ಮಂಗಳವಾರ, ಅಕ್ಟೋಬರ್ 15, 2019
26 °C

ಮಳೆ: ಕೆಲವೆಡೆ ಧಾರಾಕಾರ, ಹಲವೆಡೆ ತುಂತುರು

Published:
Updated:

ಬೆಂಗಳೂರು: ಗುರುವಾರ ರಾತ್ರಿ ಕೂಡಾ ನಗರದ ಹಲವೆಡೆ ಭಾರಿ ಮಳೆ ಸುರಿದಿದ್ದು, ಮತ್ತೆ ಕೆಲವೆಡೆ ತುಂತುರು ಮಳೆಯಾಗಿದೆ.

ಮುಂದಿನ ಮೂರು ದಿನ ನಗರದ ಕೆಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಕಳೆದ ಮೂರು ದಿನಗಳಿಂದ ಸಂಜೆಯಾಗುತ್ತಲೆ ಮೋಡ ಆವರಿಸಿಕೊಳ್ಳುತ್ತಿದೆ. ರಾತ್ರಿ ವೇಳೆ ವರ್ಷ ಧಾರೆಯಾಗುತ್ತಿದೆ. ಮುಂಗಾರು ಅವಧಿ ಮುಗಿದರೂ, ರಾಜ್ಯದಲ್ಲಿ ಮೇಲ್ಮೈ ಸುಳಿಗಾಳಿ ಇರುವುದರಿಂದ ಈ ರೀತಿ ಮಳೆ ಮುಂದುವರಿದಿದೆ ಎಂದೂ ಇಲಾಖೆ ಮೂಲಗಳು ತಿಳಿಸಿವೆ.

ಎಲ್ಲಿ, ಎಷ್ಟು ಮಳೆ?:

ಕೆಂಗೇರಿ, ಎಚ್‍ಬಿಆರ್ ಲೇಔಟ್, ಬಾಣಸವಾಡಿಯಲ್ಲಿ ತಲಾ 36 ಮಿ.ಮೀ., ಬೆನ್ನಿಗಾನಹಳ್ಳಿಯಲ್ಲಿ 33 ಮಿ.ಮೀ., ಯಲಹಂಕದಲ್ಲಿ 26 ಮಿ.ಮೀ., ಹೊಯ್ಸಳನಗರದಲ್ಲಿ 21 ಮಿ.ಮೀ., ರಾಜರಾಜೇಶ್ವರಿ ನಗರ, ಅರಕೆರೆಯಲ್ಲಿ 20 ಮಿ.ಮೀ., ಕೋಣನಕುಂಟೆ, ಗೊಟ್ಟಿಗೆರೆಯಲ್ಲಿ 18 ಮಿ.ಮೀ., ಪುಲಿಕೇಶಿನಗರದಲ್ಲಿ 17 ಮಿ.ಮೀ., ಎಚ್‍ಎಎಲ್, ಬೊಮ್ಮನಹಳ್ಳಿಯಲ್ಲಿ 16 ಮಿ.ಮೀ., ಚೌಡೇಶ್ವರಿ ನಗರದಲ್ಲಿ 15 ಮಿ.ಮೀ. ಮಳೆ ಸುರಿದಿದೆ.

Post Comments (+)