ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಬ್ಲಿಕ್ ಐ’:ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಫೋಟೊ ಸಮೇತ ದೂರು ನೀಡಿ

Last Updated 16 ಜೂನ್ 2022, 20:12 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಬಗ್ಗೆ ಫೋಟೊ ಸಮೇತ ದೂರು ಸ್ವೀಕರಿಸಲು ಸಂಚಾರ ಪೊಲೀಸರು ‘ಪಬ್ಲಿಕ್–ಐ’ ವ್ಯವಸ್ಥೆ ರೂಪಿಸಿದ್ದಾರೆ.

ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದು, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಜೊತೆಯಲ್ಲಿ ದಂಡ ವಿಧಿಸುವ ಕಾರ್ಯ ನಿರ್ವಹಿಸಲು ಪೊಲೀಸರ ಕೊರತೆ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಂಚಾರ ಪೊಲೀಸರು, ಕೆಲ ವರ್ಷಗಳ ಹಿಂದೆಯೇ ಪಬ್ಲಿಕ್–ಐ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಇದೀಗ ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿರುವ ಪೊಲೀಸರು, ‘ಫೋಟೊ ಸಮೇತ ದೂರು ನೀಡಿ’ ಎಂದು ಸಾರ್ವಜನಿಕರಿಗೆ ಆಹ್ವಾನ ನೀಡಿದ್ದಾರೆ.

‘ಸಿಬ್ಬಂದಿ ಕೊರತೆಯಿಂದಾಗಿ ಪುರಾವೆ ಸಮೇತ ಉಲ್ಲಂಘನೆ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಾರ್ವಜನಿಕರಿಂದ ದೂರು ಪಡೆದು ಕ್ರಮ ಜರುಗಿಸುವ ವ್ಯವಸ್ಥೆ ಬಲಪಡಿಸಲಾಗಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.

‘ನಗರದ ಎಲ್ಲ ಕಡೆಯೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಆಗುವುದಿಲ್ಲ. ಕೆಲವೆಡೆ ಮಾತ್ರ ಸಿಬ್ಬಂದಿ ಎಫ್‌ಟಿವಿಆರ್ ಉಪಕರಣ ಮೂಲಕ ದಂಡ ಹಾಕುತ್ತಿದ್ದಾರೆ. ಹೀಗಾಗಿಯೇ ಸಾರ್ವಜನಿಕರ ಸಹಕಾರ ಪಡೆಯಲಾಗುತ್ತಿದೆ. ಪಬ್ಲಿಕ್–ಐ ಬಗ್ಗೆ ಹೆಚ್ಚು ಪ್ರಚಾರ ಮಾಡುವಂತೆಯೂ ಠಾಣೆ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದೂ ತಿಳಿಸಿದರು.

ಆ್ಯಪ್ ಹಾಗೂ ಸಾಮಾಜಿಕ ಮಾಧ್ಯಮ: ‘ಪಬ್ಲಿಕ್ ಐ’ ವ್ಯವಸ್ಥೆಯು ಆ್ಯಪ್, ಜಾಲತಾಣ (https://btp.gov.in) ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ತಮಗೆ ಅನುಕೂಲವಾದ ಮಾಧ್ಯಮದ ಮೂಲಕ ದೂರು ನೀಡಬಹುದು’ ಎಂದು ಪೊಲೀಸರು ತಿಳಿಸಿದರು.

‘ಸಾರ್ವಜನಿಕರು ತಮ್ಮ ಸುತ್ತಮುತ್ತ ಯಾರಾದರೂ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಅದರ ಫೋಟೊ ತೆಗೆಯಬೇಕು. ಆ್ಯಪ್, ಜಾಲತಾಣ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ (ಫೇಸ್‌ಬುಕ್, ಟ್ವಿಟರ್) ವಾಹನಗಳ ನೋಂದಣಿ ಸಂಖ್ಯೆ ಹಾಗೂ ಫೋಟೊ ಸಮೇತ ದೂರು ನೀಡಬೇಕು. ಅಂಥ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ವಾಹನಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ನೋಟಿಸ್ ಕಳುಹಿಸಲಾಗುವುದು’ ಎಂದೂ ಹೇಳಿದರು.

‘ಗೂಗಲ್ ಪ್ಲೇ ಸ್ಟೋರ್‌ನಲ್ಲೂ ‘ಪಬ್ಲಿಕ್ ಐ–ಬಿಟಿಪಿ’ ಆ್ಯಪ್ ಲಭ್ಯವಿದೆ. ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು’ ಎಂದೂ ತಿಳಿಸಿದರು.

ವಾಟ್ಸ್‌ಆ್ಯಪ್‌ ಮೂಲಕವೂ ದೂರು

‘ಸಂಚಾರ ಪೊಲೀಸರ ವಾಟ್ಸ್‌ಆ್ಯಪ್‌ (9480801800) ಮೂಲಕವೂ ದೂರು ನೀಡಬಹುದು. ಜೊತೆಗೆ ಫೇಸ್‌ಬುಕ್ (@bangaloretrafficpolice), ಟ್ವಿಟರ್‌ (@blrcitytraffic) ಮತ್ತು ಇ–ಮೇಲ್‌ (tmcbtp@gmail.com) ಮೂಲಕ ಸಹ ದೂರು ದಾಖಲಿಸಬಹುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಯಾವೆಲ್ಲ ನಿಯಮ ಉಲ್ಲಂಘನೆ
ದೋಷಪೂರಿತ ನೋಂದಣಿ ಫಲಕ
ಫಲಕದ ಮೇಲೆ ತರಹೇವಾರಿ ಬರಹ
ಚಾಲನೆ ವೇಳೆ ಮೊಬೈಲ್ ಬಳಕೆ
ಹೆಲ್ಮೆಟ್ ಧರಿಸದಿರುವುದು
ಜೀಬ್ರಾ ಕ್ರಾಸಿಂಗ್
ವಾಣಿಜ್ಯ ಬಳಕೆ ವಾಹನಗಳ ಚಾಲಕರು ಸಮವಸ್ತ್ರ ಧರಿಸದಿರುವುದು
ಕರೆದಲ್ಲಿ ಬಾರದ ಆಟೊ ಚಾಲಕರು
ಮೀಟರ್ ದರಕ್ಕಿಂತ ಹೆಚ್ಚು ಹಣ ಕೇಳುವ ಚಾಲಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT