ಭಾನುವಾರ, ಜೂನ್ 26, 2022
29 °C

ರೋಟರಿ ಜೊತೆ ಕೈಜೋಡಿಸಿದ ಕ್ಯೂನೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾಂಕಾಂಗ್‌ನ ಇ–ವಾಣಿಜ್ಯ ಕಂಪನಿ ಕ್ಯೂನೆಟ್‌, ಬೆಂಗಳೂರಿನ ರೋಟರಿ ಡಿಸ್ಟ್ರಿಕ್ಟ್‌ 3190 ಜೊತೆ ಒಡಂಬಡಿಕೆ ಮಾಡಿಕೊಂಡಿದೆ.

ಈ ಒಪ್ಪಂದದ ಪ್ರಕಾರ ಕ್ಯೂನೆಟ್‌ ಕಂಪನಿಯು ರೋಟರಿ ಡಿಸ್ಟ್ರಿಕ್ಟ್‌ 3190ಗೆ ಒಟ್ಟು 500 ಆಮ್ಲಜನಕ ಸಾಂದ್ರಕಗಳನ್ನು ಒದಗಿಸಲಿದ್ದು ಇವುಗಳನ್ನು ರೋಟರಿ ಸಂಸ್ಥೆಯು ದೇಶದ ವಿವಿಧ ಭಾಗಗಳಿಗೆ ರವಾನಿಸಲಿದೆ.

ಸೋಮವಾರ ಆನ್‌ಲೈನ್‌ ಮೂಲಕ ನಡೆದ ಕಾರ್ಯಕ್ರಮದಲ್ಲಿ ಕ್ಯೂನೆಟ್‌ನ ಕಾರ್ಯನಿರ್ವಾಹಕ ಮುಖ್ಯಸ್ಥ ರಿಚರ್ಡ್‌ ಜಿಂಕಿವಿಜ್‌ ಹಾಗೂ ರೋಟರಿ ಇಂಟರ್‌ನ್ಯಾಷನಲ್‌ ಅಧ್ಯಕ್ಷ ಶೇಖರ್‌ ಮೆಹ್ತಾ ಅವರ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಮೊದಲ ಹಂತದ ಆಮ್ಲಜನಕ ಸಾಂದ್ರಕಗಳು ಮುಂದಿನ 7 ರಿಂದ 10 ದಿನಗಳೊಳಗೆ ಭಾರತಕ್ಕೆ ತಲುಪುವ ನಿರೀಕ್ಷೆ ಇದೆ.

ರೋಟರಿ ಸಂಸ್ಥೆಯು ದೇಶದ ವಿವಿಧ ನಗರಗಳು, ಹಳ್ಳಿಗಳಲ್ಲಿ ತೀರಾ ಅಗತ್ಯವಿದ್ದವರಿಗೆ ಈ ಸಾಂದ್ರಕಗಳನ್ನು ಉಚಿತವಾಗಿ ನೀಡಲಿದೆ.

‘ಕೋವಿಡ್‌ ವಿರುದ್ಧದ ನಮ್ಮ ಹೋರಾಟಕ್ಕೆ ಕ್ಯೂನೆಟ್‌ ಸಂಸ್ಥೆ ಕೈಜೋಡಿಸಿರುವುದು ಸಂತಸ ನೀಡಿದೆ. ರೋಗಿಗಳ ಜೀವ ಉಳಿಸಲು ಅಗತ್ಯವಿರುವ ಆಮ್ಲಜನಕ ಸಾಂದ್ರಕಗಳನ್ನು ಒದಗಿಸಿದ್ದಕ್ಕೆ ಆ ಸಂಸ್ಥೆಗೆ ಆಭಾರಿಯಾಗಿದ್ದೇವೆ’ ಎಂದು ಡಿಸ್ಟ್ರಿಕ್ಟ್‌ ಗವರ್ನರ್‌ ಬಿ.ಎಲ್‌.ನಾಗೇಂದ್ರ ಪ್ರಸಾದ್‌ ತಿಳಿಸಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು