ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದ ಕೊಂಬೆ ಬಿದ್ದು 701 ದಿನ ಕೋಮಾದಲ್ಲಿದ್ದ ಬಾಲಕಿ ರೈಚಲ್ ಪ್ರಿಷಾ ಕೊನೆಯುಸಿರು

ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಪ್ರಿಷಾ
Last Updated 10 ಫೆಬ್ರುವರಿ 2022, 20:37 IST
ಅಕ್ಷರ ಗಾತ್ರ

ಬೆಂಗಳೂರು: ತಲೆ ಮೇಲೆ ಕೊಂಬೆ ಬಿದ್ದು ಪ್ರಜ್ಞೆ ಕಳೆದುಕೊಂಡು 701 ದಿನ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ ರೈಚಲ್ ಪ್ರಿಷಾ (8), ಚಿಕಿತ್ಸೆಗೆ ಸ್ಪಂದಿಸದೇ ಮಣಿಪಾಲ್ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾಳೆ.

‘ಎರಡನೇ ತರಗತಿಯಲ್ಲಿ ಓದುತ್ತಿದ್ದ ಪ್ರಿಷಾ, ಪರೀಕ್ಷಾ ಪ್ರವೇಶ ಪತ್ರ ತರಲೆಂದು 2020ರ ಮಾರ್ಚ್ 11ರಂದು ತಂದೆ ರಾಜು ಜೊತೆ ಬೈಕ್‌ನಲ್ಲಿ ಶಾಲೆಯತ್ತ ಹೊರಟಿದ್ದಳು. ಕೌದೇನಹಳ್ಳಿ ಮುಖ್ಯರಸ್ತೆಯಲ್ಲಿ ಅರಳಿ ಮರದ ದೊಡ್ಡ ಕೊಂಬೆಯೊಂದು ಆಕೆಯ ತಲೆ ಮೇಲೆ ಬಿದ್ದಿತ್ತು’ ಎಂದು ಕೆ.ಆರ್.ಪುರ ಪೊಲೀಸರು ಹೇಳಿದರು.

‘ತೀವ್ರವಾಗಿ ಗಾಯಗೊಂಡಿದ್ದ ಪ್ರಿಷಾ, ಕೋಮಾ ಸ್ಥಿತಿಗೆ ತಲುಪಿದ್ದಳು. ಆರಂಭದಲ್ಲಿ ಕೋಶಿಷ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಯ ಚಿಪ್ಪಿಗೆ ಪೆಟ್ಟು ಬಿದ್ದು, ಊದಿಕೊಂಡಿತ್ತು’

‘ಪ್ರಿಷಾ ಸ್ಥಿತಿ ಕೆಲದಿನಗಳಿಂದ ಹದಗೆಟ್ಟಿತ್ತು. ಗುರುವಾರ ಬೆಳಿಗ್ಗೆ ಆಕೆ ತೀರಿಕೊಂಡಿದ್ದಾಳೆ.’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT