ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಸಮಾಜಕ್ಕೆ ಹೊಸ ಸದಸ್ಯರ ನೇಮಕ

Last Updated 4 ನವೆಂಬರ್ 2019, 19:13 IST
ಅಕ್ಷರ ಗಾತ್ರ

ಬೆಂಗಳೂರು: ರಂಗಾಯಣಗಳಿಗೆ ನಿರ್ದೇಶಕರನ್ನು ಆಯ್ಕೆಮಾಡುವ ‘ರಂಗಸಮಾಜ’ದ ಸದಸ್ಯರ ಅಧಿಕಾರ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರ ಸದಸ್ಯತ್ವ ರದ್ದುಪಡಿಸಲಾಗಿದೆ. ಈ ಸ್ಥಾನಕ್ಕೆ ಸೋಮವಾರ ಹೊಸದಾಗಿ ಸದಸ್ಯರನ್ನು ನೇಮಕ ಮಾಡಲಾಗಿದೆ.

ಬಿ.ವಿ.ರಾಜಾರಾಂ (ಬೆಂಗಳೂರು), ಹಿಪ್ಪರಗಿ ಸಿದ್ದರಾಜು (ಧಾರವಾಡ), ಜೀವನರಾಂ ಸುಳ್ಯ (ದಕ್ಷಿಣ ಕನ್ನಡ), ಹಾಲಸ್ವಾಮಿ (ಶಿವಮೊಗ್ಗ), ಶ್ರೀಧರ ಹೆಗಡೆ (ಕಲಬುರ್ಗಿ), ಡಾ.ಹೆಲೆನ್ (ಹುಬ್ಬಳ್ಳಿ), ಬಸವೇಶ್ವರಗೌಡ (ಬಳ್ಳಾರಿ) ಹೊಸದಾಗಿ ನೇಮಕಗೊಂಡ ಸದಸ್ಯರು.

ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ ರಂಗಸಮಾಜದ ಸದಸ್ಯರು ಅಧಿಕಾರ ವಹಿಸಿಕೊಂಡು ಒಂದು ವರ್ಷ ಹತ್ತು ತಿಂಗಳಷ್ಟೇ ಆಗಿತ್ತು. ಅವಧಿ ಪೂರ್ಣಗೊಳ್ಳುವ ಮುನ್ನವೇ ಸದಸ್ಯತ್ವ ರದ್ದುಪಡಿಸಿರುವುದಕ್ಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೋಪಾಲಕೃಷ್ಣ ನಾಯರಿ, ಮಲ್ಲಿಕಾರ್ಜುನ ಕಡಕೋಳ, ಶ್ರೀಪಾದ ಭಟ್, ಎಲ್.ಕೃಷ್ಣಪ್ಪ, ವಿಶ್ವೇಶ್ವರಿ ಹಿರೇಮಠ್, ಸಹನಾ ಪಂಜಾರ್, ಎಂ.ಚಂದ್ರಕಾಂತ್ ಹಿಂದಿನ ತಂಡದಲ್ಲಿದ್ದ ಸದಸ್ಯರು.

ರಂಗಸಮಾಜದ ಸದಸ್ಯರು ಮೈಸೂರು, ಧಾರವಾಡ, ಕಲಬುರ್ಗಿ, ಶಿವಮೊಗ್ಗ ರಂಗಾಯಣದ ನಿರ್ದೇಶಕರನ್ನು ನೇಮಕ ಮಾಡುವಲ್ಲಿ ಪ್ರಮುಖಪಾತ್ರ ವಹಿಸುತ್ತಾರೆ. ಪ್ರತಿ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಮೂವರು ಹೆಸರನ್ನು ಈ ತಂಡ ಶಿಫಾರಸು ಮಾಡಲಿದ್ದು, ಸರ್ಕಾರ ಒಬ್ಬರನ್ನು ಆಯ್ಕೆಮಾಡಿಕೊಂಡು ನೇಮಕ ಮಾಡುತ್ತದೆ. ನೇಮಕಗೊಂಡ ನಿರ್ದೇಶಕರ ನೇತೃತ್ವದಲ್ಲಿ ರಂಗಸಮಾಜದ ಸದಸ್ಯರು ರಂಗಾಯಣದ ರಂಗ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT