ಬುಧವಾರ, ನವೆಂಬರ್ 13, 2019
22 °C

ಬೆಂಗಳೂರಿನಲ್ಲಿ ಧಾರಾಕಾರ ಮಳೆ | ಮನೆ ಸೇರಲು ಜನರ ಪರದಾಟ

Published:
Updated:

ಬೆಂಗಳೂರು: ನಗರದ ಹಲವೆಡೆ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ಇದರಿಂದಾಗಿ ಮನೆಗಳಿಗೆ ತೆರಳಬೇಕಿದ್ದ ಜನ ಪರದಾಡುವಂತಾಯಿತು.

ಎರಡು ದಿನಗಳಿಂದ ಪ್ರಖರ ಬಿಸಿಲು ಮತ್ತು ಸೆಖೆಯಿಂದ ಕೂಡಿದ, ಹಾಗಾಗ ಮೋಡ ಮುಸುಕಿದ ವಾತಾವರಣ ಇತ್ತು. ಇಂದು ರಾತ್ರಿ 8.50ರ ನಂತರ ಮಳೆ ಸುರಿಯಿತು.

ಹೊಸಳ್ಳಿ, ವಿಜಯನಗರ, ಮೈಸೂರು ರಸ್ತೆ, ಬಸವೇಶ್ವರ ನಗರ, ರಾಜಾಜಿನಗರ, ಮೆಜೆಸ್ಟಿಕ್‌, ಎಂ.ಜಿ. ರಸ್ತೆ, ವಿಧಾನಸೌಧ ಸುತ್ತಮುತ್ತ  ಅರ್ಧ ತಾಸಿಗೂ ಹೆಚ್ಚು ಕಾಲ ಮಳೆ ಸುರಿಯಿತು.

ಮೆಟ್ರೊ ರೈಲಿನಿಂದ ಇಳಿದು ಹೊರ ಬಂದ ಜನ ಮಳೆ ಬರುತ್ತಿದ್ದ ಕಾರಣ ರಸ್ತೆಗೆ ಹೋಗಲಾಗದೆ ಮೆಟ್ರೊ ನಿಲ್ದಾಣದ ಹೊರ ಆವರಣದಲ್ಲಿ ನಿಂತು, ಮೆಟ್ಟಿಲುಗಳ ಮೇಲೆ ಕುಳಿತು ಕೆಲ ಹೊತ್ತು ಕಾಲ ಕಳೆಯುವಂತಾಯಿತು.

ಪ್ರತಿಕ್ರಿಯಿಸಿ (+)