ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ಸಂಘದ ಕಟ್ಟಡ ಉದ್ಘಾಟನೆ

Last Updated 5 ಮಾರ್ಚ್ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಎಚ್.ಎಂ.ರೇವಣ್ಣ ಸೋಮವಾರ ಉದ್ಘಾಟಿಸಿದರು.

ಸಂಘವು ಶಾಂತಿನಗರದಲ್ಲಿ ನಿರ್ಮಿಸಿರುವ ಈ ಕಟ್ಟಡಕ್ಕೆ ಸಮಾಜ ಕಲ್ಯಾಣ ಇಲಾಖೆಯ ₹ 54 ಲಕ್ಷ ಅನುದಾನ ನೀಡಿದೆ. ಸಾರಿಗೆ ಇಲಾಖೆಯು ನಿವೇಶನ ನೀಡಿದೆ. ಎರಡು ಅಂತಸ್ತಿನ ಈ ಕಟ್ಟಡದಲ್ಲಿ ನಾಲ್ಕು ಕೊಠಡಿಗಳಿವೆ. ಅಧ್ಯಕ್ಷರ ಕಚೇರಿ ಹಾಗೂ ಮಿನಿ ಸಭಾಂಗಣವೂ ಇದರಲ್ಲಿದೆ.

ಆಡಳಿತ ಮಂಡಳಿ ಸಭೆ, ಕಚೇರಿ ವಹಿವಾಟು ನಡೆಸಲು ಈ ಕಟ್ಟಡವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಎಂ.ಸಿದ್ದಪ್ಪ ನೇಗಲಾಲ ತಿಳಿಸಿದರು.

ಪೀಠೋಪಕರಣ, ಕಂಪ್ಯೂಟರ್ ಖರೀದಿ ಹಾಗೂ ಕಟ್ಟಡದ ಒಳಾಂಗಣ ವಿನ್ಯಾಸಕ್ಕೆ ಆರ್ಥಿಕ ಸಮಸ್ಯೆ ಇದೆ. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಇನ್ನಷ್ಟು ಅನುದಾನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಸಾರಿಗೆ ಇಲಾಖೆಯ ವಿವಿಧ ಸಂಘಗಳಲ್ಲಿ ಒಟ್ಟು 40 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಉಚಿತವಾಗಿ ಬಸ್‌ ಪಾಸ್‌ ಸೌಲಭ್ಯ ಕಲ್ಪಿಸಿಕೊಡಬೇಕು. ಸಂಘಕ್ಕೆ ಸೇರಬೇಕಾದ ₹ 50 ಲಕ್ಷ ಬಿಎಂಟಿಸಿ ಬಳಿ ಇದೆ. ಆ ಹಣವನ್ನು ತ್ವರಿತವಾಗಿ ಸಂಘಕ್ಕೆ ವರ್ಗಾವಣೆ ಮಾಡಬೇಕು ಎಂದು ಸಚಿವರಲ್ಲಿ ಕೋರಿದರು.

ಎಚ್.ಎಂ.ರೇವಣ್ಣ, ‘ಸಮಾಜದ ಎಲ್ಲ ವರ್ಗಗಳ ಶೋಷಿತರು ಸಹಕಾರಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಈ ಕ್ಷೇತ್ರದಲ್ಲಿ ದಲಿತರಿಗೂ ಮೀಸಲಾತಿ ಕಲ್ಪಿಸಲಾಗಿದೆ.  ರಾಜ್ಯದ ಎಲ್ಲ ಸಹಕಾರಿ ಬ್ಯಾಂಕ್‌ಗಳಲ್ಲಿ ಮೀಸಲಾತಿ ತರಬೇಕು ಎಂಬ ಚಿಂತನೆ ಇದೆ’ ಎಂದು ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ಸಾಲ ನೀಡುವಷ್ಟೇ ಮುಖ್ಯ ಅದನ್ನು ವಸೂಲಿ ಮಾಡುವುದು. ಈ ವಿಚಾರದಲ್ಲಿ ಈ ಸಂಘ ಹಿಂದುಳಿದಿದೆ. ಸಾಲ ವಸೂಲಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT