ಸೈಕ್‌ ಎಡ್‌ ರಸಪ್ರಶ್ನೆ: ನೋಂದಣಿ ಆರಂಭ

7

ಸೈಕ್‌ ಎಡ್‌ ರಸಪ್ರಶ್ನೆ: ನೋಂದಣಿ ಆರಂಭ

Published:
Updated:

ಬೆಂಗಳೂರು: ಫೋರ್ಟಿಸ್‌ ಆಸ್ಪತ್ರೆಯ ಮಾನಸಿಕ ಆರೋಗ್ಯ ಮತ್ತು ನಡವಳಿಕಾ ವಿಜ್ಞಾನಗಳ ವಿಭಾಗದ ಆಶ್ರಯದಲ್ಲಿ ಮನೋವಿಜ್ಞಾನದ ರಸಪ್ರಶ್ನೆ ಸ್ಪರ್ಧೆ- ಸೈಕ್-ಎಡ್ (ಮೂರನೇ ಆವೃತ್ತಿ)ಗೆ ನೋಂದಣಿ ಆರಂಭವಾಗಿದೆ. ಜುಲೈ 30 ನೋಂದಣಿಗೆ ಕೊನೆಯ ದಿನ. ಆ. 7ರಂದು ಸ್ಪರ್ಧೆಯ ಆನ್‌ಲೈನ್‌ ಸುತ್ತು ನಡೆಯಲಿದೆ. 11 ಮತ್ತು 12ನೇ (ಪ್ಲಸ್‌ 2) ತರಗತಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳು ಮನೋವಿಜ್ಞಾನದಲ್ಲಿ ಆಸಕ್ತಿ ಬೆಳೆಸುವಂತೆ ಮಾಡುವುದು ಈ ಸ್ಪರ್ಧೆಯ ಉದ್ದೇಶ. 

ಡಾ.ಸಮೀರ್‌ ಪಾರೀಖ್‌ ಈ ಸ್ಪರ್ಧೆಯನ್ನು ವಿನ್ಯಾಸಗೊಳಿಸಿದ್ದಾರೆ. ಪ್ರತಿ ಶಾಲೆಯವರು ಸ್ಪರ್ಧೆಗೆ ಅರ್ಹರಾದ ತರಗತಿಗಳ ಮೂವರು ವಿದ್ಯಾರ್ಥಿಗಳನ್ನೊಳಗೊಂಡ ತಂಡವನ್ನು ನಾಮ ನಿರ್ದೇಶನ ಮಾಡಬಹುದು. ಈ ವಿದ್ಯಾರ್ಥಿಗಳು ಮೂರು ಸುತ್ತುಗಳಲ್ಲಿ ಸ್ಪರ್ಧಿಸಬೇಕಾಗುತ್ತದೆ. ಮೂರು ಸುತ್ತುಗಳಲ್ಲಿ ಆನ್‍ಲೈನ್ ರಸಪ್ರಶ್ನೆ, ಪ್ರಾದೇಶಿಕ ಸುತ್ತು ಮತ್ತು ಅಂತಿಮ ಸ್ಪರ್ಧೆಗಳು ನಡೆಯಲಿವೆ. ಆನ್‍ಲೈನ್ ರಸಪ್ರಶ್ನೆ ಆಯಾ ಶಾಲೆಯ ಆವರಣದಲ್ಲಿ ನಡೆಯಲಿದೆ. ಪ್ರತಿ ವಲಯದಿಂದ 12 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ತಂಡಗಳು ಪ್ರಾದೇಶಿಕ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಈ ಸ್ಪರ್ಧೆಗಳು ದೆಹಲಿ, ಚಂಡೀಗಡ, ಜೈಪುರ, ಮುಂಬಯಿ, ಬೆಂಗಳೂರು ಮತ್ತು ಕೊಲ್ಕತ್ತಾಗಳಲ್ಲಿ ನಡೆಯಲಿವೆ. ಪ್ರತಿ ವಲಯದ ವಿಜೇತ ತಂಡಗಳು ಅಂತಿಮ ಸ್ಪರ್ಧೆಯಲ್ಲಿ ಪೈಪೋಟಿ ನಡೆಸಲಿದ್ದು ಈ ಸ್ಪರ್ಧೆ ಸೆ.1ರಂದು ರಾಷ್ಟ್ರದ ರಾಜಧಾನಿ ವಲಯದಲ್ಲಿ ನಡೆಯಲಿದೆ.

ವಿಜೇತ ತಂಡಕ್ಕೆ ₹ 1 ಲಕ್ಷ ನಗದು ಬಹುಮಾನ, ಜಿ.ಡಿ.ಗೋಯೆಂಕಾ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿ ವೇತನ, ಫೋರ್ಟಿಸ್‌ ಹೆಲ್ತ್‌ಕೇರ್‌ನ ಮಾನಸಿಕ ಮತ್ತು ನಡವಳಿಕಾ ವಿಜ್ಞಾನ ವಿಭಾಗದಲ್ಲಿ ಇಂಟರ್ನ್‌ ಆಗುವ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ www.fortispsyched.com ಜಾಲ ತಾಣ ನೋಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !