ಬುಧವಾರ, ಜೂನ್ 29, 2022
25 °C

ಚೆಕ್‌ ಬೌನ್ಸ್: ರಾಘವೇಂದ್ರ ಶೆಟ್ಟಿಗೆ ಸಮನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರ ಕಚೇರಿಗೆ ಶಿರಸಿ ಪೊಲೀಸರು ಸಮನ್ಸ್ ಪ್ರತಿ ಅಂಟಿಸಿ ಹೋಗಿದ್ದಾರೆ.

ವೈಯಕ್ತಿಕ ಹಣಕಾಸು ವ್ಯವಹಾರ ಸಂಬಂಧ ವ್ಯಕ್ತಿಯೊಬ್ಬರಿಗೆ ರಾಘವೇಂದ್ರ ಶೆಟ್ಟಿ ಅವರು ಚೆಕ್‌ ನೀಡಿದ್ದರು. ಅದು ಬೌನ್ಸ್ ಆಗಿದ್ದರಿಂದ ಆ ವ್ಯಕ್ತಿ, ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆಗಾಗಿ ರಾಘವೇಂದ್ರ ಶೆಟ್ಟಿ ಅವರಿಗೆ 4 ಬಾರಿ ಸಮನ್ಸ್ ಜಾರಿಯಾಗಿತ್ತು. ಅಷ್ಟಾದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ನ್ಯಾಯಾಲಯದ ಖಡಕ್ ಸೂಚನೆ ಮೇರೆಗೆ ಬೆಂಗಳೂರಿನಲ್ಲಿರುವ ರಾಘವೇಂದ್ರ ಶೆಟ್ಟಿ ಅವರ ಕಚೇರಿಗೆ ಬಂದ ಪೊಲೀಸರು ಬುಧವಾರ ಸಮನ್ಸ್ ಪ್ರತಿ ಅಂಟಿಸಿ, ಅದರ ಫೋಟೊ ಹಾಗೂ ವಿಡಿಯೊ ಸಮೇತ ಮಹಜರು ಮಾಡಿಕೊಂಡು ಹೋಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.