೀಸರೊಂದಿಗೆ ವಾಗ್ವಾದ ನಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪರ–ವಿರೋಧ ಚರ್ಚೆಗಳು ಆರಂಭವಾಗಿವೆ. ನೆಟ್ಟಿಗರು ಈ ಬಗ್ಗೆ ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು, ‘ಜನರು ಅದಕ್ಕೆ ಧ್ವನಿಯಾಗಬೇಕಿತ್ತು ಮತ್ತು ರಸ್ತೆಯಲ್ಲಿ ಕುಳಿತಿದ್ದ ಆ ವ್ಯಕ್ತಿಗೆ ಬೆಂಬಲ ನೀಡಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ದಿಟ್ಟ ಹೆಜ್ಜೆಗಳಿಗೆ ಸಾರ್ವಜನಿಕರ ಬೆಂಬಲ ಅತ್ಯಗತ್ಯ ಎಂದು ಹೇಳಿದ್ದಾರೆ.

‘ವೈದ್ಯಕೀಯ ತುರ್ತು ಇದ್ದಾಗಲೂ ಹೀಗೆ ರಸ್ತೆ ಬಂದ್ ಮಾಡಿರುವುದು ಎಷ್ಟು ಸರಿ?’ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ವಿಐಪಿಗಳಿಗೊಂದು ನ್ಯಾಯ, ಸಾಮಾನ್ಯ ಜನರಿಗೊಂದು ನ್ಯಾಯವೇ?’ ಎಂಬ ಟೀಕೆಗಳೂ ಜಾಲತಾಣದಲ್ಲಿ ಇವೆ.

ಉನ್ನತ ಹುದ್ದೆಯಲ್ಲಿರುವವರ ಸಂಚಾರದ ವೇಳೆ, ಆಂಬುಲೆನ್ಸ್ನಂತಹ ತುರ್ತು ವಾಹನಗಳನ್ನೂ ತಡೆಹಿಡಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.