ಗಾಳಿ ಸಹಿತ ಮಳೆ: ಎಂಟು ಮರಗಳು ಧರೆಗೆ

ಬುಧವಾರ, ಜೂನ್ 19, 2019
31 °C

ಗಾಳಿ ಸಹಿತ ಮಳೆ: ಎಂಟು ಮರಗಳು ಧರೆಗೆ

Published:
Updated:

ಬೆಂಗಳೂರು: ನಗರದಲ್ಲಿ ಬುಧವಾರ ರಾತ್ರಿ ಸುರಿದ ಗಾಳಿ ಸಹಿತ ಮುಂಗಾರು ಪೂರ್ವ ಮಳೆಗೆ ಎಂಟು ಕಡೆಗಳಲ್ಲಿ ಮರಗಳು ಧರೆಗೆ ಉರುಳಿದವು. 

ಬೆಳಿಗ್ಗೆಯಿಂದ ಬಿಸಿಲು–ಮೋಡಗಳ ಕಣ್ಣಾಮುಚ್ಚಾಲೆ ಇತ್ತು. ಸಂಜೆ ಹೊತ್ತಿಗೆ ಮೋಡ ದಟ್ಟವಾಗಿ, ಸಾಧಾರಣ ಮಳೆ ಸುರಿಯಿತು. ಈ ವೇಳೆ ಮಳೆಗಿಂತ ಹೆಚ್ಚು ಗುಡುಗಿನ ಆರ್ಭಟವೇ ಜೋರಾಗಿತ್ತು.

ನಾಗರಬಾವಿ, ಜೆ.ಪಿ.ನಗರ, ಸಾರಕ್ಕಿ, ವಿಜ್ಞಾನನಗರ, ಲಗ್ಗೆರೆ,  ರಾಜಾಜಿನಗರ, ಬನಶಂಕರಿ ಹಾಗೂ ಹಲಸೂರುಗಳಲ್ಲಿ ಸಾಧಾರಣ ಮಳೆ ಸುರಿಯಿತು. 

ಉತ್ತರದಲ್ಲಿ ಹೆಚ್ಚು ಮಳೆ ಸುರಿಯಿತು. ಸಿಂಗನಾಯಕನಹಳ್ಳಿಯಲ್ಲಿ 98 ಮಿ.ಮೀ, ಕೋಣನಕುಂಟೆಯಲ್ಲಿ 64 ಮಿ.ಮೀ, ಸಾರಕ್ಕಿ 72 ಮಿ.ಮೀ ಹಾಗೂ ವಿಜ್ಞಾನನಗರದಲ್ಲಿ 78 ಮಿ.ಮೀ ಮಳೆ ಬಿದ್ದ ವರದಿಯಾಗಿದೆ. 

ನಾಗರಬಾವಿ, ಜೆ.ಪಿ.ನಗರ, ರಾಜಾಜಿನಗರ, ಡಿ ಗ್ರೂಪ್‌ ಬಡಾವಣೆ, ಹಲಸೂರು, ಶೇಷಾದ್ರಿಪುರ, ಪಾಪರೆಡ್ಡಿಪಾಳ್ಯ ಹಾಗೂ ಲಗ್ಗೆರೆಯಲ್ಲಿ ಮರಗಳು ಉರುಳಿದವು. ಬಿಬಿಎಂಪಿ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !