ಬುಧವಾರ, ಡಿಸೆಂಬರ್ 2, 2020
25 °C

ಪಿಯು ಫಲಿತಾಂಶ ಸುಧಾರಣೆಗೆ ತರಬೇತಿ ತಾರತಮ್ಯಕ್ಕೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶವನ್ನು ಉತ್ತಮಪಡಿಸುವ ಸಲುವಾಗಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ಎರಡು ದಿನಗಳ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು, ಖಾಸಗಿ ಕಾಲೇಜುಗಳನ್ನು ದೂರ ಇಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಜಿಲ್ಲಾ ಮಟ್ಟದ ಉಪನ್ಯಾಸಕರ ತರಬೇತಿ ಕಾರ್ಯಕ್ರಮ 30, 31ರಂದು ನಡೆಯಲಿದ್ದು, ಅಲ್ಲಿ ತರಬೇತಿ ನೀಡಲಿರುವ ಉಪನ್ಯಾಸಕರಿಗೆ ತರಬೇತಿ ನೀಡುವ ಕಾರ್ಯಕ್ರಮ ಇದೇ 20 ಮತ್ತು 21ರಂದು ನಡೆದಿತ್ತು.

‘ಪಿಯು ಪರೀಕ್ಷೆಯನ್ನು ಸರ್ಕಾರಿ, ಅನುದಾನಿತ, ಖಾಸಗಿ ಎಂಬ ಭೇದ ಇಲ್ಲದೆ ಎಲ್ಲರಿಗೂ ಒಟ್ಟಾಗಿ ನಡೆಸಲಾಗುತ್ತಿದೆ. ಆದರೆ ತರಬೇತಿಯನ್ನು ಮಾತ್ರ ಸರ್ಕಾರಿ, ಅನುದಾನಿತ ಕಾಲೇಜು ಉಪನ್ಯಾಸಕರಿಗೆ ನೀಡುವುದರ ಔಚಿತ್ಯವೇನು? ಪ್ರಶ್ನೆಪತ್ರಿಕೆ ತಯಾರಿಯ ಬಗ್ಗೆಯೂ ಗೊತ್ತಿರುವುದು ಈ ಎರಡು ವರ್ಗದ ಉಪನ್ಯಾಸಕರಿಗೆ ಮಾತ್ರ. ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಮೂಲಕ ಭಾರಿ ಅನ್ಯಾಯ ಆಗುತ್ತಿದ್ದು, ಇಂತಹ ತಾರತಮ್ಯವನ್ನು ನಿವಾರಿಸಬೇಕು’ ಎಂದು ಹಲವು ಖಾಸಗಿ ಕಾಲೇಜುಗಳ ಉಪನ್ಯಾಸಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು