ಮಂಗಳವಾರ, ಮಾರ್ಚ್ 21, 2023
29 °C

ಬೆಂಗಳೂರಿನಲ್ಲಿ ಬಿರುಸಿನ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಹಲವೆಡೆ ಶನಿವಾರ ಬಿರುಸಿನ ಮಳೆ ಸುರಿಯಿತು. ಕೆಲವು ಪ್ರದೇಶಗಳ ಪ್ರಮುಖ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು.

ಶುಕ್ರವಾರ ರಾತ್ರಿಯೂ ಹಲವೆಡೆ ಮಳೆ ಆಗಿತ್ತು. ಶನಿವಾರವೂ ಮೋಡ ಕವಿದ ವಾತಾವರಣವಿತ್ತು. ಕೆಲ ಪ್ರದೇಶಗಳಲ್ಲಿ ಮಧ್ಯಾಹ್ನ ಜೋರು ಮಳೆಯಾಯಿತು. ಕೆಲವೆಡೆ ಸಾಧಾರಣ ಮಳೆ ಇತ್ತು.

ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಬಡಾವಣೆ, ಯಶವಂತಪುರ, ಆರ್‌.ಟಿ.ನಗರ, ಹೆಬ್ಬಾಳ, ಶಿವಾಜಿನಗರ, ಅಶೋಕನಗರ, ಎಂ.ಜಿ.ರಸ್ತೆ, ಕೋರಮಂಗಲ, ಮಡಿವಾಳ, ವಿಲ್ಸನ್ ಗಾರ್ಡನ್, ಶಾಂತಿನಗರ, ಬನಶಂಕರಿ, ಬಸವನಗುಡಿ, ಹನುಮಂತನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಂಜೆ ಆರಂಭಗೊಂಡ ಮಳೆ ರಾತ್ರಿಯವರೆಗೂ ಸುರಿಯಿತು.

ಸಂಜೆ ಬಿಡುವು ಕೊಡದೇ ಮಳೆ ಸುರಿದಿದ್ದರಿಂದ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಮೆಜೆಸ್ಟಿಕ್ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ ಹರಿಯುವ ನೀರಿನಲ್ಲಿ ಕೆಲ ವಾಹನಗಳು ಕೆಟ್ಟು ನಿಂತಿದ್ದವು. ವಾಹನಗಳನ್ನು ತಳ್ಳುವ ಮೂಲಕ ಸ್ಥಳೀಯರು ಚಾಲಕರಿಗೆ ನೆರವಾದರು.

ಬಸವೇಶ್ವರನಗರ, ವಿಜಯನಗರ, ಜೆ.ಪಿ.ನಗರ, ತಲಘಟ್ಟಪುರದಲ್ಲಿ ಮರದ ದೊಡ್ಡ ಕೊಂಬೆಗಳು ಬಿದ್ದವು. ಕೆಲವು ಕಡೆ ವಾಹನಗಳ ಸಂಚಾರಕ್ಕೆ ಸ್ವಲ್ಪ ಹೊತ್ತು ತೊಂದರೆಯಾಯಿತು. ಸ್ಥಳೀಯರೇ ಕೊಂಬೆಗಳನ್ನು ತೆರವು
ಗೊಳಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

‘ಮಳೆಗಾಲ ಇರುವುದರಿಂದ ನಗರದಲ್ಲಿ ಉತ್ತಮ ಮಳೆಯಾಗುತ್ತಿದೆ. ಕೊಂಬೆಗಳು ಬಿದ್ದ ಬಗ್ಗೆ ಮಾತ್ರ ದೂರುಗಳು ಬಂದಿದ್ದವು. ಉಳಿದಂತೆ ಯಾವುದೇ ಹಾನಿ ಬಗ್ಗೆ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು