ಬೆಂಗಳೂರು: ಶ್ರೀರಾಮ ಸೇವಾ ಮಂಡಳಿಯು ರಾಜಾಜಿನಗರದ ಶ್ರೀರಾಮಮಂದಿರದಲ್ಲಿ ಹಮ್ಮಿಕೊಂಡಿರುವ 70ನೇ ವರ್ಷದ ಶ್ರೀರಾಮೋತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು.

ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಕೆ.ಎಸ್. ಶ್ರೀಧರ್ ಅವರು 74 ಅಡಿ ಎತ್ತರದ ಶ್ರೀರಾಮ ಮೂರ್ತಿಯ ಮುಂಭಾಗ ವಿಶೇಷ ಪೂಜೆ ಸಲ್ಲಿಸುವ ಮೂಲಕ 11 ದಿನಗಳ ಈ ರಾಮೋತ್ಸವಕ್ಕೆ ಚಾಲನೆ ನೀಡಿದರು. ಮಕ್ಕಳು ಶ್ರೀರಾಮ, ಸೀತೆ ಹಾಗೂ ಹನುಮಂತನ ವೇಷಭೂಷಣದೊಂದಿಗೆ ಸಂಭ್ರಮಿಸಿದರು.

‘ಶ್ರೀರಾಮನವಮಿ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬ್ರಹ್ಮರಥೋತ್ಸವ ಹಾಗೂ ಸುವರ್ಣ ವಜ್ರಾಂಗಿ ಅಲಂಕಾರ ಈ ಬಾರಿಯ ಪ್ರಮುಖ ಆಕರ್ಷಣೆ’ ಎಂದು ಕೆ.ಎಸ್. ಶ್ರೀಧರ್ ಹೇಳಿದರು.

‘27ರಂದು ಶ್ರೀರಾಮಮಂದಿರದಿಂದ ರಾಜಾಜಿನಗರದ ಪ್ರಮುಖ ಬೀದಿಗಳಲ್ಲಿ ಬೆಳಿಗ್ಗೆ 9ರಿಂದ ರಥೋತ್ಸವ ನಡೆಯಲಿದೆ. 28ರಂದು ಶೇಷವಾಹನೋತ್ಸವ, 29ರಂದು ಶ್ರೀರಾಮತಾರಕ ಹೋಮ ಮತ್ತು ಗರುಡವಾಹನೋತ್ಸವ, 30ರಂದು ಸೀತಾರಾಮ ಕಲ್ಯಾಣ, 31ರಂದು ಮುಕ್ತಾಲಂಕಾರ ಸೇವೆ ಹಾಗೂ ಅಶ್ವವಾಹನೋತ್ಸವ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಏಪ್ರಿಲ್ 1ರಂದು ನವನೀತ ಬೆಣ್ಣೆ ಅಲಂಕಾರ, 2ರಂದು ಸತ್ಯನಾರಾಯಣ ಪೂಜೆ, ವಿಶೇಷ ವಸ್ತ್ರಾಲಂಕಾರ, 3ರಂದು ಧನಲಕ್ಷ್ಮೀ ಅಲಂಕಾರ, 4ರಂದು ಜನವಾಹನೋತ್ಸವ ಹಾಗೂ ವಸ್ತ್ರಾಭರಣಾಲಂಕಾರ, 5ರಂದು ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ, 6ರಂದು ಹನುಮಂತೋತ್ಸವ, ವಸಂತೋತ್ಸವ ಮತ್ತು ಶಯನೋತ್ಸವ ಅಲಂಕಾರಗಳನ್ನು ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಉತ್ಸವದ ಅವಧಿಯಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಸಂಜೆ 4ರಿಂದ ರಾಮಾಯಣ ಗೊಂಬೆಯಾಟ, ಭರತನಾಟ್ಯ, ಸಂಗೀತ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಶ್ರೀರಾಮ ಸೇವಾ ಮಂಡಳಿಯ ಪದಾಧಿಕಾರಿಗಳಾದ ಕೆ.ಆರ್. ವಿಜಯರಾಘವನ್, ಎಸ್. ಮಹೇಶ್, ಜಯರಾಮ್, ಮಂಜುನಾಥಸ್ವಾಮಿ, ವೆಂಕಟೇಶ್ ಬಾಬು, ಭರತ್, ಸುದರ್ಶನ್, ಗೀತಾ ರಮೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.