ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮ ಸಮಾಜದ ಸ್ಥಾಪಕನಿಗೆ ಗೂಗಲ್‌ ಡೂಡಲ್‌ ನಮನ

246ನೇ ಹುಟ್ಟುಹಬ್ಬವನ್ನು ಸ್ಮರಿಸಿದ ಗೂಗಲ್‌
Last Updated 22 ಮೇ 2018, 7:06 IST
ಅಕ್ಷರ ಗಾತ್ರ

ದೆಹಲಿ: ಆಧುನಿಕ ಭಾರತದ ನಿರ್ಮಾತೃ, ಸಾಮಾಜಿಕ ಸುಧಾರಕ, ಬ್ರಹ್ಮ ಸಮಾಜದ ಸ್ಥಾಪಕ, ಭಾರತೀಯ ಪುನಜ್ಜೀವನದ ಪಿತಾಮಹ ಎಂದೇ ಪ್ರಸಿದ್ಧರಾಗಿರುವ ರಾಜರಾಮ್‌ ಮೋಹನರಾಯರ 246ನೇ ಹುಟ್ಟುಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು ಅವರ ಕಾರ್ಯಗಳಿಂದ ಅವರನ್ನು ಗೂಗಲ್‌ ಡೂಡಲ್‌ ಸ್ಮರಿಸುತ್ತಿದೆ.

ರಾಜರಾಮ್‌ ಮೋಹನರಾಯರು ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ 22 ಮೇ 1772 ರಲ್ಲಿ ರಾಮಕಾಂತ್‌ ರಾಯ್‌ ಮತ್ತು ತಾರಣಿದೇವಿಯ ಮಗನಾಗಿ ಪಶ್ಚಿಮ ಬಂಗಾಳ ಜಿಲ್ಲೆಯ ಮುರ್ಷಿದಬಾದ್‌ ಜಿಲ್ಲೆಯ ರಾಧಾನಗರ್‌ ಗ್ರಾಮದಲ್ಲಿ ಜನಿಸಿದರು. ಬ್ರಾಹ್ಮಣರಾದರೂ ಚಿಕ್ಕ ವಯಸ್ಸಿನಿಂದಲೇ ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ವಿಗ್ರಹ ಆರಾಧನೆಯನ್ನುವಿರೋಧಿ‌ಸುತ್ತಾ ಏಕದೇವತಾ ಆರಾಧನೆಯನ್ನು ನಂಬಿದವರು ರಾಯ್‌.

ರಾಜರಾಮ್‌ ಮೋಹನ ರಾಯರು ಅತಿ ಚಿಕ್ಕ ವಯಸ್ಸಿನಲ್ಲಿ ಧರ್ಮದ ಬಗ್ಗೆ ತಿಳಿಯಲು ಹಿಮಾಲಯ ಮತ್ತು ಟಿಬೆಟ್‌ಗೆ ಪ್ರಯಾಣ ಬೆಳೆಸಿದರು. ಅಲ್ಲಿಂದ ಹಿಂತಿರುಗಿದ ನಂತರ ತಂದೆ – ತಾಯಿ ಅವರನ್ನು ದಾಂಪತ್ಯದಲ್ಲಿ ಸಿಲುಕಿಸಿ ಬದಲಿಸಲು ಕಂಡಾಗ ಅವರಿಂದ ದೂರ ಉಳಿದು ಹಿಂದೂ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಲು ಹೊರಟರು.

ರಾಯ್‌ ವೇದಗಳು ಉಪನಿಷತ್ತುಗಳನ್ನು ಓದಿ ಅದರಿಂದ ‘ತುಹತ್ ಅಲ್-ಮುವಾಹಿದಿನ್’ ಎಂಬ ಗ್ರಂಥವನ್ನು ಬರೆದು ಅದನ್ನು ಪ್ರತಿಪಾದಿಸುತ್ತಾ ಹಿಂದೂ ಧರ್ಮದ ಧಾರ್ಮಿಕತೆಯನ್ನು ವಿರೋಧಿಸಿದರು.

ಪ್ರಸ್ತುತ ಕಾಲದಲ್ಲಿ ಪುರುಷನಷ್ಟೇ ಮಹಿಳೆಯು ಸಮಾನಳು ಎಂಬುದಕ್ಕೆ ಹೋರಾಡುತ್ತಿದ್ದರೂ. 200 ವರ್ಷಗಳ ಹಿಂದೆ ಮಹಿಳೆ ಸತಿ ಪದ್ದತಿಯಂತಹ ಕೆಟ್ಟ ಧಾರ್ಮಿಕ ಆಚರಣೆಯಲ್ಲಿ ನರಳುತ್ತಿದ್ದಳು. ಇದರಿಂದ ಮಹಿಳೆಯನ್ನು ರಕ್ಷಿಸಬೇಕು ಸಮಾಜ ಬದಲಾಗಬೇಕೆಂದು ನಿರ್ಣಾಯಕ ಪಾತ್ರವಹಿಸಿ ಸತಿಪದ್ದತಿಯನ್ನು ವಿರೋಧಿಸಿದರು.ಮಹಿಳೆಗೂ ಸಮಾನ ಹಕ್ಕುಗಳುಬೇಕೆಂದು ವಿವಧೆಗೆ ಪುನರ್‌ವಿವಾಹದ ಹಕ್ಕು, ಆಸ್ತಿ ಹೊಂದುವ ಹಕ್ಕು ಬೇಕೆಂದು ಪ್ರಚಾರ ಕೈಗೊಂಡರು.  ಸತಿಪದ್ದತಿಯ ನಿರ್ಮೂಲನೆಗೆ ಶ್ರಮಪಟ್ಟು ನಿಷೇಧ ಮಾಡಿದರು. 1828ರಲ್ಲಿ ಬ್ರಹ್ಮಸಮಾಜವನ್ನು ಸ್ಥಾಪಿಸಿದರು. ಇದು ಭಾರತದಲ್ಲಿ ಪ್ರಪ್ರಥಮ ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿಗಳಲ್ಲಿ ಒಂದಾಗಿತ್ತು.

NEW DELHI:  Tuesday marks the 246th birth anniversary of India's most celebrated social reformer Raja Ram Mohan Roy, remembered best as the "Maker of Modern India" and "father of the Indian Renaissance". Today's Google doodle reminds of his many contributions to the society.

A non-conformist in his own right, Raja Ram Mohan Roy was born on May 22, 1772, in Radhanagar village in Murshidabad district of West Bengal. A staunch supporter of monotheism, Raj Ram Mohan Roy shunned the orthodox Hindu rituals and idol worship right from the childhood even though his father, Ramkanto Roy, was a Hindu Brahmin.

At a very young age, he left home over differences with his father on religion and faith and travelled widely to Himalayas and Tibet. When he returned, his parents married him in a bid to change his outlook. Yet Raja Ram Mohan Roy continued to explore depths of Hinduism only to highlight the hypocrisy of the many practitioners of the religion.

He read Upanishads and Vedas and went on to write "Tuhfat al-muwahhidin", his first book where he advocated for reason in religion and opposed ritualism.

Women are struggling even in the present day trying to be equal to men. But nearly 200 years ago, when evils like "Sati" plagued the society, social reformers like Raja Ram Mohan Roy played a critical role to bring about a change. He opposed "Sati", the regressive practice that forced a widow to immolate herself on husband's pyre. He campaigned for equal rights for women, including the right to remarry and the right to hold property.

In 1828, Raja Ram Mohan Roy founded the "Brahmo Samaj", which is said to be one of the first Indian socio-religious reform movements.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT